ಆ್ಯಪ್ನಗರ

ನೀರಿನ ಮಟ್ಟ ಇಳಿಸಿಕೊಳ್ಳಿ

ಕಾರವಾರ : ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವನ್ನು ಕಳೆದ ಎರಡು ದಿನಗಳಿಂದ ಗರಿಷ್ಠ ಮಟ್ಟದಲ್ಲೇ ಇರಿಸಿರುವ ಜಲಾಶಯದ ಎಂಜಿನಿಯರ್‌ ವಿರುದ್ಧ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ಪತ್ರ ಬರೆದು ಎಚ್ಚರಿಸಿದ್ದಾರೆ.

Vijaya Karnataka 5 Sep 2019, 5:00 am
ಕಾರವಾರ : ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವನ್ನು ಕಳೆದ ಎರಡು ದಿನಗಳಿಂದ ಗರಿಷ್ಠ ಮಟ್ಟದಲ್ಲೇ ಇರಿಸಿರುವ ಜಲಾಶಯದ ಎಂಜಿನಿಯರ್‌ ವಿರುದ್ಧ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ಪತ್ರ ಬರೆದು ಎಚ್ಚರಿಸಿದ್ದಾರೆ.
Vijaya Karnataka Web keep the water level down
ನೀರಿನ ಮಟ್ಟ ಇಳಿಸಿಕೊಳ್ಳಿ


ಜಲಾಶಯದ ಜಲಾನಯನ ಪ್ರದೇಶದಲ್ಲಿಇನ್ನು ಮುಂದಿನ ಕೆಲ ದಿನಗಳ ಕಾಲ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿಜಲಾಶಯದ ಒಳ ಹರಿವಿಗಿಂತ ಹೊರ ಹರಿವನ್ನು ಕಡಿಮೆ ಮಾಡಿ ನೀರಿನ ಮಟ್ಟವನ್ನು ಈಗಲೇ ಇಳಿಸಿಕೊಂಡರೆ ಮಳೆ ಹೆಚ್ಚಾದರೂ ಪ್ರವಾಹದ ಆತಂಕ ಇರುವುದಿಲ್ಲ. ಕಾಳಿ ನದಿಯ ಜಲಾಶಯಗಳಲ್ಲಿಈ ಪ್ರಯೋಗವನ್ನು ಈಗಾಗಲೇ ಯಶಸ್ವಿಯಾಗಿ ಕೈಗೊಳ್ಳಲಾಗಿದೆ.

ಆದರೆ ಕಳೆದ ಎರಡು ದಿನಗಳಿಂದ ತಮ್ಮ ಕಾರ್ಯ ವೈಖರಿಯನ್ನು ಗಮನಿಸಿದಾಗ ಜಲಾಶಯದಲ್ಲಿಗರಿಷ್ಠ ನೀರಿನ ಮಟ್ಟ ಕಾಯ್ದುಕೊಂಡಿರುವುದು ಕಂಡು ಬಂದಿದೆ. ಸ್ವತಃ ನಾನು ಸೆ. 3 ರಂದು ಶರಾವತಿ ನದಿ ತಟದ ಗ್ರಾಮಗಳಿಗೆ ಭೇಟಿ ನೀಡಿದ್ದು , ಸಾರ್ವಜನಿಕರು ಪ್ರವಾಹದ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಕೂಡಲೇ ಜಲಾಶಯದ ನೀರಿನ ಮಟ್ಟವನ್ನು ಇದರಿಂದ ಪ್ರವಾಹದ ಸ್ಥಿತಿ ಪ್ರವಾಹದ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿಜಲಾಶಯದ ನೀರಿನ ಮಟ್ಟವನ್ನು ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳದೇ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಮುಂದಿನ ಆಗುಹೋಗುಗಳಿಗೆ ತಾವೇ ಹೊಣೆ ಎಂದು ಭಾವಿಸಿ ತಮ್ಮ ಮೇಲೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಿಸಿ ತಮ್ಮ ಪತ್ರದಲ್ಲಿಉಲ್ಲೇಖಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ