ಆ್ಯಪ್ನಗರ

ಹೈವೋಲ್ಟೇಜ್‌ನಿಂದ ಹಾನಿ:

ಕಾರವಾರ : ಹೈವೋಲ್ಟೇಜ್‌ ವಿದ್ಯುತ್‌ ಪ್ರವಾಹದಿಂದ ನಗರದ ಕೋಣೆವಾಡಾದ ಹೆಸ್ಕಾಂ ಕಚೇರಿಯ ಎದುರಿನ ನಾಲ್ಕೈದು ಮನೆಗಳಿಗೆ ವಿದ್ಯುತ್‌ ತಂತಿ ತಗುಲಿದ ಪರಿಣಾಮ ಪೀಠೋಪಕರಣಗಳಿಗೆ ಹಾನಿಯಾದ ಘಟನೆ ಮಂಗಳವಾರ ನಡೆದಿದೆ.

Vijaya Karnataka 16 Jan 2019, 5:00 am
ಕಾರವಾರ : ಹೈವೋಲ್ಟೇಜ್‌ ವಿದ್ಯುತ್‌ ಪ್ರವಾಹದಿಂದ ನಗರದ ಕೋಣೆವಾಡಾದ ಹೆಸ್ಕಾಂ ಕಚೇರಿಯ ಎದುರಿನ ನಾಲ್ಕೈದು ಮನೆಗಳಿಗೆ ವಿದ್ಯುತ್‌ ತಂತಿ ತಗುಲಿದ ಪರಿಣಾಮ ಪೀಠೋಪಕರಣಗಳಿಗೆ ಹಾನಿಯಾದ ಘಟನೆ ಮಂಗಳವಾರ ನಡೆದಿದೆ.
Vijaya Karnataka Web KWR-15GAJA4


ಮನೆಯಲ್ಲಿನ ವಿದ್ಯುತ್‌ ಉಪಕರಣಗಳು ಸುಟ್ಟು ಹೋದ ಹಿನ್ನಲೆಯಲ್ಲಿ ಸ್ಥಳೀಯ ಜನರು ಹೆಸ್ಕಾಂ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿದ್ಯುತ್‌ ತಂತಿಗಳಿಂದ ಏಕಾಏಕಿ ಹೈವೋಲ್ಟೇಜ್‌ ವಿದ್ಯುತ್‌ ಸಂಪರ್ಕವಾಗಿ ಗ್ರೈಂಡರ್‌, ಮಿಕ್ಸರ್‌, ಟಿ.ವಿ, ಫ್ರಿಡ್ಜ್‌ ಸೇರಿದಂತೆ ವಿವಿಧ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ಮಾಧ್ಯಮದವರಿಗೆ ಮಾಹಿತಿ ನೀಡಿದ ಸ್ಥಳೀಯರು, ಹೆಸ್ಕಾಂ ಕಚೇರಿ ಸಮೀಪದಲ್ಲೇ ಇದ್ದುದರಿಂದ ಒಮ್ಮೆ ಪರಿಶೀಲನೆ ನಡೆಸುವಂತೆ ವಿಭಾಗೀಯ ಅಧಿಕಾರಿಗೆ ತಿಳಿಸಿದೆವು. ಆದರೆ, ಅವರು ತಮ್ಮಿಂದ ಸಾಧ್ಯವಿಲ್ಲ ಎಂದು ಕಾರಣವನ್ನೂ ತಿಳಿಸದೇ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಹೆಸ್ಕಾಂ ಅಧಿಕಾರಿಯೊಬ್ಬರು ಹೆಸ್ಕಾಂ ಕಚೇರಿಯ ಬಳಿ ಒಂದು ಟ್ರಾನ್ಸ್‌ಫಾರ್ಮರ್‌ ಇತ್ತು. ಈಗ ಕಚೇರಿ ಎದುರಿನ ಕಾಲೊನಿಯಲ್ಲಿ ಹೊಸದಾಗಿ ಇನ್ನೊಂದು ಟ್ರಾನ್ಸ್‌ಫಾರ್ಮರ್‌ನ್ನು ಅಳವಡಿಲಾಗಿದೆ. ಬೆಳಿಗ್ಗೆ ಹಳೆಯ ಟ್ರಾನ್ಸ್‌ಫಾರ್ಮರ್‌ನಿಂದ ಹೊಸದಕ್ಕೆ ವಿದ್ಯುತ್‌ ಹರಿಸುವ ವೇಳೆ ಹೈವೋಲ್ಟೇಜ್‌ ಬಂದಿರಬೇಕು ಎಂದು ಹೇಳಿ ಜಾರಿಕೊಂಡರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ