ಆ್ಯಪ್ನಗರ

ಕೊಂಕಣಿ ಸಾಹಿತ್ಯದ ಚಟುವಟಿಕೆ ಹೆಚ್ಚಲಿ

ಶಿರಸಿ : ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್‌ನಿಂದ ರಾಜ್ಯ ಮಟ್ಟದ ಕೊಂಕಣಿ ಏಕಾಂಕ ನಾಟಕ ಸ್ಪರ್ಧೆ ನಗರದ ಸೇಂಟ್‌ ಆಂಥೋನಿ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಿತು.

Vijaya Karnataka 15 Feb 2019, 5:00 am
ಶಿರಸಿ : ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್‌ನಿಂದ ರಾಜ್ಯ ಮಟ್ಟದ ಕೊಂಕಣಿ ಏಕಾಂಕ ನಾಟಕ ಸ್ಪರ್ಧೆ ನಗರದ ಸೇಂಟ್‌ ಆಂಥೋನಿ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯಿತು.
Vijaya Karnataka Web konkani literature will increase
ಕೊಂಕಣಿ ಸಾಹಿತ್ಯದ ಚಟುವಟಿಕೆ ಹೆಚ್ಚಲಿ


ಜಿಲ್ಲಾ ಕೊಂಕಣಿ ಪರಿಷತ್ತಿನ ಸ್ಥಾಪಕ ಉಪಾಧ್ಯಕ್ಷ ರಾಜೇಂದ್ರ ಕಾಮತ್‌ ಕಿಮಾನೇಕರ್‌ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಕಣಿ ಸಾಹಿತ್ಯ ಭಾಷೆಯ ಚಟುವಟಿಕೆಗಳು ಸತತವಾಗಿ ನಡೆಯುತ್ತಿರುವುದನ್ನು ಗಮನಿಸಿ ಇಲ್ಲಿಯೂ ಒಂದು ಸಂಸ್ಥೆಯನ್ನು ಕಟ್ಟಲು ಪ್ರೇರಣೆಯಾಯಿತು. ಅದಕ್ಕೆ ಡಾ.ಎಲ್‌.ಎಚ್‌.ಪೈ, ಅನೀಲ ಪೈ, ಡಾ.ವಿ. ಎಸ್‌.ಸೋಂದೆ, ಕೂಡ್ಲ ಆನಂದು ಶಾನಭಾಗ ಮುಂತಾದವರು ಸಹಕಾರ ನೀಡಿದರು ಎಂದರು.

ಚಂಡೆ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕೊಂಕಣಿ ಅಕಾಡೆಮಿ ಸದಸ್ಯ ಸ್ಟೀಫನ್‌ ರೊಡ್ರಿಗಸ್‌ ಮಾತನಾಡಿ, ಕೊಂಕಣಿ ಭಾಷಿಗರು ನಾಟಕ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ಕೊಂಕಣಿ ಪರಿಷತ್ತಿನ ಈ ನಾಟಕ ಸ್ಪರ್ಧೆಯ ಕಾರ್ಯ ಸ್ತುತ್ಯರ್ಹ ಎಂದರು.

ಕೂಡ್ಲು ಆನಂದು ಶಾನಭಾಗ ಪ್ರಾಸ್ತಾವಿಕ ಮಾತನಾಡಿ, ಇಸ್ರೇಲ್‌ ಸಣ್ಣ ರಾಷ್ಟ್ರವಾದರೂ ಪ್ರಗತಿಯ ಎಲ್ಲ ಕೋನಗಳಿಂದಲೂ ಜಗತ್ತಿನಲ್ಲಿ ಮುಂದೆ ಇದೆ. ಹಾಗೆಯೇ ಕೊಂಕಣಿ ಭಾಷಿಗರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ, ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಇರುವುದು ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯಲ್ಲಿ ಕೊಂಕಣಿ ನಾಟಕಗಳು ಕರಾವಳಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದ್ದು, ಘಟ್ಟದ ಮೇಲಿನ ಪ್ರದೇಶದಲ್ಲಿ ನಾಟಕದ ಕಂಪು ಬೀರಲು ಈ ನಾಟಕೋತ್ಸವ ಸ್ಪರ್ಧೆ ಸಂಘಟಿಸಲಾಗಿದೆ. ಖ್ಯಾತ ಕೊಂಕಣಿ ನಾಟಕ ಕರ್ಮಿ ದಿ.ಬಾಬುಟಿ ನಾಯ್ಕರ ಸ್ಮರಣೆಯಲ್ಲಿ ಈ ಸ್ಪರ್ಧೆ ನಡೆಯುತ್ತಿದೆ ಎಂದರು.

ಎಂ.ಎಸ್‌.ಪ್ರಭು, ಡಾ.ಸುಜಾತಾ ಫಾತರಫೇಕರ್‌ ಮಾತನಾಡಿದರು. ಜಗದೀಶ ನಾ. ವಂದಿಸಿದರು. ಆಂತೋನ ನೊರೊನ್ಹಾ ನಿರೂಪಿಸಿದರು. ಮಂಗಳೂರಿನ ಮಾಂಡ್‌ ಸೊಭಾಣ್‌ ತಂಡ ಪ್ರಸ್ತುತ ಪಡಿಸಿದ ನಾಟಕ ಆಂಟಿಗ್ಯೊನ್‌ ಪ್ರೇಕ್ಷ ಕರ ಗಮನ ಸೆಳೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ