Please enable javascript.ಆರೋಗ್ಯ ಅರಿವು, ವಿಶೇಷ ಉಪನ್ಯಾಸ - Health awareness, a special lecture - Vijay Karnataka

ಆರೋಗ್ಯ ಅರಿವು, ವಿಶೇಷ ಉಪನ್ಯಾಸ

ವಿಕ ಸುದ್ದಿಲೋಕ 4 Jan 2017, 5:00 am
Subscribe

ಯಲ್ಲಾಪುರ:ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೆಡ್‌ ರಿಬ್ಬನ್‌ ಕ್ಲಬ್‌ನ ಸಹಯೋಗದಲ್ಲಿ ಆರೋಗ್ಯ ಅರಿವು ಮತ್ತು

health awareness a special lecture
ಆರೋಗ್ಯ ಅರಿವು, ವಿಶೇಷ ಉಪನ್ಯಾಸ

ಯಲ್ಲಾಪುರ:ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೆಡ್‌ ರಿಬ್ಬನ್‌ ಕ್ಲಬ್‌ನ ಸಹಯೋಗದಲ್ಲಿ ಆರೋಗ್ಯ ಅರಿವು ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ತಾಲೂಕು ಆಸ್ಪತ್ರೆಯ ನೇತ್ರತಜ್ಞರಾದ ಸೌಮ್ಯ ಕೆ.ವಿ. ಮಾತನಾಡಿ, ಯಾರು ಹೇಗೆ ಎಷ್ಟು ರಕ್ತದಾನ ಮಾಡಬಹುದು ಮತ್ತು ಇದರಿಂದಾಗುವ ಲಾಭಗಳೇನು ಎನ್ನುವ ಕುರಿತು ವಿವರಿಸಿದರು.

ರಕ್ತದಾನ ಮಾಡುವ ಮೂಲಕ ಪ್ರತಿಯೊಬ್ಬರೂ ಇನ್ನೊಂದು ಜೀವವನ್ನು ಉಳಿಸಲು ನೆರವಾಗುವುದರ ಜತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಪಾಲುದಾರನಾದ ಧನ್ಯತೆಯನ್ನು ಅನುಭವಿಸವಂತಾಗುತ್ತದೆ. ರಕ್ತದಾನದ ಕುರಿತಾದ ಮೂಢನಂಬಿಕೆಗಳನ್ನು ತೊಡೆದುಹಾಕಿ ಮಾನವೀಯ ನೆಲೆಯಲ್ಲಿ ಇತರರನ್ನು ನೋಡುವ ಮನೋಭಾವವನ್ನು ಇಂದಿನ ಪ್ರಜ್ಞಾವಂತ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಆರೋಗ್ಯ ಶಿಕ್ಷ ಣ ಶಿಕ್ಷ ಕರಾದ ಎಸ್‌.ಟಿ. ಭಟ್ಟ , ಎಚ್‌ಐವಿ ಏಡ್ಸ್‌- ಏಕೆ ? ಹೇಗೆ? ಕುರಿತು ಉಪನ್ಯಾಸ ನೀಡಿದರು. ಹಿರಿಯ ಉಪನ್ಯಾಸಕರಾದ ಸೈಯ್ಯದ ಅಬ್ದುಲ್‌ ಖಾದರ ಅಧ್ಯಕ್ಷ ತೆ ವಹಿಸಿದ್ದರು.

ಕೃಷ್ಣ ಭಟ್ಟ ಅಗ್ಗಶಿಮನೆ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಆಂಗ್ಲಭಾಷಾ ಉಪನ್ಯಾಸಕ ಜಿ.ಎಚ್‌. ನಾಯಕ ಸ್ವಾಗತಿಸಿದರು. ರೋಶನಿ ನಾಯ್ಕ ನಿರೂಪಿಸಿದರು. ಜೀವಶಾಸ್ತ್ರ ಉಪನ್ಯಾಸಕ ವಿಕಾಸ ಮೊಕಾಶಿ ವಂದಿಸಿದರು. ತಾಲೂಕಾ ಆಸ್ಪತ್ರೆಯವರು ಏರ್ಪಡಿಸಿದ್ದ 'ಹದಿ ಹರೆಯದ ಸಮಸ್ಯೆಗಳು' ಕುರಿತ ಪ್ರಬಂಧ ಸ್ಪರ್ಧೆ ವಿಜೇತರಿಗೆ ಮತ್ತು ರೆಡ್‌ ರಿಬ್ಬನ್‌ ಕ್ಲಬ್‌ನ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ 'ರಕ್ತದಾನದ ಮಹತ್ವ' ಕುರಿತು ನಡೆದ ಪ್ರಬಂಧ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ