ಆ್ಯಪ್ನಗರ

ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ :ಆರೋಪ

ಹೊನ್ನಾವರ :ತಾಲೂಕಿನ ಕೆಳಗಿನೂರಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ನಡೆಸುತ್ತಿರುವ ಐಆರ್‌ಬಿ ಕಂಪನಿ ಭೂ ಸ್ವಾಧೀನತೆಗೆ ಒಳಪಡದ ತನ್ನ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಧ್ವಂಸಗೊಳಿಸಿದ್ದು 5 ಲಕ್ಷ ರೂ. ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ಸ್ಥಳೀಯ ನಿವಾಸಿ ಶ್ರೀಧರ ನಾರಾಯಣ ಹೆಗಡೆ ಆಗ್ರಹಿಸಿದ್ದಾರೆ.

Vijaya Karnataka 4 Jun 2018, 5:00 am
ಹೊನ್ನಾವರ :ತಾಲೂಕಿನ ಕೆಳಗಿನೂರಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ನಡೆಸುತ್ತಿರುವ ಐಆರ್‌ಬಿ ಕಂಪನಿ ಭೂ ಸ್ವಾಧೀನತೆಗೆ ಒಳಪಡದ ತನ್ನ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಧ್ವಂಸಗೊಳಿಸಿದ್ದು 5 ಲಕ್ಷ ರೂ. ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ಸ್ಥಳೀಯ ನಿವಾಸಿ ಶ್ರೀಧರ ನಾರಾಯಣ ಹೆಗಡೆ ಆಗ್ರಹಿಸಿದ್ದಾರೆ.
Vijaya Karnataka Web illegal entry into maliki land accused
ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ :ಆರೋಪ

ಈ ಬಗ್ಗೆ ವಿಚಾರಿಸಿದರೆ ಕಂಪನಿಯವರು ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ. ಒಟ್ಟಾರೆ ಇಬ್ಬರೂ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಳಗಿನೂರು ಗ್ರಾಮದ ಸರ್ವೇ ನಂಬರ್‌ 398ರ ತನ್ನ ಕ್ಷೇತ್ರ ರಾಷ್ಟ್ರೀಯ ಹೆದ್ದಾರಿಯಿಂದ ದೂರವಿದ್ದು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಎಕ್ವಾಯರ್‌ ಆಗಿಲ್ಲ. ತಾನು ವೃತ್ತಿಯ ನಿಮಿತ್ತ ಊರಿನಲ್ಲಿಲ್ಲದ ಸಮಯದಲ್ಲಿ ಐಆರ್‌ಬಿ ಕಂಪನಿಯ ಗುತ್ತಿಗೆದಾರರು ತನ್ನ ಕ್ಷೇತ್ರದಲ್ಲಿ 6 ಅಡಿ ಎತ್ತರವಿರುವ ಪಾಗಾರ ಕೆಡವಿದ್ದಾರೆ. ಸ್ಥಳದಲ್ಲಿದ್ದ ಫಲಕೊಡುತ್ತಿರುವ 30 ಗೇರು ಮರಗಳನ್ನು ನಾಶ ಮಾಡಿದ್ದಾರೆ. ಅತ್ಯಮೂಲ್ಯವಾದ ಆಯುರ್ವೇದಿಕ ಗಿಡಮೂಲಿಕೆ, ವನಸ್ಪತಿಗಳನ್ನು ನಾಶ ಮಾಡಿದ್ದಾರೆ. ಸ್ಥಳಕ್ಕೆ ಹೋಗುವ ರಸ್ತೆಯನ್ನು ನಿರ್ನಾಮ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ