ಆ್ಯಪ್ನಗರ

ನಿರಂತರ ಪ್ರಯತ್ನದಿಂದ ಉನ್ನತ ಗುರಿ ತಲುಪಲು ಸಾಧ್ಯ

ಶಿರಸಿ : ತಾಲೂಕಿನ ಹೆಗಡೆಕಟ್ಟಾ ಗಜಾನನ ಪ್ರೌಢಶಾಲೆಯಲ್ಲಿಲಯನ್ಸ್‌ ಕ್ವೆಸ್ಟ್‌ ಕಾರ್ಯಕ್ರಮದಲ್ಲಿಲಯನ್ಸ್‌ 317ರ ಡಿಸ್ಟ್ರೀಕ್ಟ್ ಗೌವರ್ನರ್‌ ಸಸಿಂದ್ರನ್‌ ನಯ್ಯರ್‌ ಉಪನ್ಯಾಸ ನೀಡಿದರು.

Vijaya Karnataka 17 Jan 2020, 5:00 am
ಶಿರಸಿ : ತಾಲೂಕಿನ ಹೆಗಡೆಕಟ್ಟಾ ಗಜಾನನ ಪ್ರೌಢಶಾಲೆಯಲ್ಲಿಲಯನ್ಸ್‌ ಕ್ವೆಸ್ಟ್‌ ಕಾರ್ಯಕ್ರಮದಲ್ಲಿಲಯನ್ಸ್‌ 317ರ ಡಿಸ್ಟ್ರೀಕ್ಟ್ ಗೌವರ್ನರ್‌ ಸಸಿಂದ್ರನ್‌ ನಯ್ಯರ್‌ ಉಪನ್ಯಾಸ ನೀಡಿದರು.
Vijaya Karnataka Web it is possible to reach a higher goal with constant effort
ನಿರಂತರ ಪ್ರಯತ್ನದಿಂದ ಉನ್ನತ ಗುರಿ ತಲುಪಲು ಸಾಧ್ಯ


ಇಂದಿನ ದೃಢ ನಿರ್ಧಾರ ಮುಂದಿನ ಜೀವನದ ಸಾಫಲ್ಯತೆಗೆ ಮಾರ್ಗ. ಅಲಸ್ಯ ಮತ್ತು ವ್ಯಸನ ಮುಕ್ತರಾಗಿ ನಿರಂತರ ಪ್ರಯತ್ನದಿಂದ ಉನ್ನತ ಗುರಿಯನ್ನು ಸಾಧಿಸಬೇಕು. ಕಲಿತ ಶಾಲೆ, ಪಾಲಕರ ಋುಣ ತೀರಿಸುವ ಪ್ರಯತ್ನದೊಂದಿಗೆ ಬೇರು ಮರೆಯದ ಸಾಧಕರಾಗಿ ಎಂದು ತಿಳಿಸಿದರು.

ಲಯನ್ಸ್‌ ಕ್ವೇಸ್ಟ್‌ ಇದು ಲಯನ್ಸ್‌ ಅಂತರಾಷ್ಟ್ರೀಯ ಸಂಸ್ಥೆಯ ಕಾರ್ಯಕ್ರಮವಾಗಿದೆ. ಹದಿಹರೆಯದ ಮಕ್ಕಳಿಗಾಗಿ ವಿಶೇಷವಾಗಿ ತಯಾರಿಸಿದ ಒಂದು ವರ್ಷ ಅವಧಿಯ ಮೌಲ್ಯಧಾರಿತ ಶಿಕ್ಷಣವಾಗಿದೆ ಎಂದು ವಿವರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಆರ್‌. ಹೆಗಡೆ, ಉಪಾಧ್ಯಕ್ಷ ವನಿತಾ ಹೆಗಡೆ, ಕಾರ್ಯದರ್ಶಿ ಪಿ.ಎನ್‌.ಹೆಗಡೆ, ಸದಸ್ಯ ಎಂ.ವಿ.ಹೆಗಡೆ ಉಪಸ್ಥಿತರಿದ್ದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಜಿ.ಎ.ಹೆಗಡೆ ಸೋಂದಾ ವಿದ್ಯಾರ್ಥಿಗಳಿಗೆ ಅನ್ಯರಿಗೆ ಸಂತಸ ನೀಡುವ ಕಾಯಕ ನಿಮ್ಮದಾಗಲೇಂದು ಆಶಿಸಿದರು.

ಇದೇ ಸಂದರ್ಭದಲ್ಲಿಶಾಲೆಯ ಹಳೆ ವಿದ್ಯಾರ್ಥಿಗಳಾದ ಹರೀಶ್‌ ಹೆಗಡೆ ಕೊರ್ತೆಬೈಲ್‌, ಮಂಜುನಾಥ ನಾಯ್ಕ ಬರಸಗುಣಿ ಮತ್ತು ಗುರುಪ್ರಸಾದ ಹೆಗಡೆ ಶಾಲೆಗೆ ಗ್ರೀನ್‌ ಬೋರ್ಡ್‌ನ್ನು ನೀಡಿ ಶಾಲೆಯ ಮೇಲಿನ ಪ್ರೀತಿ ವ್ಯಕ್ತಪಡಿಸಿದರು. ಲಯನ್ಸ್‌ ಕ್ವೆಸ್ಟ್‌ನ ರಿಜನಲ್‌ ಕೋ-ಆರ್ಡಿನೇಟರ್‌ ರಮಾ ಪಟವರ್ಧನ್‌, ಉದಯಸ್ವಾದಿ, ಪ್ರತಿಭಾ ಹೆಗಡೆ, ಸುಮಂಗಲಾ ಹೆಗಡೆ, ಬಾಬುಲಾಲ್‌ ಚೌಧರಿ, ಎಂ.ಎಂ. ಭಟ್‌ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಶೈಲೇಂದ್ರ, ವೀಣಾ ಭಟ್‌ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ