ಆ್ಯಪ್ನಗರ

ಆಸ್ಪತ್ರೆ ದಾರಿಗೆ ನಾಮಫಲಕ ಅಳವಡಿಕೆ

ಯಲ್ಲಾಪುರ : ಪಟ್ಟಣದ ಜೋಡುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ತಾಲೂಕು ಆರೋಗ್ಯ ಕೇಂದ್ರಕ್ಕೆ ಹೋಗುವ ಮಾರ್ಗದಲ್ಲಿ ನಾಮಫಲಕವಿಲ್ಲದೇ ಸಾರ್ವಜನಿಕರು ಆಸ್ಪತ್ರೆಗೆ ತೆರಳಲು ಪರದಾಡುವಂತಾಗಿತ್ತು. ಆದರೆ ಈಗ ಈ ಸಮಸ್ಯೆ ಪರಿಹಾರವಾಗಿದ್ದು, ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳುವ ಕೂಡುರಸ್ತೆಯ ಅಂಚಿನಲ್ಲಿ ಆಸ್ಪತ್ರೆಗೆ ತೆರಳುವ ದಾರಿ ಇದು ಎಂದು ಸೂಚಿಸಿ ನಾಮಫಲಕ ಅಳವಡಿಸಲಾಗಿದೆ.

Vijaya Karnataka 23 May 2019, 5:00 am
ಯಲ್ಲಾಪುರ : ಪಟ್ಟಣದ ಜೋಡುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ತಾಲೂಕು ಆರೋಗ್ಯ ಕೇಂದ್ರಕ್ಕೆ ಹೋಗುವ ಮಾರ್ಗದಲ್ಲಿ ನಾಮಫಲಕವಿಲ್ಲದೇ ಸಾರ್ವಜನಿಕರು ಆಸ್ಪತ್ರೆಗೆ ತೆರಳಲು ಪರದಾಡುವಂತಾಗಿತ್ತು. ಆದರೆ ಈಗ ಈ ಸಮಸ್ಯೆ ಪರಿಹಾರವಾಗಿದ್ದು, ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳುವ ಕೂಡುರಸ್ತೆಯ ಅಂಚಿನಲ್ಲಿ ಆಸ್ಪತ್ರೆಗೆ ತೆರಳುವ ದಾರಿ ಇದು ಎಂದು ಸೂಚಿಸಿ ನಾಮಫಲಕ ಅಳವಡಿಸಲಾಗಿದೆ.
Vijaya Karnataka Web KWR-22 YLP 3

ಇದು ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುವ ಹೊರ ಊರಿನ ಜನರಿಗೆ ಅನುಕೂಲವಾಗಿ ಪರಿಣಮಿಸಿದೆ. ನೆರೆಯ ತಾಲೂಕುಗಳಾದ ಮುಂಡಗೋಡ, ಕಲಘಟಗಿ ಹಾಗೂ ಹಳಿಯಾಳ ತಾಲೂಕಿನಿಂದಲೂ ಹಲವು ಜನರು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಹೀಗೆ ಹೊರ ಊರಿನಿಂದ ಆಗಮಿಸುವ ರೋಗಿಗಳಿಗೆ, ವೃದ್ಧರಿಗೆ, ಆಶಕ್ತರಿಗೆ ಸಮುದಾಯ ಕೇಂದ್ರಕ್ಕೆ ಹೋಗುವ ದಾರಿ ಯಾವುದೆಂದು ತಕ್ಷ ಣ ಗೊತ್ತಾಗದೇ ಗೊಂದಲ ಉಂಟಾಗುತ್ತಿತ್ತು. ಯಾರಾದರೂ ದಾರಿಹೋಕರನ್ನು ಕೇಳಿ ಅಥವಾ ಸುತ್ತು ಬಳಸಿ ಬಂದು ಆಸ್ಪತ್ರೆಗೆ ತೆರಳುವಂತಾಗಿತ್ತು. ಆದರೆ ಈಗ ಹೆದ್ದಾರಿಯಿಂದ ಕವಲೊಡೆದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ನಾಮಫಲಕ ಅಳವಡಿಸಲಾಗಿದ್ದು ಜನರಿಗೆ ಅನುಕೂಲವಾಗಿದೆ. ನಾಮಫಲಕವಿಲ್ಲದೆ ಆಸ್ಪತ್ರೆಗೆ ತೆರಳುವ ಜನರಿಗೆ ಗೊಂದಲ ಉಂಟಾಗುತ್ತಿದೆ ಎಂಬ ಕುರಿತು ಈ ಹಿಂದೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ