ಆ್ಯಪ್ನಗರ

ಕಾಡುಪ್ರಾಣಿಗಳ ರಕ್ಷಣೆ ಅರಿವು ಅವಶ್ಯ

ಗೋಕರ್ಣ : ಕಾಡು ಪ್ರಾಣಿಗಳ ಸಂತತಿ ನಶಿಸಿ ಹೋಗುತ್ತಿರುವ ಬಗ್ಗೆ ಗೋಕರ್ಣದ ಹೀರೇಗುತ್ತಿಯಲ್ಲಿ ಗೋಕರ್ಣ ಪೊಲೀಸ್‌ ಹಾಗೂ ಹೀರೇಗುತ್ತಿ ಅರಣ್ಯ ಇಲಾಖೆಯ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

Vijaya Karnataka 3 Feb 2019, 5:00 am
ಗೋಕರ್ಣ : ಕಾಡು ಪ್ರಾಣಿಗಳ ಸಂತತಿ ನಶಿಸಿ ಹೋಗುತ್ತಿರುವ ಬಗ್ಗೆ ಗೋಕರ್ಣದ ಹೀರೇಗುತ್ತಿಯಲ್ಲಿ ಗೋಕರ್ಣ ಪೊಲೀಸ್‌ ಹಾಗೂ ಹೀರೇಗುತ್ತಿ ಅರಣ್ಯ ಇಲಾಖೆಯ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
Vijaya Karnataka Web knowledge of wildlife is essential
ಕಾಡುಪ್ರಾಣಿಗಳ ರಕ್ಷಣೆ ಅರಿವು ಅವಶ್ಯ


ಡಿ.ಎಫ್‌.ಒ. ಮೋಹನ ಬಸ್ತಿ ಮಾತನಾಡಿ, ಸಾರ್ವಜನಿಕ ಆಧುನಿಕ ಯುಗದಲ್ಲಿ ದಿನೇ ದಿನೇ ಕಾಡುಪ್ರಾಣಿಗಳ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡು ಪ್ರಾಣಿಗಳು ಇಲ್ಲವಾದರೆ ಪರಿಸರ ಸಮತೋಲನ ಕಳೆದುಕೊಳ್ಳುತ್ತದೆ ಎಂದರು.

ಪಿ.ಎಸ್‌.ಐ ಸಂತೋಷ ಕುಮಾರ್‌ ಮಾತನಾಡಿ, ಪ್ರಾಣಿ ಬೇಟೆ ಕಾನೂನು ಬಾಹಿರ ಹಾಗೂ ಇದನ್ನು ಮಾಡಿದರೆ ಶಿಕ್ಷೆ ಇದೆ. ಪ್ರಾಣಿ ಬೇಟೆಗೆ ಕಡಿವಾಣ ಹಾಕಬೇಕು ಎಂದರು.

ಇಲಾಖೆಯ ಆದೇಶದಂತೆ ಗೋಕರ್ಣದ ಪಿಎಸ್‌ಐ ಸಂತೋಷ ಕುಮಾರ್‌ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗೋಕರ್ಣ ಪೊಲೀಸ್‌ ಠಾಣೆಯ ಸಿಬ್ಬಂದಿ, ಇಲಾಖೆಯ ಡಿಎಫ್‌ಒ ಮೋಹನ ಬಸ್ತಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ