ಆ್ಯಪ್ನಗರ

ಮಾನವ ಹಕ್ಕುಗಳ ರಕ್ಷ ಣೆ ಸಮಾಜದ ಹೊಣೆ

ಅಂಕೋಲಾ : ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದರೆ ಅಪರಾಧಗಳ ಸಂಖ್ಯೆ ಇಳಿಕೆಯಾಗಲು ಸಾಧ್ಯವಿದೆ ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್‌ ನ್ಯಾಯಾಧೀಶ ಸುಹೇಲ ಅಹಮ್ಮದ ಎಸ್‌. ಕುನ್ನಿಭಾವಿ ಹೇಳಿದರು.

Vijaya Karnataka 12 Dec 2018, 5:00 am
ಅಂಕೋಲಾ : ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದರೆ ಅಪರಾಧಗಳ ಸಂಖ್ಯೆ ಇಳಿಕೆಯಾಗಲು ಸಾಧ್ಯವಿದೆ ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್‌ ನ್ಯಾಯಾಧೀಶ ಸುಹೇಲ ಅಹಮ್ಮದ ಎಸ್‌. ಕುನ್ನಿಭಾವಿ ಹೇಳಿದರು.
Vijaya Karnataka Web KWR-10ANK1


ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್‌ ಇಲಾಖೆ, ಗ್ರಾಮ ಪಂಚಾಯಿತಿ ಬೇಲೆಕೇರಿ ಇವರ ಆಶ್ರಯದಲ್ಲಿ ಬೇಲೆಕೇರಿಯ ಗ್ರಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ಚೆಕ್‌ ಬೌನ್ಸ್‌ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಒತ್ತಡಕ್ಕೆ ಸಿಲುಕಿ ಬ್ಲ್ಯಾಂಕ್‌ ಚೆಕ್‌ ನೀಡಿ ಸಾಲ ಪಡೆಯುತ್ತೀರಿ. ಆದರೆ ಅದರ ದುರ್ಬಳಕೆಯಾಗಿ ವ್ಯಥೆ ಪಡುವ ಪರಿಸ್ಥಿತಿ ಎದುರಾಗುತ್ತದೆ ಎಂದರು.

ಅಂಕೋಲಾ ಪೊಲೀಸ್‌ ಠಾಣೆಯ ಸಿಪಿಐ ಬಿ. ಪ್ರಮೋದಕುಮಾರ ಮಾತನಾಡಿ, ಪ್ರತಿಯೊಬ್ಬರಿಗೂ ಘನತೆ-ಗೌರವಗಳಿಂದ ಬದುಕುವ ಹಕ್ಕಿದೆ. ಸ್ವತಂತ್ರವಾಗಿ ಜೀವನ ನಡೆಸುವ, ಸಂಚರಿಸುವ, ಆಲೋಚಿಸುವ ಹಕ್ಕಿದೆ. ಇದನ್ನೆ ಮಾನವ ಹಕ್ಕು ಎನ್ನುತ್ತೇವೆ. ಮಾನವ ಹಕ್ಕುಗಳ ರಕ್ಷ ಣೆ ನಾಗರಿಕ ಸಮಾಜದ ಹೊಣೆಯಾಗಿದ್ದು, ಇದು ಉಲ್ಲಂಘನೆಯಾದಲ್ಲಿ ನ್ಯಾಯಾಂಗ- ಕಾರ್ಯಾಂಗ ತಮ್ಮ ಬೆನ್ನಿಗೆ ಇದೆ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.

ಎಸ್‌ಬಿಐ ವ್ಯವಸ್ಥಾಪಕ ಎಂ.ವಿ. ರಮೇಶ ಮಾತನಾಡಿ, ಜನರು ಮೀಟರ್‌ ಬಡ್ಡಿಯ ಕೂಪಕ್ಕೆ ಬಿದ್ದು ತಮ್ಮ ಬದುಕನ್ನ ಅಂಧಕಾರಕ್ಕೆ ತಳ್ಳಿಕೊಳ್ಳುತ್ತಿದ್ದಾರೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲೂ ಅಮೂಲಾಗ್ರ ಬದಲಾವಣೆಯಾಗಿದೆ. ಬ್ಯಾಂಕ್‌ಗಳ ಮೂಲಕ ಸಾಲ ಪಡೆದುಕೊಂಡು ಜೀವನ ಮಟ್ಟ ಅಭಿವೃದ್ಧಿ ಪಡಿಸಿಕೊಳ್ಳಿ ಎಂದರು. ವಕೀಲರ ಸಂಘದ ಅಧ್ಯಕ್ಷ ಗುರು ನಾಯ್ಕ ಅಧ್ಯಕ್ಷ ತೆವಹಿಸಿ ಮಾತನಾಡಿದರು. ಪಿಡಿಒ ಗಿರೀಶ ತಳವಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾನವ ಹಕ್ಕುಗಳ ವಿಷಯದ ಕುರಿತು ನ್ಯಾಯವಾದಿ ಉಮೇಶ ನಾಯ್ಕ ಉಪನ್ಯಾಸ ನೀಡಿದರು. ನ್ಯಾಯವಾದಿ ನಾಗಾನಂದ ಬಂಟ ನಿರೂಪಿಸಿದರು. ನ್ಯಾಯವಾದಿ ಸುರೇಶ ಬಾನಾವಳಿಕರ ಸ್ವಾಗತಿಸಿದರು. ನ್ಯಾಯವಾದಿ ಸಂಪದಾ ಗುನಗಾ ವಂದಿಸಿದರು.

ಪಿಎಸೈ ಶ್ರೀಧರ ಎಸ್‌.ಆರ್‌. ಪ್ರೊಬೆಷನರಿ ಪಿಎಸೈಗಳಾದ ಸಿದ್ದು ಗುಡಿ, ಅನಿಲ ಮಾದರ, ಪೊಲೀಸ ಸಿಬ್ಬಂದಿಗಳಾದ ಗೋರಕನಾಥ ರಾಣೆ, ಸತೀಶ ನಾಯ್ಕ, ಜಗದೀಶ ನಾಯ್ಕ, ವಿವೇಕ ನಾಯಕ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ