ಆ್ಯಪ್ನಗರ

ತೋಟಗಾರಿಕೆ ಬೆಳೆ ಪುನಶ್ಚೇತನ ತರಬೇತಿ

ಶಿರಸಿ : ಇಲ್ಲಿಯ ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಮಹಾವಿದ್ಯಾಲಯ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿಸಿದ್ದಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿಅತಿವೃಷ್ಟಿಯಿಂದ ಹಾನಿಯಾದ ತೋಟಗಾರಿಕೆ ಬೆಳೆಗಳ ಪುನಶ್ಚೇತನ ಕುರಿತು ರೈತರಿಗೆ ತರಬೇತಿ ಮತ್ತು ಕ್ಷೇತ್ರ ಭೇಟಿಯ ಕಾರ್ಯಕ್ರಮ ನಡೆಸಲಾಯಿತು.

Vijaya Karnataka 22 Sep 2019, 5:00 am
ಶಿರಸಿ : ಇಲ್ಲಿಯ ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಮಹಾವಿದ್ಯಾಲಯ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿಸಿದ್ದಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿಅತಿವೃಷ್ಟಿಯಿಂದ ಹಾನಿಯಾದ ತೋಟಗಾರಿಕೆ ಬೆಳೆಗಳ ಪುನಶ್ಚೇತನ ಕುರಿತು ರೈತರಿಗೆ ತರಬೇತಿ ಮತ್ತು ಕ್ಷೇತ್ರ ಭೇಟಿಯ ಕಾರ್ಯಕ್ರಮ ನಡೆಸಲಾಯಿತು.
Vijaya Karnataka Web horticulture crop recovery training
ತೋಟಗಾರಿಕೆ ಬೆಳೆ ಪುನಶ್ಚೇತನ ತರಬೇತಿ

ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರಶಾಂತ, ಕಳೆದ ಎರಡು ತಿಂಗಳು ಸುರಿದ ಭಾರಿ ಮಳೆಯಿಂದ ಜಿಲ್ಲೆಯ ಅಡಕೆ ಮತ್ತು ಕಾಳುಮೆಣಸಿನಲ್ಲಿಕೊಳೆರೋಗ ಹೆಚ್ಚಾಗಿ ಕಂಡುಬಂದಿದೆ.

ಬೆಳೆ ಕಾಪಾಡಿಕೊಳ್ಳಲು ವೈಜ್ಞಾನಿಕ ರೋಗ ನಿರ್ವಹಣಾ ಕ್ರಮ ಅನುಸರಿಸಬೇಕು ಎಂದರು. ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಶಿವಕುಮಾರ್‌ ಕೆ.ಎಂ., ಅತಿವೃಷ್ಟಿಯಿಂದ ಹೆಚ್ಚಿನ ಫಲವತ್ತತೆಯ ಮಣ್ಣು ಸವಕಳಿಯಾಗಿ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆಯಾಗಿದೆ. ಬೆಳೆಗಳ ಪುನಶ್ಚೇತನ ಹಾಗೂ ಪೋಷಕಾಂಶಗಳ ನಿರ್ವಹಣೆ ಅಗತ್ಯ ಎಂದರು. ತೋಟಗಾರಿಕಾ ಹಿರಿಯ ಸಹಾಯ ನಿರ್ದೇಶಕ ಮಹಾಬಲೇಶ್ವರ ಹೆಗಡೆ ಪಾಲ್ಗೊಂಡರು. ಗೋವಿಂದರಾಜ ಹೆಗಡೆ ನಿರೂಪಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಅಡಕೆ ಮತ್ತು ಕಾಳುಮೆಣಸಿನ ತೋಟಗಳಿಗೆ ವಿಜ್ಞಾನಿಗಳ ಭೇಟಿದರು. ಬೆಳೆಗಳ ಪುನಶ್ಚೇತನಕ್ಕಾಗಿ ರೈತರಿಗೆ ಮಾರ್ಗದರ್ಶನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ