ಆ್ಯಪ್ನಗರ

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಕಾರವಾರ ಶಾಸಕಿ ರೂಪಾಲಿ ನಾಯ್ಕ

ಅಂಕೋಲಾ ತಾಲೂಕಿನ ಮಳೆ ಹಾನಿ ಪ್ರದೇಶಕ್ಕೆ ಶಾಸಕಿ ರೂಪಾಲಿ ಎಸ್‌.ನಾಯ್ಕ ಭೇಟಿ ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Vijaya Karnataka Web 6 Aug 2020, 3:55 pm
ಕಾರವಾರ: ಪ್ರವಾಹದಿಂದ ಅನಾಹುತಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಜನತೆಗೆ ಯಾವುದೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕಿ ರೂಪಾಲಿ ಎಸ್‌.ನಾಯ್ಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿಯಿಂದ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.
Vijaya Karnataka Web roopali


ಜಲಾವೃತವಾದ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು. ಕಳೆದ ವರ್ಷ ಪ್ರವಾಹದಲ್ಲಿಅಂಕೋಲಾ- ಯಲ್ಲಾಪುರ ಸಂಪರ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿಕೆಲವು ಲಾರಿಗಳು ಮುಳುಗಿದ್ದವು. ಈ ಬಾರಿ ಅದು ಮರುಕಳಿಸದಂತೆ ಎಚ್ಚರವಹಿಸಲು ರಸ್ತೆಯಲ್ಲಿವಾಹನ ಸಂಚಾರ ನಿಲ್ಲಿಸಬೇಕು ಎಂದು ತಿಳಿಸಿದರು.

ನೆರೆ ಪ್ರದೇಶಗಳಿಗೆ ದೋಣಿ ವ್ಯವಸ್ಥೆ
ನದಿ ನೀರಿನ ಪ್ರಮಾಣ ಅಪಾಯದ ಮಟ್ಟಕ್ಕೆ ತಲುಪಿದೆ. ಕಾರಣ ವಾಹನಗಳ ಸಂಚಾರವನ್ನು ನಿಲ್ಲಿಸಿ ಎಚ್ಚರಿಕೆ ವಹಿಸಬೇಕು. ದೋಣಿಯಲ್ಲಿ ಪ್ರಯಾಣಿಸುವಾಗ ಲೈಫ್ ‌ಜಾಕೆಟ್‌ ಧರಿಸಬೇಕು. ರಕ್ಷಣಾ ಕಾರ್ಯನಿರ್ವಹಿಸುವವರಿಗೆ ಉಪಹಾರದ ವ್ಯವಸ್ಥೆ ಮಾಡಬೇಕು. ದೋಣಿ ನಡೆಸಲು ಹಾಗೂ ಕಾರ್ಯಾಚರಣೆಗೆ ಸ್ಥಳೀಯ ಮೀನುಗಾರರ ನೆರವು ಪಡೆಯಬೇಕು. ಕಾರ್ಯಾಚರಣೆ ಮುಗಿದ ನಂತರ ಅವರಿಗೆ ತಲುಪಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲಿನೀಡಬೇಕು ಎಂದರು.

4 ವರ್ಷಗಳ ಪ್ರೀತಿಗೆ ಯುವತಿಯ ಪೋಷಕರೇ ವಿಲನ್..! ಎಸ್ಪಿ ಮೊರೆಹೋದ ಯುವ ಜೋಡಿ

ಕಾಳಜಿ ಕೇಂದ್ರಕ್ಕೆ ಭೇಟಿ: ಅಂಕೋಲಾ ತಾಲೂಕಿನ ಸಗಡಗೇರಿ ಮತ್ತು ಅಗ್ರಗೋಣ ಪಂಚಾಯಿತಿ ವ್ಯಾಪ್ತಿಯ ಜುಗಾ ಶಾಲೆಯಲ್ಲಿಆರಂಭಿಸಲಾದ ಕಾಳಜಿ ಕೇಂದ್ರಕ್ಕೆ ಶಾಸಕಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಮಹಾಮಳೆಗೆ ಭೋರ್ಗರೆಯುತ್ತಿದೆ ಸಮುದ್ರ: ಮುಂಬೈ ಮರೀನ್ ಡ್ರೈವ್ ಬೀಚ್‌ನಲ್ಲಿ ಭಯಾನಕ ಅಲೆಗಳು!

ಕೊರೊನಾ ಇರುವುದರಿಂದ ಮಕ್ಕಳ ಮತ್ತು ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಕುಡಿಯಲು ಬಿಸಿ ನೀರಿನ ವ್ಯವಸ್ಥೆ, ಆರೋಗ್ಯ ತಪಾಸಣೆಗೆ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸೂಚಿಸಲಾಯಿತು. ತಾ.ಪಂ.ಇಒ, ಪಿಡಿಒ, ಸ್ಥಳೀಯ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ