ಆ್ಯಪ್ನಗರ

ಕಾರವಾರ: ಕರಾವಳಿ ಚೆಕ್‌ ಪೋಸ್ಟ್‌ನಲ್ಲಿ ಕೊರೊನಾ ಅಲರ್ಟ್‌

ಕೊರೊನಾ ವೈರಾಣು ಹರಡದಂತೆ ಜಿಲ್ಲೆಯಲ್ಲಿ ಬುಧವಾರದಿಂದ ಮತ್ತಷ್ಟು ಬಿಗಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ವಿವಿಧ ಚೆಕ್‌ ಪೋಸ್ಟ್‌ಗಳ ಮೂಲಕ ಜಿಲ್ಲೆಯೊಳಗೆ ಪ್ರವೇಶಿಸುವವರ ವಿವರಗಳನ್ನು ಕಲೆಹಾಕಲಾಗುತ್ತಿದೆ.

Vijaya Karnataka 18 Mar 2020, 11:28 pm
ಕಾರವಾರ: ಕೊರೊನಾ ವೈರಾಣು ಹರಡದಂತೆ ಜಿಲ್ಲೆಯಲ್ಲಿ ಬುಧವಾರದಿಂದ ಮತ್ತಷ್ಟು ಬಿಗಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ವಿವಿಧ ಚೆಕ್‌ ಪೋಸ್ಟ್‌ಗಳ ಮೂಲಕ ಜಿಲ್ಲೆಯೊಳಗೆ ಪ್ರವೇಶಿಸುವವರ ವಿವರಗಳನ್ನು ಕಲೆಹಾಕಲಾಗುತ್ತಿದೆ.
Vijaya Karnataka Web ಕೊರೊನಾ
ಕೊರೊನಾ


ಕೊರೋನಾ ಮೊದಲ ಹಂತದಲ್ಲಿ ವಿದೇಶದಿಂದ ಬಂದವರ ಮೇಲೆ ನಿಗಾ ಇಡಲಾಗುತ್ತಿತ್ತು. ಪ್ರಸ್ತುತ ಈ ವೈರಾಣು ರೋಗ ದೇಶದಲ್ಲಿಎರಡನೇ ಹಂತಕ್ಕೆ ಕಾಲಿಟ್ಟಿದೆ. ವಿದೇಶದಿಂದ ಬಂದವರ ಮೂಲಕ ಸ್ವದೇಶಿಯರಿಗೂ ರೋಗ ಹರಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿಹೊರ ಜಿಲ್ಲೆಮತ್ತು ಹೊರ ರಾಜ್ಯಗಳಿಂದ ಜಿಲ್ಲೆಯ ಗಡಿಯನ್ನು ಪ್ರವೇಶಿಸುವವರ ಮೇಲೆ ನಿಗಾ ಇಡುವುದು ಅನಿವಾರ್ಯವಾಗಿದೆ. ಕಾರವಾರ ತಾಲೂಕಿನ ಗೋವಾ ಗಡಿಯ ಮಾಜಾಳಿ ಚೆಕ್‌ ಪೋಸ್ಟ್‌, ಭಟ್ಕಳ, ಜೋಯಿಡಾ ಸೇರಿದಂತೆ ಎಲ್ಲ ಚೆಕ್‌ ಪೋಸ್ಟ್‌ಗಳ ಮೂಲಕ ಗಡಿಯೊಳಗೆ ಪ್ರವೇಶಿಸುವ ವಾಹನಗಳನ್ನು ತಡೆದು ಪ್ರಯಾಣಿಕರಿಂದ ವಿವಿಧ ವಿವರ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ವಿವರಗಳು ?

ಜಿಲ್ಲೆಯೊಳಗೆ ಪ್ರವೇಶಿಸುವವರು ಜಿಲ್ಲೆಗೆ ಯಾವ ಕಾರಣಕ್ಕೆ ಬರುತ್ತಿದ್ದಾರೆ ? ಅವರ ಮೂಲ ಸ್ಥಳ ಯಾವುದು ? ಯಾವ್ಯಾವ ಊರುಗಳ ಮೂಲಕ ಪ್ರಯಾಣಿಸಿದ್ದಾರೆ ?ಮತ್ತು ಅವರ ಆರೋಗ್ಯದ ಸ್ಥಿತಿಗತಿ ಏನಿದೆ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಕಾರ್ಯಕ್ಕೆ ಆರೋಗ್ಯ ಸಿಬ್ಬಂದಿಯ ಜತೆ ತಲಾ ಇಬ್ಬರು ಪೊಲೀಸ್‌ ಹಾಗೂ ಓರ್ವ ಹೋಂ ಗಾರ್ಡನ್ನು ಪ್ರತಿ ಚೆಕ್‌ಪೋಸ್ಟ್‌ಗೆ ನಿಯೋಜಿಸಲಾಗಿದೆ. ಪ್ರಯಾಣಿಕರಿಗೆ ಈ ಎಲ್ಲಮಾಹಿತಿಗಳನ್ನು ನೀಡಲು ಕೇವಲ 5-6 ನಿಮಿಷದ ಅವಧಿ ಸಾಕು. ಜಿ ಲ್ಲೆಗೆ ಪ್ರವೇಶಿಸುವ ಪ್ರಯಾಣಿಕರು ಮಾಹಿತಿ ನೀಡಲು ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಡಿಸಿ ಡಾ. ಹರೀಶಕುಮಾರ ಕೆ. ಅವರು ತಿಳಿಸಿದ್ದಾರೆ.

ಹಲವು ಬಸ್‌ ಬಂದ್‌

ಕಾರವಾರದಿಂದ ಗುಲ್ಬರ್ಗಾಕ್ಕೆ ತೆರಳುವ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಈಗ ಕೇವಲ ಲಿಂಗಸಗೂರುವರೆಗೆ ಮಾತ್ರ ತೆರಳುತ್ತಿದೆ. ಅಲ್ಲದೇ ಪ್ರತಿ ದಿನ ಸಂಜೆ ಬೆಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್‌ ಕೋಚ್‌ ಬಸ್‌ ಬಂದ್‌ ಮಾಡಲಾಗಿದೆ. ಅಲ್ಲದೇ ಕೆಲ ಹೊರ ರಾಜ್ಯಕ್ಕೆ ತೆರಳುವ ಬಸ್‌ಗಳ ಟ್ರಿಪ್‌ ಕಡಿಮೆಯಾಗಿದ್ದು ಕಾರವಾರ ವ್ಯಾಪ್ತಿಯಲ್ಲಿಸಂಸ್ಥೆಗೆ ಪ್ರತಿ ದಿನ ಸಹಸ್ರಾರು ರೂ. ನಷ್ಟವಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ