ಆ್ಯಪ್ನಗರ

ಭಾರಿ ಮಳೆಗೆ ಅಪಾರ ಹಾನಿ

ಜೊಯಿಡಾ : ತಾಲೂಕಿನಲ್ಲಿ ಮಂಗಳವಾರ ಅಕಾಲಿಕ ಮಳೆ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಗ್ರಾಮಿಣ ಭಾಗದಲ್ಲಿ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು ಕತ್ತಲೆ ಆವರಿಸಿದೆ. ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ.

Vijaya Karnataka 25 Apr 2019, 5:00 am
ಜೊಯಿಡಾ : ತಾಲೂಕಿನಲ್ಲಿ ಮಂಗಳವಾರ ಅಕಾಲಿಕ ಮಳೆ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಗ್ರಾಮಿಣ ಭಾಗದಲ್ಲಿ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು ಕತ್ತಲೆ ಆವರಿಸಿದೆ. ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ.
Vijaya Karnataka Web KWR-24JYD1


ಲೋಕಸಭಾ ಚುನಾವಣೆ ನಡೆಯುತ್ತಿರುವಾಗ ಕೊನೆಯ ಹಂತದ ಮತದಾನ ನಡೆಯುವ ಸಂದರ್ಭದಲ್ಲಿ ತಾಲೂಕಿನ ಹಲವೆಡೆ ಸಂಜೆಯ ಸಮಯ ಜೋರಾದ ಗಾಳಿ ಹಾಗೂ ಗುಡುಗು ಸಹಿತ ಮಳೆಯಾಗಿದೆ. ಇದರಿಂದ ಮತದಾನಕ್ಕೆ ಕೊನೆಯ ಹಂತದಲ್ಲಿ ಹೋಗುವವರಿಗೆ ಹಾಗೂ ಮತದಾನ ಮುಗಿಸಿ ಬರುವವರಿಗೆ ತೊಂದರೆ ಉಂಟಾಯಿತು.

ಕಾತೇಲಿ ಗ್ರಾ.ಪಂ ವ್ಯಾಪ್ತಿಯ ಹಪಕರ್ಣಿಯ ಮಹಾಂತೇಶ ರಾಮ ಲಾಂಡೇಕರ ಮನೆಯ ಚಾವಣಿ ಹಾರಿಹೋಗಿದ್ದು ಮನೆಯಲ್ಲಿದ್ದ ಸುಮಾರು 20 ಚೀಲ ಭತ್ತ. ಅಕ್ಕಿ ಸೇರಿದಂತೆ ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

ತಾಲೂಕಿನ ತೆಲೋಲಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭಾರಿ ಗಾತ್ರದ ಮರಗಳು ಉರುಳಿಬಿದ್ದು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ತಾಲೂಕಿನಲ್ಲಿ ಸುಮಾರು 50 ಕ್ಕೂ ಹೆಚ್ಚು ಕಂಬ ಮುರಿದಿರಬಹುದೆಂದು ಅಂದಾಜಿಸಲಾಗಿದೆ. ಹೆಸ್ಕಾಂ ಗ್ರಾಮಿಣ ಭಾಗದ ವಿದ್ಯುತ್‌ ಪೂರೈಕೆಯ ಲೈನ್‌ಗಳ ದುರಸ್ತಿ ಕೈಗೊಂಡಿದೆ.

ತೆಲೋಲಿ ಗ್ರಾಮದ ಮುಖ್ಯ ರಸ್ತೆಯ ಮೇಲೆ ಭಾರಿ ಗಾತ್ರದ ಮಾವಿನ ಮರ ಮುರಿದು ಬಿದ್ದಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಮೇಲೆ ಬಿದ್ದಿರುವ ಮರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ