ಆ್ಯಪ್ನಗರ

ತಡೆಯಾಜ್ಞೆ, ಮೀನುಗಾರರ ಸಭೆ ರದ್ದು

ಕಾರವಾರ : ಸಾಗರಮಾಲಾ ಯೋಜನೆಯ ಕಾಮಗಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿಬೆಂಗಳೂರಿನ ವಿಕಾಸಸೌಧದಲ್ಲಿಜ.31ರಂದು ಮೀನುಗಾರರ ಜತೆ ನಡೆಸಲು ಉದ್ದೇಶಿಸಿದ್ದ ಸಭೆಯನ್ನು ರದ್ದು ಪಡಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಸಚಿವ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

Vijaya Karnataka 26 Jan 2020, 5:00 am
ಕಾರವಾರ : ಸಾಗರಮಾಲಾ ಯೋಜನೆಯ ಕಾಮಗಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿಬೆಂಗಳೂರಿನ ವಿಕಾಸಸೌಧದಲ್ಲಿಜ.31ರಂದು ಮೀನುಗಾರರ ಜತೆ ನಡೆಸಲು ಉದ್ದೇಶಿಸಿದ್ದ ಸಭೆಯನ್ನು ರದ್ದು ಪಡಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಸಚಿವ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.
Vijaya Karnataka Web injunction cancel the fishermens meeting
ತಡೆಯಾಜ್ಞೆ, ಮೀನುಗಾರರ ಸಭೆ ರದ್ದು


ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ಕಾಮಗಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ. ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ.

ಆದರೆ ಮಾಜಿ ಶಾಸಕ ಸತೀಶ ಸೈಲ್‌ ತಾವೇ ತಡೆಯಾಜ್ಞೆ ತಂದಿದ್ದಾಗಿ ಬೆನ್ನುತಟ್ಟಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಕಾಮಗಾರಿ ಶಿಲಾನ್ಯಾಸ ಮಾಡುವಾಗ ಅಧ್ಯಕ್ಷತೆ ವಹಿಸಿದ್ದು ಯಾಕಾಗಿ, ಆಗಲೇ ಕಾಮಗಾರಿಯನ್ನು ನಿಲ್ಲಿಸಬಹುದಿತ್ತು. ಅಧಿಕಾರದಲ್ಲಿಇರುವಾಗ ಕಾಣದ ದೋಷಗಳು ಈಗ ಹೇಗೆ ಕಂಡವು ? ಅಥವಾ ಆಗ ಜಾಣ ಕುರುಡುತನ ಪ್ರದರ್ಶಿಸಿದ್ದರೇ ? ಮೀನುಗಾರರ ಬದುಕಿನ ಜತೆ ಚೆಲ್ಲಾಟ ಆಡುವ ಇಂತಹ ಪ್ರವೃತ್ತಿಗೆ ಮೀನುಗಾರರು ಮಣೆ ಹಾಕಬಾರದು ಎಂದರು.

ತಾವೇ ಮುಂಚೂಣಿಯಲ್ಲಿನಿಂತು ಉದ್ಘಾಟನೆ ಸಮಾರಂಭ ನೆರವೇರಿಸಿದ ಮಾಜಿ ಶಾಸಕರು ಈಗ ಅದೇ ಯೋಜನೆಗೆ ತಡೆಯಾಜ್ಞೆ ತಂದಿರುವುದಾಗಿ ಹೇಳಿಕೊಳ್ಳುತ್ತಿರುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು. ಶಿಲಾನ್ಯಾಸ ನೆರವೇರಿಸಿದ ನಂತರ ಇಲ್ಲಿಯ ತನಕದ ಮೀನುಗಾರರ ನೋವು, ಸಂಕಟಕ್ಕೆ ಯಾರು ಹೊಣೆ ಎನ್ನುವುದು ತಿಳಿಯಬೇಕಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ