ಆ್ಯಪ್ನಗರ

ಗೋಕರ್ಣ: ಜೆಲ್ಲಿ ಮೀನು ದಾಳಿ, ಉರಿಯಿಂದ ಒದ್ದಾಡಿದ ಪ್ರವಾಸಿಗರು

ದಸರಾ ಹಬ್ಬದ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಜೆಲ್ಲಿ ಮೀನಿನ ದಾಳಿಗೆ ಗುರಿಯಾಗಿ ಒದ್ದಾಡಿದರು. ಪ್ರವಾಸೋದ್ಯಮ ಇಲಾಖೆ ಸುರಕ್ಷತಾ ಸಿಬ್ಬಂದಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

Vijaya Karnataka 22 Oct 2018, 9:30 am
ಗೋಕರ್ಣ: ಗೋಕರ್ಣದ ಮೇನ್‌ ಬೀಚ್‌, ಕುಡ್ಲೆ ಬೀಚ್‌, ಓಂ ಬೀಚ್‌ನಲ್ಲಿ ಈಜಲು ಹೋದ ಪ್ರವಾಸಿಗರು ಜೀವಮಾನದಲ್ಲಿ ಇನ್ನೆಂದೂ ಸಮುದ್ರಕ್ಕಿಳಿಯುವುದಿಲ್ಲ ಎಂದು ಶಪಥ ಮಾಡಿದ್ದಾರೆ! ಇದಕ್ಕೆ ಕಾರಣ ಜೆಲ್ಲಿ ಮೀನು. ನೋಡಲು ಪುಟ್ಟದಾಗಿದ್ದರೂ ಇವು ತುಂಬ ಅಪಾಯಕಾರಿಗಳುಯ. ಸಮುದ್ರದ ತಳದಲ್ಲಿ ಲವಲವಿಕೆಯಿಂದ ಚಲಿಸುತ್ತಿರುತ್ತವೆ. ಈಜಲು ಹೋದವರಿಗೆ ಇವುಗಳ ಕೇಸರಗಳು ಸೋಕಿದರೆ ಸಾಕು ಬ್ಲೇಡಿನಲ್ಲಿ ಗೀಚಿದಂತೆ ಗಾಯಗಳಾಗುತ್ತದೆ. ಜಲ್ಲಿ ಮೀನಿನ ದಾಳಿಯಿಂದ ಅಸಾಧ್ಯ ಉರಿಯುಂಟಾಗುತ್ತದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಜೆಲ್ಲಿ ಮೀನಿನ ದಾಳಿಗೆ ಗುರಿಯಾಗಿ ಒದ್ದಾಡಿದರು. ಪ್ರವಾಸೋದ್ಯಮ ಇಲಾಖೆ ಸುರಕ್ಷತಾ ಸಿಬ್ಬಂದಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
Vijaya Karnataka Web Jelly fish


‘‘ಸಮುದ್ರಕ್ಕೆ ಇಳಿಬೇಡಿ ಎಂದು ಪ್ರವಾಸಿಗರಿಗೆ ಹೇಳಿದರೂ ಕೇಳುತ್ತಿಲ್ಲ. ಇದೀಗ ಜಲ್ಲಿ ಮೀನುಗಳು ಸಮುದ್ರದಲ್ಲಿ ಕಾಣಿಸಿಕೊಳ್ಳುತ್ತಿವೆ. ಇವುಗಳು ಜನರಿಗೆ ಕಚ್ಚಿ ಗಾಯಗೊಳಿಸುತ್ತವೆ. ಇವರ ಒದ್ದಾಟ ಕಂಡವರಿಗೆ ಖಂಡಿತ ಬುದ್ಧಿ ಬಂದಿರುತ್ತದೆ ,’’ಎಂದು ಲೈಫ್‌ಗಾರ್ಡ್‌ ಮೇಲ್ವಿಚಾರಕ ರವಿ ನಾಯ್ಕ ಹೇಳಿದರು.

ನಾವು ಗೆಳೆಯರೊಂದಿಗೆ ಬಂದು ನೀರಿಗೆ ಈಳಿದೆವು. ನಮಗೆ ಗೊತ್ತಾಗಲಿಲ್ಲ. ಜೆಲ್ಲಿ ಮೀನು ಕಚ್ಚಿದ ನಂತರ ನಮಗೆ ನೋವಾಯಿತು. ತಕ್ಷ ಣ ಪ್ರಥಮ ಚಿಕಿತ್ಸೆಯನ್ನು ಲೈಫ್‌ ಗಾರ್ಡ್‌ಗಳು ನೀಡಿದರು -ಪ್ರಜ್ವಲ್‌ ಕುಮಾರ್‌ ,ಬಿಇ ವಿದಾರ್ಥಿ, ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ