ಆ್ಯಪ್ನಗರ

ಕರ್ಮ, ಭಕ್ತಿ, ಜ್ಞಾನ ಸಮಾರಾಧನೆ 28ಕ್ಕೆ

ಕುಮಟಾ : ತಾಲೂಕಿನ ಕತಗಾಲ ಸಮೀಪದ ಸಾಗಡಿಬೇಣದಲ್ಲಿರುವ ಮಹಾಸತಿ ದೇವಸ್ಥಾನದ ದ್ವಾದಶಮಾನ ವರ್ಧಂತ್ಯುತ್ಸವದ ಅಂಗವಾಗಿ ಮಾ.28 ರಂದು ದೇವಸ್ಥಾನದ ಆವರಣದಲ್ಲಿ ದಿನಪೂರ್ತಿ ಕರ್ಮ-ಭಕ್ತಿ-ಜ್ಞಾನ ಸಮಾರಾಧನೆ ನಡೆಯಲಿದೆ.

Vijaya Karnataka 26 Mar 2019, 5:00 am
ಕುಮಟಾ : ತಾಲೂಕಿನ ಕತಗಾಲ ಸಮೀಪದ ಸಾಗಡಿಬೇಣದಲ್ಲಿರುವ ಮಹಾಸತಿ ದೇವಸ್ಥಾನದ ದ್ವಾದಶಮಾನ ವರ್ಧಂತ್ಯುತ್ಸವದ ಅಂಗವಾಗಿ ಮಾ.28 ರಂದು ದೇವಸ್ಥಾನದ ಆವರಣದಲ್ಲಿ ದಿನಪೂರ್ತಿ ಕರ್ಮ-ಭಕ್ತಿ-ಜ್ಞಾನ ಸಮಾರಾಧನೆ ನಡೆಯಲಿದೆ.
Vijaya Karnataka Web karma bhakti knowledge is at 28 pm
ಕರ್ಮ, ಭಕ್ತಿ, ಜ್ಞಾನ ಸಮಾರಾಧನೆ 28ಕ್ಕೆ


ಬೆಳಗ್ಗೆ 11ಕ್ಕೆ ಉಪ್ಪಿನಪಟ್ಟಣದ ವಿನಾಯಕ ಭಟ್ಟರ ನೇತೃತ್ವದಲ್ಲಿ 108 ಸಾಮೂಹಿಕ ಸತ್ಯನಾರಾಯಣ ಪೂಜೆ. ಸಂಜೆ 6ಕ್ಕೆ ವಿವಿಧ ಮಂಡಳಿಯವರಿಂದ ಭಜನಾ ಕಾರ್ಯಕ್ರಮದ ನಂತರ ಸಂಜೆ 8ಕ್ಕೆ ವಿದುಷಿ ಸೌಮ್ಯಾ ಭಟ್ಟ ಇವರ ಮಾರ್ಗದರ್ಶನದಲ್ಲಿ, ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ನೃತ್ಯ ಕಲಾ ಟ್ರಸ್ಟ ವಿದ್ಯಾರ್ಥಿನಿಯರಿಂದ ಭರತನಾಟ್ಯ, ಪ್ರತಿಭಾ ಪ್ರದರ್ಶನ, ಭರತನಾಟ್ಯ ಪ್ರದರ್ಶನ ಹಾಗೂ ರಾತ್ರಿ 9ಕ್ಕೆ ಕುಮಟಾ ಅಭಿಜಿತ್‌ ಉದಯ ಗೌಡ ಇವರಿಂದ ನಾಟ್ಯ ಪ್ರತಿಭೆ ಅನಾವರಣಗೊಳ್ಳಲಿದೆ.

ರಾತ್ರಿ 9ಕ್ಕೆ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮು ಗೌಡ, ಅಧ್ಯಾತ್ಮ ಚಿಂತಕರು ಹಾಗೂ ಕೃಷಿಕರು ಬಾಬು ಮಂಜುನಾಥ ಬೋಗಾರ ಕೊಡಂಬಳೆ, ನಿವೃತ್ತ ಸೈನಿಕ ಶ್ರೀಧರ ಅಂಬಿಗ, ಉಪ್ಪಿನಪಟ್ಟಣ, ರಾಷ್ಟ್ರಮಟ್ಟದ ಯುವ ವೇದಸಾಧಕ ಘನಪಾಠಿ ಯಾದವೇಶ ಶರ್ಮಾ, ಸಾಂತೂರು ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಅತಿಥಿಗಳಾಗಿ ರೋಟರಿ ಕ್ಲಬ್‌ನ ಅಸಿಸ್ಟಂಟ್‌ ಗವರ್ನರ್‌ ವಿನಾಯಕ ಬಾಳೇರಿ ಕುಮಟಾ, ಅಳಕೋಡ ಗ್ರಾಪಂ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ, ಎಸ್‌ಕೆಪಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಶಾಂತಪ್ಪ ಕೊರವರ, ಅಲ್ಲದೆ ವಿಶೇಷ ಆಮಂತ್ರಿತರಾಗಿ ಡಾ.ಗಣಪತಿ ಭಟ್ಟ, ಎಚ್‌.ಎನ್‌. ಅಂಬಿಗ, ಗೋಪಾಲಕೃಷ್ಣ ಭಟ್ಟ ಆಗಮಿಸಲಿದ್ದಾರೆ. ರಾತ್ರಿ 11ಕ್ಕೆ ಕೆಡಿಸಿಸಿ ಬ್ಯಾಂಕ್‌ ಪ್ರಯೋಜಕತ್ವದಲ್ಲಿ ಜಿ.ಕೆ. ನಾಯ್ಕರ ಸಂಯೋಜನೆಯಲ್ಲಿ ಬರ್ಗಿಯ ಮಹಾಲಿಂಗೇಶ್ವರ ಮಹಿಷಾಸುರ ಮರ್ದಿನಿ ಯಕ್ಷ ಗಾನ ಮಂಡಳಿಯ ಸದಸ್ಯರಿಂದ ಸುಭದ್ರಾ ರಾಯಭಾರ ಯಕ್ಷ ಗಾನ ಜರುಗಲಿದೆ ಎಂದು ಸಂಯೋಜಕ ಗಜಾನನ ಗಂಗು ಗೌಡ ತಿಳಿಸಿದ್ದಾರೆ. ಮಾಹಿತಿಗಾಗಿ ದೂ-8277647946 ಸಂಪರ್ಕಿಸಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ