ಆ್ಯಪ್ನಗರ

ಗುಂಜಗೋಡು ಮನೆ ಕುಸಿತ ಪರಿಶೀಲಿಸಿದ ಕಾಗೇರಿ

ಸಿದ್ದಾಪುರ : ತಾಲೂಕಿನ ಬೇಡ್ಕಣಿ ಗ್ರಾ.ಪಂ. ವ್ಯಾಪ್ತಿಯ ಗುಂಜಗೋಡ ಹೆಗಡೆಮನೆಯಲ್ಲಿಮನೆಯ ಮುಂದೆ ಕುಸಿತ, ವಾಸ್ತವ್ಯದ ಮನೆ ಗೋಡೆ ಬಿರುಕು ಹಾಗೂ ಮನೆಯ ಹಿಂಭಾಗದ ಗುಡ್ಡ ಕುಸಿತವಾಗಿರುವುದನ್ನು ಇತ್ತೀಚೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಶೀಲಿಸಿದರು.

Vijaya Karnataka 8 Sep 2019, 5:00 am
ಸಿದ್ದಾಪುರ : ತಾಲೂಕಿನ ಬೇಡ್ಕಣಿ ಗ್ರಾ.ಪಂ. ವ್ಯಾಪ್ತಿಯ ಗುಂಜಗೋಡ ಹೆಗಡೆಮನೆಯಲ್ಲಿಮನೆಯ ಮುಂದೆ ಕುಸಿತ, ವಾಸ್ತವ್ಯದ ಮನೆ ಗೋಡೆ ಬಿರುಕು ಹಾಗೂ ಮನೆಯ ಹಿಂಭಾಗದ ಗುಡ್ಡ ಕುಸಿತವಾಗಿರುವುದನ್ನು ಇತ್ತೀಚೆಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಶೀಲಿಸಿದರು.
Vijaya Karnataka Web home recession
ಗುಂಜಗೋಡು ಮನೆ ಕುಸಿತ ಪರಿಶೀಲಿಸಿದ ಕಾಗೇರಿ


ಶ್ರೀಕಾಂತ ಸೀತಾರಾಮ ಹೆಗಡೆ, ಸದಾನಂದ ಎನ್‌. ಹೆಗಡೆ,ರಾಜು ನಾರಾಯಣ ಹೆಗಡೆ, ಚಂದ್ರು ನಾರಾಯಣ ಹೆಗಡೆ, ಶ್ರೀಧರ ಹೆಗಡೆ ಹಾಗೂ ಪುರುಷೋತ್ತಮ ಹೆಗಡೆ ಅವರ ವಾಸ್ತವ್ಯದ ಮನೆಯ ಹಿಂದಿನ ಗುಡ್ಡ ಕುಸಿದಿರುವುದರಿಂದ ಮನೆಗೆ ಧಕ್ಕೆ ಉಂಟಾಗಿದೆ. ಶ್ರೀಕಾಂತ ಹೆಗಡೆ ಅವರ ಮನೆಯ ಮುಂದಿನ ಅಂಗಳ, ಮನೆಯ ಗೋಡೆ ಬಿರಕು ಬಿಟ್ಟಿರುವುದನ್ನು ಪರಿಶೀಲಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಊರವರೊಂದಿಗೆ ಚರ್ಚಿಸಿ ಇಂತಹ ಮನೆಯಲ್ಲಿವಾಸ್ತವ್ಯಮಾಡುವುದು ಸೂಕ್ತ ಅಲ್ಲ. ಬೇರೆ ಕಡೆ ಮನೆ ಕಟ್ಟಲು ಜಾಗ ಗುರುತಿಸಿಕೊಡಿ. ಸರ್ಕಾರದಿಂದ ಮನೆ ನಿರ್ಮಿಸಿಕೊಳ್ಳುವುದಕ್ಕೆ ಸಹಕಾರ ನೀಡುವುದಕ್ಕೆ ಸೂಚಿಸುತ್ತೇನೆ ಎಂದು ಹೇಳಿದರು.

ಜಿ.ಪಂ. ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಎಂ.ಜಿ.ಹೆಗಡೆ ಗೆಜ್ಜೆ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಪ್ರಸನ್ನ ಹೆಗಡೆ ನೇರಗಾಲ, ತಹಸೀಲ್ದಾರ ಗೀತಾ ಸಿ.ಜಿ, ತಾಪಂ ಇಒ ದಿನೇಶ ಡಿ.ಈ. ಮುಂತಾಧವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ