ಆ್ಯಪ್ನಗರ

ಮಕ್ಕಳು ಬಾಲಕಾರ್ಮಿಕರಾಗದಂತೆ ನೋಡಿಕೊಳ್ಳಿ

ಸಿದ್ದಾಪುರ : ಪಟ್ಟಣದ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಕಂದಾಯ ಇಲಾಖೆ,ಸರ್ಕಾರಿ ಉರ್ದು ಪ್ರೌಢಶಾಲೆ ಇವರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

Vijaya Karnataka 15 Jun 2019, 5:00 am
ಸಿದ್ದಾಪುರ : ಪಟ್ಟಣದ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಕಂದಾಯ ಇಲಾಖೆ,ಸರ್ಕಾರಿ ಉರ್ದು ಪ್ರೌಢಶಾಲೆ ಇವರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
Vijaya Karnataka Web keep children from becoming child labor
ಮಕ್ಕಳು ಬಾಲಕಾರ್ಮಿಕರಾಗದಂತೆ ನೋಡಿಕೊಳ್ಳಿ


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿವಿಲ್‌ ನ್ಯಾಯಾಧೀಶ ಸಿದ್ದರಾಮ ಎಸ್‌., ಬಾಲಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ಕಾಯಿದೆಯು 1986 ರಲ್ಲಿ ಜಾರಿಗೆ ಬಂದಿತು. ಈ ಕಾಯ್ದೆಯಡಿಯಲ್ಲಿ 14 ವರ್ಷ ವಯೋಮಾನ ದಾಟದೇ ಇರುವ ವ್ಯಕ್ತಿಯನ್ನು ಮಗುವೆಂದು ಪರಿಗಣಿಸಲಾಗುವುದು. ಈ ಕಾಯ್ದೆಯ ಉದ್ದೇಶ ಶಿಕ್ಷ ಣ ಪಡೆಯುವ ಸಮಯದಲ್ಲಿ,ದೈಹಿಕ ಬೆಳವಣಿಗೆಯಾಗುವಂತಹ ಸಮಯದಲ್ಲಿ ಮಕ್ಕಳನ್ನು ಕೆಲವು ಕಷ್ಟಕರ ಕೆಲಸ ವಿಧಾನಗಳಲ್ಲಿ ಬಳಸುವುದನ್ನು ತಡೆಗಟ್ಟುವುದಾಗಿದೆ. ಮಕ್ಕಳು ಬಾಲಕಾರ್ಮಿಕರಾಗುವುದನ್ನು ತಡೆಗಟ್ಟುವುದರಲ್ಲಿ ಪೋಷಕರ ಜವಬ್ದಾರಿಯೂ ಕೂಡ ಇದ್ದು, ಅವರಿಗೆ ಸರಿಯಾದ ಶಿಕ್ಷ ಣವನ್ನು ನೀಡಬೇಕು ಎಂದರು.

ಉರ್ದು ಪೌಢಶಾಲೆಯ ಮುಖ್ಯಶಿಕ್ಷ ಕ ನಾಗಪ್ಪ ಬೆಣಗೇರಿ ಕಾರ್ಯಕ್ರಮದ ಅಧ್ಯಕ್ಷ ತೆವಹಿಸಿದ್ದರು. ವಕೀಲ ಐ. ಜಿ. ನಾಯ್ಕ,ಬಾಲ ಕಾರ್ಮಿಕ ಕಾಯಿದೆಯ ಬಗ್ಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಚಂದ್ರಶೇಖರ ಹೆಚ್‌.ಎಸ್‌, ತಹಸೀಲ್ದಾರ್‌ ಗೀತಾ ಸಿ. ಜಿ. ವಕೀಲರ ಸಂಘದ ಅಧ್ಯಕ್ಷ ಎಂ.ಡಿ. ನಾಯ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜಾಜಿರಿನ್‌ ಬಾನು ಪ್ರಾರ್ಥಿಸಿದರು. ಶಿಕ್ಷ ಕ ಅಬ್ದುಲ್‌ ಖಾದರ ಸ್ವಾಗತಿಸಿದರು.

ಶಿಕ್ಷ ಕಿ ವೀಣಾ ನಿರೂಪಿಸಿ, ವಂದಿಸಿದರು. ಶಾಲಾ ವಿದ್ಯಾರ್ಥಿಗಳು, ಶಿಕ್ಷ ಕರು ಸೇರಿದಂತೆ 130 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾಹಿತಿ ಪಡೆದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ