ಆ್ಯಪ್ನಗರ

ಹೋಟೆಲ್‌ ಓಪನ್‌, ಗ್ರಾಹಕರ ನಿರೀಕ್ಷೆ

ಕಾರವಾರ : ಜಿಲ್ಲೆಯ ಕರಾವಳಿಯಲ್ಲಿಬಹುತೇಕ ಹೋಟೆಲ್‌ಗಳು ಸೋಮವಾರ ಬಾಗಿಲು ತೆರೆದಿವೆ. ಮುಂದಿನ ದಿನಗಳಳ್ಲಿಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿಬರುವ ನಿರೀಕ್ಷೆ ಇದೆ ಎಂದು ಮಾಲೀಕರು ಆಶಾಭಾವ ವ್ಯಕ್ತಪಡಿಸಿದ್ದಾರೆ.

Vijaya Karnataka 9 Jun 2020, 5:00 am
ಕಾರವಾರ : ಜಿಲ್ಲೆಯ ಕರಾವಳಿಯಲ್ಲಿಬಹುತೇಕ ಹೋಟೆಲ್‌ಗಳು ಸೋಮವಾರ ಬಾಗಿಲು ತೆರೆದಿವೆ. ಮುಂದಿನ ದಿನಗಳಳ್ಲಿಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿಬರುವ ನಿರೀಕ್ಷೆ ಇದೆ ಎಂದು ಮಾಲೀಕರು ಆಶಾಭಾವ ವ್ಯಕ್ತಪಡಿಸಿದ್ದಾರೆ.
Vijaya Karnataka Web 8 GURUDATT 2B_24
ಕಾರವಾರದ ಹೆಚ್ಚಿನ ಹೊಟೇಲ್‌ಗಳಲ್ಲಿಸೋಮವಾರ ಗ್ರಾಹಕರು ಕಂಡುಬರಲಿಲ್ಲ


ಸರಕಾರದ ಅನುಮತಿಯ ಮೇರೆಗೆ ಹೋಟೆಲ್‌ಗಳು ಈ ವರೆಗೆ ಪಾರ್ಸಲ್‌ ಸೇವೆಯನ್ನು ಮಾತ್ರ ಒದಗಿಸುತ್ತಿದ್ದವು, ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿಸೇವೆ ನೀಡಲು ಆರಂಭಿಸಿವೆ. ಆದರೆ ಪ್ರವಾಸಿಗರನ್ನೇ ಹೆಚ್ಚಾಗಿ ಅವಲಂಭಿಸಿರುವ ಕರಾವಳಿ ಭಾಗದ ಹೋಟೆಲ್‌ಗಳಲ್ಲಿಪ್ರವಾಸೋದ್ಯಮ ಇನ್ನೂ ಚಿಗುರದ ಕಾರಣ ಮೊದಲ ದಿನ ಗ್ರಾಹಕರ ಕೊರತೆ ಎದುರಿಸುವಂತಾಯಿತು.

ಕಾರವಾರವೂ ಸೇರಿದಂತೆ ಕರಾವಳಿಯ ಬಹುತೇಕ ಹೊಟೇಲ್‌ಗಳು, ಮಹಾರಾಷ್ಟ್ರ ,ಗೋವಾ -ಮಂಗಳೂರು, ಹುಬ್ಬಳ್ಳಿ ನಡುವೆ ಸಂಚರಿಸುವ ಪ್ರಯಾಣಿಕರು ಮತ್ತು ಪ್ರವಾಸಿಗರನ್ನೇ ಹೆಚ್ಚಾಗಿ ಅವಲಂಭಿಸಿದೆ. ಆದರೆ ಅಂತಾರಾಜ್ಯ ಗಡಿಗಳು ಪೂರ್ಣ ಪ್ರಮಾಣದಲ್ಲಿತೆರೆದ ನಂತರ ಪ್ರವಾಸಿಗರು ಮತ್ತು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿಬರುವ ನಿರೀಕ್ಷೆ ಇದೆ. ಅಲ್ಲದೇ ಹೋಟೆಲ್‌ಗಳಲ್ಲಿಲಾಕ್‌ ಡೌನ್‌ ಪ್ರಾರಂಭವಾಗುತ್ತಿದ್ದಂತೆ ತಮ್ಮ ಊರುಗಳಿಗೆ ತೆರಳಿದ್ದ ಸಿಬ್ಬಂದಿ ಸಹ ಇನ್ನೂ ವಾಪಸ್‌ ಬಂದಿಲ್ಲ. ಹೋಟೆಲ್‌ ಉದ್ಯಮ ಮೊದಲಿನ ಲಯ ಕಂಡುಕೊಳ್ಳಲು ಇನ್ನೂ ಒಂದು ವಾರ ಕಾಲ ಬೇಕಾಗಬಹುದು ಎಂದು ಹೋಟೆಲ್‌ ಗಳ ಮಾಲೀಕರು ಮತ್ತು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.

ಕಾರವಾರದ ಕೆಲ ತ್ರಿ ಸ್ಟಾರ್‌ ಹೊಟೇಲ್‌ಗಳು ಜುಲೈ ಅಂತ್ಯದವರೆಗೂ ಬಾಗಿಲು ತೆರೆಯದಿರಲು ನಿರ್ಧರಿಸಿವೆ. ಸಣ್ಣ ಪುಟ್ಟ ಹೊಟೇಲ್‌, ಕೆಲವೇ ಕೆಲವು ಸ್ಥಳೀಯ ಗ್ರಾಹಕರು ಆಹಾರ ಸೇವಿಸುತ್ತಿರುವುದು ಕಂಡುಬಂದಿತು.

ಸರಕಾರ ಲಾಕ್‌ ಡೌನ್‌ ಅವಧಿಯಲ್ಲಿಆಸ್ತಿ ತೆರಿಗೆ ವಿನಾಯಿತಿ ನೀಡಬೇಕಿತ್ತು. ಆದರೆ ಶೇ.35ರಷ್ಟು ತೆರಿಗೆ ಹೆಚ್ಚು ಮಾಡಿವೆ. ಇನ್ನು ವಿದ್ಯುತ್‌ ಇಲಾಖೆ ಸಹ ಬಿಲ್‌ನಲ್ಲಿಶೇ. 40ರಷ್ಟು ರಿಯಾಯಿತಿ ನೀಡುವುದಾಗಿ ಆರಂಭದಲ್ಲಿತಿಳಿಸಿದ್ದರೂ ಕಾರ್ಯರೂಪಕ್ಕೆ ತಂದಿಲ್ಲ, ಇದರಿಂದ ಗ್ರಾಹಕರಿಲ್ಲದೇ ಸೊರಗಿರುವ ಆತಿಥ್ಯ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾರವಾರದ ಅಮೃತ್‌ ಹೊಟೇಲ್‌ ಮಾಲೀಕ ಭರತ್‌ ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ