ಆ್ಯಪ್ನಗರ

ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಿ: ಎಸಿಎಫ್‌

ಯಲ್ಲಾಪುರ :ವಾಯು ಮಾಲಿನ್ಯ ತಡೆಗಟ್ಟಿ ಉತ್ತಮ ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಮಾಲಿನ್ಯವನ್ನು ನಿಯಂತ್ರಿಸಿ ಪರಿಸರವನ್ನು ಸಂರಕ್ಷಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಎಸಿಎಫ್‌ ಅಶೋಕ ಭಟ್ಟ ಹೇಳಿದರು.

Vijaya Karnataka 30 Nov 2018, 5:00 am
ಯಲ್ಲಾಪುರ :ವಾಯು ಮಾಲಿನ್ಯ ತಡೆಗಟ್ಟಿ ಉತ್ತಮ ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಮಾಲಿನ್ಯವನ್ನು ನಿಯಂತ್ರಿಸಿ ಪರಿಸರವನ್ನು ಸಂರಕ್ಷಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಎಸಿಎಫ್‌ ಅಶೋಕ ಭಟ್ಟ ಹೇಳಿದರು.
Vijaya Karnataka Web KWR-29 YLP 2


ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ಪಟ್ಟಣದ ಎಪಿಎಂಸಿ ಆವಾರದಲ್ಲಿ ಗುರುವಾರ ಸಾರಿಗೆ ಶಿಬಿರದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆಯ ಪ್ರಯುಕ್ತ ವಾಹನ ಸವಾರರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು. ಪ್ರಾಕೃತಿಕ ಸಂಪತ್ತಿನಿಂದ ಕೂಡಿದ ನಮ್ಮ ಸುತ್ತಲಿನ ಪರಿಸರವು ಇಂದು ನಾನಾ ಕಾರಣಗಳಿಂದ ಮಾಲಿನ್ಯವಾಗುತ್ತಿದೆ. ವಾಹನಗಳಿಂದ ಹೊರಬರುವ ಹೊಗೆಯಿಂದಾಗಿಯೂ ಪರಿಸರ ಮಾಲಿನ್ಯವಾಗುತ್ತಿದೆ. ವಾಹನ ಮಾಲಿಕರು, ವಾಹನ ಸವಾರರು ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಪರಿಸರ ಸಂರಕ್ಷ ಣೆ ಎಲ್ಲರ ಕರ್ತವ್ಯವಾಗಬೇಕು. ಸಾರಿಗೆ ಇಲಾಖೆಯ ವತಿಯಿಂದ ಸಸಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ. ನಮ್ಮ ಜಿಲ್ಲೆಯಲ್ಲಿ ವನ ಸಂಪತ್ತಿನ ಖಜಾನೆಯೇ ಇದೆ. ಅರಣ್ಯ ರಕ್ಷ ಣೆ ಹಾಗೂ ಪರಿಸರ ಸಂರಕ್ಷ ಣೆಯ ಮಹತ್ವವನ್ನು ನಾವೆಲ್ಲರೂ ಅರಿಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿರಸಿ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಾಸೀಂ ಬಾಬಾ ಮಾತನಾಡಿ, ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ನಾವೆಲ್ಲರೂ ಸೇರಿ ತಡೆಗಟ್ಟಬೇಕಾಗಿದೆ. ನಿಯಮಿತವಾಗಿ ವಾಹನಗಳ ತಪಾಸಣೆ ಮಾಡಿಸಿಕೊಳ್ಳಬೇಕು. ವಾಹನಗಳ ನಿರ್ವಹಣೆಯನ್ನು ಕಾಲ, ಕಾಲಕ್ಕೆ ಸರಿಯಾಗಿ ಮಾಡಬೇಕು. ನಮ್ಮ ಸುತ್ತಲೂ ಗಿಡ, ಮರಗಳನ್ನು ಬೆಳೆಸುವ ಮೂಲಕ ವನ್ಯ ಸಂಪತ್ತನ್ನು ಹೆಚ್ಚಿಸಬೇಕು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ವತಿಯಿಂದ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಗಣಪತಿ ಭಟ್‌ ಯಲ್ಲಾಪುರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ ವಾಹನ ಸವಾರರಿಗೆ ಉಚಿತವಾಗಿ ನೂರಾರು ಸಸಿಗಳನ್ನು ವಿತರಿಸಲಾಯಿತು. ಸಾರಿಗೆ ಅಧಿಕಾರಿ ಶೇಖರ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ