ಆ್ಯಪ್ನಗರ

ಕಾನೂನು ಅರಿತು ಸುರಕ್ಷಿತ ಸಮಾಜ ನಿರ್ಮಿಸಿ

ಅಂಕೋಲಾ :ವಿದ್ಯಾರ್ಥಿಗಳು ದೇಶದ ಕಾನೂನು ಮತ್ತು ಸಂವಿಧಾನದ ಕರ್ತವ್ಯಗಳ ಪಾಲನೆ ಬಗ್ಗೆ ತಿಳಿದುಕೊಂಡು, ಸ್ವಸ್ಥ ಮತ್ತು ಸುರಕ್ಷಿತ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡುವ ಗುರುತರ ಜವಾಬ್ದಾರಿ ತಮ್ಮ ಮೇಲಿದೆ ಎಂದು ಅಂಕೋಲಾ ಠಾಣೆಯ ಸಿಪಿಐ ಬಿ. ಪ್ರಮೋದಕುಮಾರ ಹೇಳಿದರು.

Vijaya Karnataka 9 Dec 2018, 5:00 am
ಅಂಕೋಲಾ :ವಿದ್ಯಾರ್ಥಿಗಳು ದೇಶದ ಕಾನೂನು ಮತ್ತು ಸಂವಿಧಾನದ ಕರ್ತವ್ಯಗಳ ಪಾಲನೆ ಬಗ್ಗೆ ತಿಳಿದುಕೊಂಡು, ಸ್ವಸ್ಥ ಮತ್ತು ಸುರಕ್ಷಿತ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡುವ ಗುರುತರ ಜವಾಬ್ದಾರಿ ತಮ್ಮ ಮೇಲಿದೆ ಎಂದು ಅಂಕೋಲಾ ಠಾಣೆಯ ಸಿಪಿಐ ಬಿ. ಪ್ರಮೋದಕುಮಾರ ಹೇಳಿದರು.
Vijaya Karnataka Web KWR-8ANK4


ಅವರು ಶನಿವಾರ ಅವರ್ಸಾ ಎಜ್ಯುಕೇಶನ್‌ ಮತ್ತು ವೆಲ್‌ಫೇರ್‌ ಅಸೋಸಿಯೇಶನ್‌ನÜ ಹಟ್ಟಿಕೇರಿಯ ಜೇಸೀ ಆಂಗ್ಲ ಶಾಲೆಯಲ್ಲಿ ಅಂಕೊಲಾ ಪೊಲೀಸ್‌ ಠಾಣೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಧಮ್ಯವಾದ ಶಕ್ತಿ ಹುದುಗಿರುತ್ತದೆ. ದೇಶ ಕಟ್ಟುವ ಜವಬ್ದಾರಿ ಇರುವ ವಿದ್ಯಾರ್ಥಿಗಳು ಕಾನೂನು ತಿಳಿದುಕೊಂಡು, ಇತರರಿಗೂ ತಿಳಿಸಿ ಭವ್ಯ ರಾಷ್ಟ್ರದ ನಿರ್ಮಾಣದಲ್ಲಿ ಕೈ ಜೋಡಿಸುವಂತಾಗಬೇಕು ಎಂದರು.

ಪಿಎಸ್‌ಐ ಶ್ರೀ ಎಸ್‌.ಆರ್‌. ಉಪನ್ಯಾಸ ನೀಡಿ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು. ಕಾನೂನಿನ ತಿಳುವಳಿಕೆ ವಿದ್ಯಾರ್ಥಿ ಜೀವನದಲ್ಲೆ ತಿಳಿದುಕೊಂಡರೆ ಮುಂದಿನ ಜೀವನ ಸುಗಮವಾಗಲು ಸಾಧ್ಯ. ಎಲ್ಲಿ ಕಾನೂನಿನ ಜಾಗೃತಿ ಇರುತ್ತದೆಯೊ ಅಲ್ಲಿ ಪೊಲೀಸ ವ್ಯವಸ್ಥೆಯ ಅಗತ್ಯವಿರುವುದಿಲ್ಲ ಎಂದರು.

ಅವರ್ಸಾ ಎಜ್ಯುಕೇಶನ್‌ ಮತ್ತು ವೆಲ್‌ಪೇರ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ಲತಾ ಕಾಮತ, ಪ್ರೌಢ ಶಾಲಾ ಮುಖ್ಯಾಧ್ಯಾಪಕಿ ಮಂಜುಳಾ ನಾಯ್ಕ, ಪ್ರೋಬೆಷನರಿ ಪಿಎಸೈ ಅನಿಲ ಮಾದರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷ ಕ ಮಂಜುನಾಥ ನಾಯ್ಕ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ರಾಘವೇಂದ್ರ ಭಟ್‌ ಪರಿಚಯಿಸಿದರು. ಶಿಕ್ಷ ಕ ರಾಘವೇಂದ್ರ ವೈದ್ಯ ವಂದಿಸಿದರು. ಪೊಲೀಸ್‌ ಸಿಬ್ಬಂದಿಗಳಾದ ಸತೀಶ ನಾಯ್ಕ, ಜಗದೀಶ ನಾಯ್ಕ, ಶಿಕ್ಷ ಕರಾದ ರಶ್ಮಿ ನಾರ್ವೆಕರ, ಶೀಲಾ ತಾಂಡೇಲ, ಶಕಿನಾ ಶೇಖ, ಜ್ಯೋತಿ ಆಚಾರ್ಯ, ರತ್ನಾ ನಾಯ್ಕ, ಚಂದ್ರಪ್ರಭಾ ಕೇಣಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಮೋಜಿನಾಟದ ಮೂಲಕ ಕಾನೂನಿನ ತಿಳಿವಳಿಕೆ : ಅಪರಾಧ ಮುಕ್ತ ಸಮಾಜವನ್ನು ಕಟ್ಟಬೇಕಾದರೆ ವಿದ್ಯಾರ್ಥಿಗಳು ಕಾನೂನನ್ನು ಹೇಗೆ ಬಳಸಿಕೊಳ್ಳುವಂತಾಗಬೇಕು ಎನ್ನುವದನ್ನು ಪಿಎಸ್‌ಐ ಶ್ರೀಧರ ಅವರು ಮೋಜಿನಾಟದ ಮೂಲಕ ಕಾನೂನಿನ ತಿಳಿವಳಿಕೆ ಹೇಳಿ, ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಕಾನೂನಿನ ಪ್ರಯೋಗವನ್ನು ಪಾಯೋಗಿಕವಾಗಿ ಆಟದ ಮೂಲಕ ತೋರಿಸಿ ಕಾನೂನಿನ ಅರಿವನ್ನು ಮೂಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ