ಆ್ಯಪ್ನಗರ

ಪರಿಸರ ರಕ್ಷಣೆ ಬೃಹತ್‌ ಜಾಗೃತಿ ಜಾಥಾ

ಮುಂಡಗೋಡ: ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ರಕ್ಷ ಣೆಯ ಕುರಿತು ಅರಣ್ಯ ಇಲಾಖೆಯ ನೇತೃತ್ವದಲ್ಲಿ ಬೃಹತ್‌ ಜಾಗೃತಿ ಜಾಥಾವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ನಡೆಸಲಾಯಿತು.

Vijaya Karnataka 18 Jun 2019, 5:00 am
ಮುಂಡಗೋಡ: ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ರಕ್ಷ ಣೆಯ ಕುರಿತು ಅರಣ್ಯ ಇಲಾಖೆಯ ನೇತೃತ್ವದಲ್ಲಿ ಬೃಹತ್‌ ಜಾಗೃತಿ ಜಾಥಾವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ನಡೆಸಲಾಯಿತು.
Vijaya Karnataka Web KWR-16MND1-


ಅರಣ್ಯ ಇಲಾಖೆ, ಶಿಕ್ಷ ಣ ಇಲಾಖೆ, ನ್ಯಾಯಾಲಯ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಾಗೃತಿ ಜಾಥಾವನ್ನು ನಡೆಸಲಾಯಿತು. ಪಟ್ಟಣದ ವಿವಿಧ ಪ್ರೌಢ ಶಾಲೆ ಹಾಗೂ ಕಾಲೇಜುಗಳಿಂದ ಎಂಟನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ್‌ ಕಚೇರಿಯಿಂದ ಆರಂಭಗೊಂಡ ಜಾಥಾ ಅರಣ್ಯ ಇಲಾಖೆಯ ಆವರಣದಲ್ಲಿ ಮುಕ್ತಾಯಗೊಳಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಉಪಹಾರ ವಿತರಿಸಿ ಪರಿಸರ ಹಾಗೂ ಮರಗಳ ಕುರಿತು ಮಾಹಿತಿಯುಳ್ಳ ಸಾಕ್ಷ ಚಿತ್ರವನ್ನು ತೋರಿಸಲಾಯಿತು. ನಂತರ ಇಲಾಖೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಈ ವೇಳೆ ಎಸಿಎಫ್‌. ಜಿ.ಆರ್‌.ಶಶಿಧರ, ತಹಸೀಲ್ದಾರ್‌ ಅಶೋಕ ಗುರಾಣಿ, ನ್ಯಾಯಾಧೀಶ ಈರನಗೌಡ ಕಬ್ಬೂರ, ಸಮಾಜ ಕಲ್ಯಾಣ ಅಧಿಕಾರಿ ಗೋಪಾಲಕೃಷ್ಣ, ಆರ್‌ಎಫ್‌ಒಗಳಾದ ಸುರೇಶ ಕಲ್ಲೋಳ್ಳಿ, ಅಜಯ ನಾಯ್ಕ, ಆರೋಗ್ಯ ಇಲಾಖೆಯ ಎಸ್‌.ಎಸ್‌.ಪಟ್ಟಣಶೆಟ್ಟಿ, ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ನಾಗರಾಜ ಕಲಾಲ, ಅರುಣಕುಮಾರ, ಶಂಕರ ಬಾಗೇವಾಡಿ, ಅರುಣಕುಮಾರ ಕಾಶಿ, ಶ್ರೀಶೈಲ್‌ ಐನಾಪುರ, ಫಕ್ಕೀರೇಶ ಸುಣಗಾರ ಹಾಗೂ ಅರಣ್ಯ ರಕ್ಷ ಕರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ