ಆ್ಯಪ್ನಗರ

ಮನೆ ಹಾನಿ: ಪರಿಹಾರ ಧನ ವಿತರಣೆ

ಯಲ್ಲಾಪುರ : ಪ್ರಸಕ್ತ ಸಾಲಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ, ತಾಲೂಕಿನ ವಿವಿಧ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಕಾಲಿಕ ಮಳೆ ಹಾಗೂ ಗಾಳಿಯಿಂದಾಗಿ ವಾಸದ ಮನೆಗಳು ಹಾನಿಯಾಗಿದ್ದವು. ಮನೆ ಹಾನಿಗೊಳಗಾದ ಸಂತ್ರಸ್ಥರಿಗೆ ತಹಸೀಲ್ದಾರ್‌ ಶಂಕರ್‌ ಜಿ.ಎಸ್‌. ಅವರು ಬುಧವಾರ ತುರ್ತು ಪರಿಹಾರ ಧನ ವಿತರಿಸಿದರು. ಒಟ್ಟು 10 ಜನರಿಗೆ 2,24,775 ರೂ.ಗಳ ಪರಿಹಾರ ಧನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

Vijaya Karnataka 16 May 2019, 5:00 am
ಯಲ್ಲಾಪುರ : ಪ್ರಸಕ್ತ ಸಾಲಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ, ತಾಲೂಕಿನ ವಿವಿಧ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಕಾಲಿಕ ಮಳೆ ಹಾಗೂ ಗಾಳಿಯಿಂದಾಗಿ ವಾಸದ ಮನೆಗಳು ಹಾನಿಯಾಗಿದ್ದವು. ಮನೆ ಹಾನಿಗೊಳಗಾದ ಸಂತ್ರಸ್ಥರಿಗೆ ತಹಸೀಲ್ದಾರ್‌ ಶಂಕರ್‌ ಜಿ.ಎಸ್‌. ಅವರು ಬುಧವಾರ ತುರ್ತು ಪರಿಹಾರ ಧನ ವಿತರಿಸಿದರು. ಒಟ್ಟು 10 ಜನರಿಗೆ 2,24,775 ರೂ.ಗಳ ಪರಿಹಾರ ಧನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
Vijaya Karnataka Web KWR-15 YLP 2

ತಾಲೂಕಿನ ಹುಣಸಗೇರಿ ಕಿರವತ್ತಿಯ ಹನುಮಂತ ಮಿರಾಶಿ, ಕಿರವತ್ತಿಯ ಶಿವಾಜಿ ರಾಮಾ ಮಿರಾಶಿ, ಬೈಲಂದೂರಿನ ಸುಮತಿ ಚವ್ಹಾಣ, ಗೇರಾಳದ ವಿಲಾಸಿ ಬಿಕ್ಕು ಪಾರ್ಕರ್‌, ಜನಶೆಟ್ಟಿಕೊಪ್ಪದ ದಯಾ ಸಿರೀಲ್‌ ಸಿದ್ದಿ, ಜನಶೆಟ್ಟಿಕೊಪ್ಪದ ಮಂಗಲಾ ಮಂಜುನಾಥ ಸಿದ್ದಿ, ಬೈಲಂದೂರಿನ ಸೋಮಲಿಂಗ ಪುನ್ನಪ್ಪಾ ಸೋಮಾಪುರಕರ್‌, ಗುಡಂದೂರಿನ ರವಳಪ್ಪಾ ಧಾರವಾಡಕರ್‌, ಗುಡಂದೂರಿನ ಭರತ್‌ ಮಹಾಬಲೇಶ್ವರ ಧಾರವಾಡಕರ್‌, ಹುಣಸಗೇರಿಯ ಅನಸೂಯಾ ಸೋಮಾಪುರಕರ್‌ ಅವರಿಗೆ ಪರಿಹಾರ ಧನವನ್ನು ವಿತರಿಸಲಾಯಿತು.

ತಹಸೀಲ್ದಾರ್‌ ಶಂಕರ್‌ ಜಿ.ಎಸ್‌. ಮಾತನಾಡಿ, ಅಕಾಲಿಕ ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ಮನೆಗಳಿಗೆ ಜಿಲ್ಲಾಧಿಕಾರಿಯವರ ಆದೇಶದಂತೆ ಪರಿಹಾರ ಧನ ವಿತರಿಸಲಾಗಿದೆ. ಮನೆ ಕುಸಿತ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ ಕಂದಾಯ ಅಧಿಕಾರಿಗಳ ವರದಿ ಪಡೆದು, ಪರಿಹಾರ ಧನವನ್ನು ಆರ್‌.ಟಿ.ಜಿ.ಎಸ್‌. ಮೂಲಕ ತಲುಪಿಸಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ