ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ

ಕುಮಟಾ : ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೆ ಮುಟ್ಟಿದರೂ ಹುಟ್ಟಿದ ಊರು ಬೆಳೆದ ಪರಿಸರ ಮರೆಯಬಾರದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

Vijaya Karnataka 9 Oct 2019, 5:00 am
ಕುಮಟಾ : ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೆ ಮುಟ್ಟಿದರೂ ಹುಟ್ಟಿದ ಊರು ಬೆಳೆದ ಪರಿಸರ ಮರೆಯಬಾರದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
Vijaya Karnataka Web helping neighboring victims is commendable
ನೆರೆ ಸಂತ್ರಸ್ತರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ


ಪಟ್ಟಣದ ಬಿಜೆಪಿ ಕಚೇರಿಯಲ್ಲಿ25 ನೆರೆ ಸಂತ್ರಸ್ತರಿಗೆ ಬೆಂಗಳೂರಿನ ಇಲೆಕ್ಟ್ರಾನಿಕ್‌ ಸಿಟಿಯ ಕೆನರಾ ಗುರುಕುಲ ಶಿಕ್ಷಣ ಸಂಸ್ಥೆ ನೀಡಿದ ಧಾನ್ಯ, ಪರಿಕರಗಳು ಹಾಗೂ 5000 ರೂ. ಮೊತ್ತದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ನೆರೆಹೊರೆಯವರು ಅನ್ಯ ಪ್ರದೇಶದಲ್ಲಿಭೇಟಿಯಾದರೆ ಆತ್ಮೀಯತೆ ಹೆಚ್ಚಾಗುತ್ತದೆ. ನನ್ನ ಕ್ಷೇತ್ರದ ಹಳ್ಳಿ ಹೊದಕೆಯಲ್ಲಿಹುಟ್ಟಿ ಬೆಂಗಳೂರಿನಂತಹ ಮಹಾನಗರದಲ್ಲಿಸುಂದರ ಸುಸಜ್ಜಿತ ಶಾಲೆ ಕಟ್ಟಿ ನಡೆಸುವುದು ಸುಲಭದ ಮಾತಲ್ಲ. ಆದರೂ ಎಲ್ಲಸವಾಲುಗಳನ್ನು ಎದುರಿಸಿ ರಾಜೇಶ ನಾಯ್ಕ ಶಾಲೆ ನಡೆಸುತ್ತಿರುವುದು ನನಗೆ ಹೆಮ್ಮೆ ತಂದಿದೆ.

ಇವರು ಕಷ್ಟಪಟ್ಟು ದುಡಿದ ದುಡಿಮೆಯಲ್ಲಿನೆರೆ ಸಂತ್ರಸ್ತರಿಗಾಗಿ ಸಹಾಯ ಮಾಡುತ್ತಿರುವುದು ಅಭಿನಂದನಾರ್ಹ. ರಾಜ್ಯದೆಲ್ಲೆಡೆ ನೆರೆ ಪರಿಹಾರ ವಿತರಣೆಯ ಕುರಿತು ವಿಪಕ್ಷಗಳವರು ಟೀಕೆ ಟಿಪ್ಪಣಿ ಮಾಡುತ್ತಿವೆ. ಆದರೆ ಉತ್ತರ ಕನ್ನಡ ಜಿಲ್ಲೆಹಾಗೆ ಕುಮಟಾದಲ್ಲಿನೈಜ ಸಂತ್ರಸ್ತರನ್ನು ಗುರುತಿಸಿ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಹೀಗಾಗಿ ಇಲ್ಲಿಅಗತ್ಯ ಉಳ್ಳವರಿಗೆ ಪರಿಹಾರ ನೀಡುವ ಯಾವ ಗೊಂದಲಗಳೂ ಇಲ್ಲಎಂದರು.

ಬೆಂಗಳೂರಿನ ಕೆನರಾ ಗುರುಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿ, ಆಕಸ್ಮಿಕ ತೊಂದರೆಗೆ ತುತ್ತಾದವರಿಗೆ ಎಲ್ಲರೂ ಸಹಾಯ ಮಾಡಬೇಕು. ನೆರೆಯಿಂದ ಸಂಕಷ್ಟಕ್ಕೀಡಾದವರಿಗೆ ಮಾನವೀಯತೆ ತೋರುವುದು ನಮ್ಮ ಧರ್ಮ. ಸದ್ಯ ಕುಮಟಾದ 25 ನೆರೆ ಸಂತ್ರಸ್ತರಿಗೆ ಕಿರು ಸಹಾಯ ಮಾಡಿದ್ದೇವೆ. ಇದಕ್ಕೆ ವಿದ್ಯಾರ್ಥಿಗಳು ಮುಷ್ಟಿ ಅಕ್ಕಿಯನ್ನು ನೀಡಿದ್ದಾರೆ ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ಕುಮಾರ ಮಾರ್ಕಂಡೆ, ಬಿಜೆಪಿ ಹಿರಿಯ ಮುಖಂಡ ವಿನೋದ ಪ್ರಭು, ಎಂ.ಜಿ.ಭಟ್ಟ, ಪ್ರಶಾಂತ ನಾಯ್ಕ, ವಿನಾಯಕ ಭಟ್ಟ, ವಿಶ್ವನಾಥ ನಾಯ್ಕ, ಹೇಮಂತ ಗಾಂವಕರ, ಮಹಾಲಕ್ಷಿತ್ರ್ಮ, ಶ್ರೀಕಾಂತ ನಾಯ್ಕ ಹೊದಕೆ, ಎಂ.ಎಸ್‌.ನಾಯ್ಕ ಹೊದಕೆ ಮೊದಲಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ