ಆ್ಯಪ್ನಗರ

ಅಕ್ರಮ ಸಾರಾಯಿ ವಶ

ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಮದ್ಯ ಸಾಗಾಟ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೋಮವಾರ ದಾಳಿ ನಡೆಸಿ ಅಕ್ರಮ ಸಾರಾಯಿಯನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

Vijaya Karnataka 13 Mar 2019, 5:00 am
ಕಾರವಾರ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಮದ್ಯ ಸಾಗಾಟ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೋಮವಾರ ದಾಳಿ ನಡೆಸಿ ಅಕ್ರಮ ಸಾರಾಯಿಯನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
Vijaya Karnataka Web illegal procurement
ಅಕ್ರಮ ಸಾರಾಯಿ ವಶ


ಹಳಿಯಾಳ, ಹೊನ್ನಾವರ ಹಾಗೂ ಕುಮಟಾದಲ್ಲಿ ಅಬಕಾರಿ ಅಧಿಕಾರಿ,ಸಿಬ್ಬಂದಿಗಳ ತಂಡ ವ್ಯಾಪಕವಾಗಿ ದಾಳಿ ನಡೆಸಿ ಸುಮಾರು 2281.25 ಲೀ. ಅಕ್ರಮ ಮದ್ಯ ಹಾಗೂ 763.92 ಬಿಯರ್‌ ಬಾಟಲ್‌ಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಯಲ್ಲಾಪುರ ಮತ್ತು ದಾಂಡೇಲಿ ವಲಯ ಅಬಕಾರಿ ಸಿಬ್ಬಂದಿಗಳು ಹಳಿಯಾಳ ತಾಲೂಕಿನ ಮುರ್ಕವಾಡದ ಅಧಿಕೃತ ಲೈಸೆನ್ಸ್‌ ಹೊಂದಿರುವ ಬಾರ್‌ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಸ್ಟಾಕ್‌ನಲ್ಲಿ ಇರುವದಕ್ಕಿಂತ 3.14 ಲೀ. ಹೆಚ್ಚಿನ ಮದ್ಯ ಸಂಗ್ರಹಿಸಿಟ್ಟಿರುವುದನ್ನು ಪತ್ತೆ ಹಚ್ಚಿ ಬಾರ್‌ನಲ್ಲಿ ದಾಸ್ತಾನಿದ್ದ 12181.25 ಲೀ ಭಾರತೀಯ ಮದ್ಯ ಹಾಗೂ 748.81 ಲೀ ಬಿಯರ್‌ ಸಮೇತ ಒಟ್ಟು 2930.06 ಲೀ. ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.

ಹೊನ್ನಾವರ ವಲಯದ ಅಬಕಾರಿ ಸಿಬ್ಬಂದಿಗಳು ಅಕ್ರಮ ಮದ್ಯ ಸಾಗಾಟಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ಆತನಿಂದ 18.81 ಲೀ. ಮದ್ಯ ಹಾಗೂ 5.61 ಲೀ. ಬಿಯರ್‌ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಕುಮಟಾ ವಲಯ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಿ ಆತನಿಂದ 19.5ಲೀ. ಬಿಯರ್‌ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ