ಆ್ಯಪ್ನಗರ

ನೂರಾರು ಮಾಸ್ಕ್‌ ತಯಾರಿಸಿದ ಮಾತೆ

ಶಿರಸಿ : ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೊನಾ ಕಾಯಿಲೆ ನಿಯಂತ್ರಣದ ಸಂದರ್ಭದಲ್ಲಿ ಅನೇಕರು ನಾನಾ ರೀತಿಯಲ್ಲಿಸೇವಾ ಚಟುವಟಿಕೆಗಳಲ್ಲಿತೊಡಗಿಕೊಂಡಿದ್ದಾರೆ.

Vijaya Karnataka 3 Jun 2020, 5:00 am
ಶಿರಸಿ : ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೊನಾ ಕಾಯಿಲೆ ನಿಯಂತ್ರಣದ ಸಂದರ್ಭದಲ್ಲಿ ಅನೇಕರು ನಾನಾ ರೀತಿಯಲ್ಲಿ ಸೇವಾ ಚಟುವಟಿಕೆಗಳಲ್ಲಿತೊಡಗಿಕೊಂಡಿದ್ದಾರೆ.
Vijaya Karnataka Web hundreds of masks
ನೂರಾರು ಮಾಸ್ಕ್‌ ತಯಾರಿಸಿದ ಮಾತೆ


ಇಲ್ಲೊಬ್ಬರು ಮಹಿಳೆ ನೂರಾರು ಮಾಸ್ಕ್‌ ಗಳನ್ನು ಸ್ವತಃ ತಯಾರಿಸಿ ಪೊಲೀಸ್‌ ಸಿಬ್ಬಂದಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಹಳ್ಳಿಗರಿಗೆ ಉಚಿತವಾಗಿ ವಿತರಿಸುತ್ತಿರುವುದು ವಿಶೇಷವಾಗಿದೆ.

ಶಿರಸಿ ತಾಲೂಕಿನ ರೇವಣಕಟ್ಟಾ ಕೊಪ್ಪಲತೋಟ ಹಳ್ಳಿಯ ಅನಸೂಯಾ ಗಣಪತಿ ಭಟ್ಟ ಹೀಗೆ ಅನುಕರಣೀಯ ಕಾರ್ಯ ಮಾಡುತ್ತಿದ್ದಾರೆ.

ಈಗಾಗಲೇ 400ಕ್ಕೂ ಹೆಚ್ಚು ಮಾಸ್ಕ್‌ ಗಳನ್ನು ಮನೆಯಲ್ಲಿ ಹೊಲಿಗೆ ಮಾಡಿದ್ದಾರೆ. ಹೊಚ್ಚಹೊಸದಾದ ಲುಂಗಿ-ಶಾಲು ಮಾದರಿಯ ಬಿಳಿ ಬಟ್ಟೆ ಅದಕ್ಕೇ ಬಳಸಿದ್ದಾರೆ. ಮಕ್ಕಳು ಮತ್ತಿತರರಿಗೆ ಬಣ್ಣದ ಮಾಸ್ಕ್‌ ತಯಾರಿಸಿಕೊಟ್ಟಿದ್ದಾರೆ.

ರೇವಣಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರ, ಅಮ್ಮಿನಳ್ಳಿ ಪೊಲೀಸ್‌ ಉಪಠಾಣೆ ಮತ್ತು ಜಾನ್ಮನೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ನೀಡಿದ್ದಾರೆ.

ಕ್ರಿಯಾಶೀಲತೆ.... ಅನಸೂಯಾ ಭಟ್ಟ ಇನ್ನಷ್ಟು ಕ್ಷೇತ್ರದಲ್ಲಿದ್ದು ಭಜನ ಸುಮ ಕೃತಿ ರಚಿಸಿದ್ದಾರೆ. ಸಂಪಖಂಡ ರಾಮಕೃಷ್ಣ ಪರಮಹಂಸ ಭಜನಾ ಮಂಡಳಿ ಅಧ್ಯಕ್ಷೆಯಾಗಿದ್ದಾರೆ.

ಯುವತಿ ಕೊಡುಗೆ.. ಇದೇ ಮಾದರಿಯಲ್ಲಿಸಿದ್ದಾಪುರ ತಾಲೂಕಿನ ಕಂಚಿಕೈ ಇಟ್ಲೋಣಿ ಊರಿನ ಚೈತ್ರಾ ಗೋಪಾಲ ಜೋಶಿ ಎಂಬ ಯುವತಿ ಮಾಸ್ಕಗಳನ್ನು ತಯಾರಿಸಿ ಗ್ರಾಮಸ್ಥರಿಗೆ ಉಚಿತವಾಗಿ ನೀಡುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ