ಆ್ಯಪ್ನಗರ

ಕಾಡಿದ್ದರೆ ಮಾತ್ರ ನಾಡು, ನಾಡಿದ್ದರೆ ನಾವು

ಅಂಕೋಲಾ : ಪ್ರಸ್ತುತ ಪರಿಸರದ ಸನ್ನಿವೇಶ ಗಮನಿಸಿದರೆ ಪರಿಸರ ಯಾವ ಸ್ಥಿತಿಗೆ ತಲುಪಿದೆ ಎನ್ನುವುದು ಕಂಡುಬರುತ್ತದೆ. ಎಂದೂ ಕಂಡರಿಯದ ನೀರಿನ ಅಭಾವ ಈ ವರ್ಷ ಎದುರಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಸುಹೇಲ್‌ ಅಹಮದ್‌ ಎಸ್‌. ಕುನ್ನಿಭಾವಿ ಹೇಳಿದರು.

Vijaya Karnataka 14 Jun 2019, 5:00 am
ಅಂಕೋಲಾ : ಪ್ರಸ್ತುತ ಪರಿಸರದ ಸನ್ನಿವೇಶ ಗಮನಿಸಿದರೆ ಪರಿಸರ ಯಾವ ಸ್ಥಿತಿಗೆ ತಲುಪಿದೆ ಎನ್ನುವುದು ಕಂಡುಬರುತ್ತದೆ. ಎಂದೂ ಕಂಡರಿಯದ ನೀರಿನ ಅಭಾವ ಈ ವರ್ಷ ಎದುರಾಗಿದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಸುಹೇಲ್‌ ಅಹಮದ್‌ ಎಸ್‌. ಕುನ್ನಿಭಾವಿ ಹೇಳಿದರು.
Vijaya Karnataka Web if there is only a forest we are here
ಕಾಡಿದ್ದರೆ ಮಾತ್ರ ನಾಡು, ನಾಡಿದ್ದರೆ ನಾವು


ತಾಲೂಕಾ ಕಾನೂನು ಸೇವಾ ಸಮಿತಿ ಅಂಕೋಲಾ, ವಕೀಲರ ಸಂಘ ಅಂಕೋಲಾ ಇವರ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಉಚಿತವಾಗಿ ಕಸಿ ಮಾಡಿದ ಸಸಿಗಳನ್ನು ವಿತರಿಸಿ ಮಾತನಾಡಿದರು.

ಅರಣ್ಯ ನಾಶ, ಪರಿಸರ ಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕುಡಿಯುವ ನೀರೂ ಕೂಡ ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಆವರಣದಲ್ಲಿ ಒಂದೇ ಒಂದು ಗಿಡವನ್ನಾದರೂ ನೆಟ್ಟು ಅದರ ರಕ್ಷ ಣೆ ಮಾಡಿ ಪರಿಸರವನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯಿದೆ. ಗಿಡ ಮರಗಳನ್ನು ಬೆಳೆಸಲು ಮುಂದಾದರೆ ಮಾತ್ರ ಪರಿಸರ ಸಂರಕ್ಷ ಣೆಯಾಗುವುದರ ಜೊತೆಗೆ ನಮ್ಮ ಬದುಕಿಗೆ ಉತ್ತಮ ಆರೋಗ್ಯ ಲಭಿಸುತ್ತದೆ ಎಂದರು.

ಜೆಎಂಎಫ್‌ಸಿ ನ್ಯಾಯಾಧೀಶ ರಂಗಸ್ವಾಮಿ ಜೆ. ಮಾತನಾಡಿ, ಮನಕುಲದ ಉಳಿವಿಗಾಗಿ ನಾವುಗಳು ಗಿಡವನ್ನು ನೆಟ್ಟು ಅದರ ಪೋಷಣೆಗೆ ಕಂಕಣಬದ್ದರಾಗಬೇಕು ಎಂದರು. ಸಿವಿಲ್‌ ಹೆಚ್ಚುವರಿ ನ್ಯಾಯಾಧೀಶ ರಾಜು ಕೆ. ಶೇಡಬಾಳಕರ ಮಾತನಾಡಿ, ಅರಣ್ಯವನ್ನು ಬೆಳೆಸಿ, ಸಂರಕ್ಷ ಣೆ ಮಾಡುವ ಹೊಣೆ ಕೇವಲ ಅರಣ್ಯ ಇಲಾಖೆಯದ್ದಲ್ಲ, ನಮ್ಮೆಲ್ಲರ ಹೊಣೆ ಎಂದರು.

ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ನಂಜುಡಪ್ಪ ಹೆಚ್‌.ಬಿ ಮಾತನಾಡಿ, ಭೂ ಮಂಡಲದ ತಾಪಮಾನ ದಿನೇದಿನೇ ಏರುತ್ತಿದ್ದು, ಪರಿಸರ ಕಲುಷಿತಗೊಳ್ಳುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಾಡಿದ್ದರೆ ಮಾತ್ರ ನಾಡು, ನಾಡಿದ್ದರೆ ನಾವುಗಳು ಎನ್ನುವುದನ್ನು ಅರಿತು, ಗಿಡ ಮರಳಗಳನ್ನು ಬೆಳೆಸಲು ನಮ್ಮ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಗಜಾನನ ಎನ್‌.ನಾಯ್ಕ ಅಧ್ಯಕ್ಷ ತೆವಹಿಸಿ ಮಾತನಾಡಿದರು.

ನ್ಯಾಯಾವಾದಿಗಳಾದ ಪಿ.ಎಂ.ನಾಯಕ, ಶಾಂತಾ ಹೆಗಡೆ, ಗುರು ವಿ. ನಾಯ್ಕ, ಉಮೇಶ ಎನ್‌.ನಾಯ್ಕ, ನಾಗಾನಂದ ಐ. ಬಂಟ,

ವಕೀಲರ ಸಂಘದ ಖಂಜಾಚಿ ಪ್ರತಿಭಾ ಎಲ್‌.ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಬಾನವಳಿಕರ ನಿರೂಪಿಸಿದರು. ಉಪಾಧ್ಯಕ್ಷೆ ಸಂಪದಾ ಗುನಗಾ ವಂದಿಸಿದರು. ಕಾರ್ಯಕ್ರಮದಲ್ಲಿ ವಕೀಲರಾದ ನಿತ್ಯಾನಂದ ಕವರಿ, ಬಿ.ಡಿ.ನಾಯ್ಕ, ಎಸ್‌.ಎಚ್‌.ನಾಯಕ, ಎಂ.ಪಿ.ಭಟ್‌, ನಾರಾಯಣ ನಾಯಕ, ವಿ.ಎಸ್‌. ನಾಯಕ, ವಿನೋದ ಶಾನಭಾಗ, ಮಮತಾ ಕೆರೆಮನೆ, ಎ.ಎನ್‌.ತಲಗೇರಿ, ಎಸ್‌.ಆರ್‌.ಗಾಳಿ, ಎನ್‌.ಎಸ್‌. ನಾಯಕ, ಆರ್‌.ಟಿ.ಗೌಡ ಹಾಗೂ ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ