ಆ್ಯಪ್ನಗರ

ಮೃತನ ಕುಟುಂಬಕ್ಕೆ ಚೆಕ್‌ ವಿತರಣೆ

ಹಳಿಯಾಳ: ಮೂರು ದಿನಗಳ ಹಿಂದೆ ಮುರಕಟ್ಟಿ ಬಳಿ ಬೇಡ್ತಿ ನದಿಯ ಪ್ರವಾಹದಲ್ಲಿ ಮುಳುಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಸಕ ಆರ್‌.ವಿ.ದೇಶಪಾಂಡೆ ಅವರು ಶನಿವಾರ ಮುಂಜಾನೆ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Vijaya Karnataka 11 Aug 2019, 5:00 am
ಹಳಿಯಾಳ: ಮೂರು ದಿನಗಳ ಹಿಂದೆ ಮುರಕಟ್ಟಿ ಬಳಿ ಬೇಡ್ತಿ ನದಿಯ ಪ್ರವಾಹದಲ್ಲಿ ಮುಳುಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶಾಸಕ ಆರ್‌.ವಿ.ದೇಶಪಾಂಡೆ ಅವರು ಶನಿವಾರ ಮುಂಜಾನೆ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
Vijaya Karnataka Web KWR-10 HLY 1


ಮೃತ ವ್ಯಕ್ತಿ ಪಟ್ಟಣದ ಯಲ್ಲಾಪೂರ ನಾಕಾದ ಲಕ್ಷ್ಮೀಕೇರಿಯ ನಿವಾಸಿ ಮಹ್ಮದ ಜಮೀಲ್‌ ನದಾಫ್‌. ಈತನ ಕುಟುಂಬದ ಸದಸ್ಯರಿಗೆ ಸಮಾಧಾನ ಹೇಳಿದ ಶಾಸಕರು ಮೃತನ ಮಗಳ ಹೆಸರಿಗೆ ಹಣವನ್ನು ಠೇವಣಿ ಇಡುವಂತೆ ತಮ್ಮ ವೈಯಕ್ತಿಕ ಧನಸಹಾಯ ಮಾಡುವುದರ ಜತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯ 1 ಲಕ್ಷ ರೂ. ಹಾಗೂ ಕೇಂದ್ರ ವಿಪತ್ತು ನಿಧಿಯ 4 ಲಕ್ಷ ಒಟ್ಟು 5 ಲಕ್ಷ ರೂ. ಮೊತ್ತದ ಚೆಕ್‌ನ್ನು ಮೃತನ ಸಹೋದರನಿಗೆ ಹಸ್ತಾಂತರಿಸಿದರು.

ವಿಪ ಸದಸ್ಯ ಎಸ್‌.ಎಲ್‌.ಘೋಟ್ನೆಕರ, ತಹಸೀಲ್ದಾರ ವಿದ್ಯಾಧರ ಗುಳಗುಳಿ, ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಖಯ್ಯಾಂ ಮುಗದ, ಪುರಸಭಾ ಸದಸ್ಯ ಫಯಾಜ್‌ ಶೇಖ್‌, ಅಂಜುಮನ್‌ ಉಪಾಧ್ಯಕ್ಷ ಇಮ್ತಿಯಾಜ್‌ ಶೇಖ ಸೇರಿದಂತೆ ಮತ್ತೀತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ