ಆ್ಯಪ್ನಗರ

ಮಾ.10ರಂದು ಅರ್ಥಾಂತರಂಗ ಸಂವಾದ

ಶಿರಸಿ : ನಗರದ ಯೋಗ ಮಂದಿರದಲ್ಲಿ ಅರ್ಥಾಂತರಂಗ ಕಾರ್ಯಕ್ರಮ ಮಾ.10ರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಪ್ರಬೋಧ ಯಕ್ಷ ಬಳಗವು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ಯಕ್ಷ ಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಸಂಘಟಿಸಿದೆ.

Vijaya Karnataka 7 Mar 2019, 5:00 am
ಶಿರಸಿ : ನಗರದ ಯೋಗ ಮಂದಿರದಲ್ಲಿ ಅರ್ಥಾಂತರಂಗ ಕಾರ್ಯಕ್ರಮ ಮಾ.10ರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಪ್ರಬೋಧ ಯಕ್ಷ ಬಳಗವು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ಯಕ್ಷ ಗಾನ ಅಕಾಡೆಮಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಸಂಘಟಿಸಿದೆ.
Vijaya Karnataka Web intergovernmental panel on march 10th
ಮಾ.10ರಂದು ಅರ್ಥಾಂತರಂಗ ಸಂವಾದ


ಯಕ್ಷ ಗಾನ ಅಕಾಡೆಮಿ ಸದಸ್ಯ ನಾಗರಾಜ ಜೋಶಿ ಉದ್ಘಾಟಿಸುವರು. ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅಧ್ಯಕ್ಷ ತೆ ವಹಿಸುವರು. ಯೋಗ ಮಂದಿರದ ಅಧ್ಯಕ್ಷ ಎಸ್‌.ಎನ್‌.ಹೆಗಡೆ, ಉಷಾ ಐನಕೈ ಪಾಲ್ಗೊಳ್ಳುವರು.

ಮಧ್ಯಾಹ್ನ 3ಕ್ಕೆ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್‌ ನಿರ್ದೇಶನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿರಿಬಾಗಿಲು ಸಾಂಸ್ಕೃತಿಕ ಪ್ರತಿಷ್ಠಾನದ ಭಾಗವತ ರಾಮಕೃಷ್ಣ ಮಯ್ಯ, ಚಂಡೆ ವಾದಕ ಆಡೂರು ಲಕ್ಷ್ಮೀನಾರಾಯಣ, ಚಂಡೆ ಮದ್ದಲೆ ವಾದಕ ಚಂದ್ರಶೇಖರ ಸರಪಾಡಿ, ರಾಷ್ಟ್ರ ಪ್ರಶಸ್ತಿ ಪಡೆದ ಕೆ.ಗೋವಿಂದ ಭಟ್ಟ, ತಾಳಮದ್ದಲೆ ಅರ್ಥಧಾರಿ ಹರೀಶ ಬೋಳಂತಿಮೊಗರು, ಯಕ್ಷ ಗಾನ ಕಲಾವಿದ ಈಶ್ವರ ಪ್ರಸಾದ ಧರ್ಮಸ್ಥಳ ಪಾಲ್ಗೊಳ್ಳುವರು. ಮಂಜುನಾಥ ಗೊರಮನೆ ನಿರ್ವಹಿಸಿಕೊಡಲಿದ್ದಾರೆ.

ಕಾರ್ಯಕ್ರಮಕ್ಕೆ ಯಕ್ಷ ಭಾರತಿ, ಯಕ್ಷ ಚೇತನ, ಯಕ್ಷ ಸಂಭ್ರಮ, ಯೋಗ ಮಂದಿರ, ಯಕ್ಷ ಕಿರಣ, ರಂಗ ಬಳಗ, ಕಾಶ್ಯಪ ಪ್ರತಿಷ್ಠಾನ, ಯಕ್ಷ ಗೆಜ್ಜೆ, ಆದರ್ಶ ವನಿತಾ ಸಮಾಜ, ಲಕ್ಷ್ಮೀ ಮಹಿಳಾ ತಾಳಮದ್ದಲೆ ಕೂಟ, ರಾಜೇಶ್ವರಿ ತಾಳಮದ್ದಲೆ ಕೂಟ, ವಿಜಯ ಕಲಾ ಬಳಗ, ಮಹಾಗಣಪತಿ ಯಕ್ಷ ಗಾನ ಮಂಡಳಿ, ಕಲಾ ಭಾಸ್ಕರ ಇಟಗಿ, ವೀರಾಂಜನೇಯ ಯಕ್ಷ ಗಾನ ಮಂಡಳಿ, ಅಭಿಮಾನ ಸಾಂಸ್ಕೃತಿಕ ವೇದಿಕೆ, ಭುವನೇಶ್ವರಿ ತಾಳಮದ್ದಲೆ ಕೂಟ, ನೆಬ್ಬೂರು ಪ್ರತಿಷ್ಠಾನ, ಅಭಿನವ ತಾಳಮದ್ದಲೆ ಕೂಟಗಳು ಸಹಕರಿಸಿವೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ