ಆ್ಯಪ್ನಗರ

ಪರಿಸರ ಸ್ವಚ್ಛವಿದ್ದರೆ ಸ್ವಸ್ಥ ಸಮಾಜ

ಅಂಕೋಲಾ : ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಸ್ವಸ್ಥ ಸಮಾಜವನ್ನು ನಿರ್ಮಿಸಬಹುದು. ಈ ನಿಟ್ಟಿನಲ್ಲಿಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಪರಿಸರ ಜಾಗೃತಿ ಮೆರೆಯೋಣ ಎಂದು ಮುಖ್ಯಾಧ್ಯಾಪಕಿ ಗೀತಾ ನಾಯಕ ಹೇಳಿದರು.

Vijaya Karnataka 30 Sep 2019, 5:00 am
ಅಂಕೋಲಾ : ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಸ್ವಸ್ಥ ಸಮಾಜವನ್ನು ನಿರ್ಮಿಸಬಹುದು. ಈ ನಿಟ್ಟಿನಲ್ಲಿಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಪರಿಸರ ಜಾಗೃತಿ ಮೆರೆಯೋಣ ಎಂದು ಮುಖ್ಯಾಧ್ಯಾಪಕಿ ಗೀತಾ ನಾಯಕ ಹೇಳಿದರು.
Vijaya Karnataka Web healthy society if the environment is clean
ಪರಿಸರ ಸ್ವಚ್ಛವಿದ್ದರೆ ಸ್ವಸ್ಥ ಸಮಾಜ


ಅವರು ಕಾರೇಬೈಲ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಗ್ರಾಮ ನಿಸರ್ಗದ ಮಡಿಲಲ್ಲಿಇದೆ. ಈ ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ನಾಗರಾಜ್‌ ನಾಯಕ ಮಾತನಾಡಿ ವಿದ್ಯಾರ್ಥಿಗಳು ಸ್ವಚ್ಛತೆಯತ್ತ ಹೆಚ್ಚಿನ ಗಮನ ಹರಿಸಬೇಕು. ನಾವು ಸ್ವಚ್ಛವಾಗಿದ್ದರೆ ಆರೋಗ್ಯದಾಯಕ ಬದುಕು ನಮ್ಮದಾಗಬಲ್ಲದು ಎಂದರು.

ಗ್ರಾ.ಪಂ. ಸದಸ್ಯ ತಿಮ್ಮಣ್ಣ ಗೌಡ, ಪ್ರಮುಖರಾದ ಮಂಜುನಾಥ್‌ ನಾಯಕ, ಬೊಮ್ಮಯ್ಯ ಗೌಡ ಈಶ್ವರ ಗೌಡ, ಶಾಲಾ ಶಿಕ್ಷಕರಾದ ಉಷಾ ಶೇಟ, ಸರ್ಪವೇಣಿ ನಾಯಕ, ವೆಂಕಟೇಶ್‌ ನಾಯಕ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ