ಆ್ಯಪ್ನಗರ

ಕೋರ್ಲಕಟ್ಟಾ: ಬೆಳೆವಿಮೆ ಪರಿಹಾರ ನೀಡಿ

ಶಿರಸಿ: ತಾಲೂಕಿನ ಕೋರ್ಲಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ 350ಕ್ಕೂ ಅಧಿಕ ರೈತರಿಗೆ ಅಡಕೆ ಬೆಳೆವಿಮಾ ಪರಿಹಾರ ಬಂದಿಲ್ಲ. ಕೂಡಲೇ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿ ಸೊಸೈಟಿ ಆಡಳಿತ ಮಂಡಳಿಯವರು ಸಹಾಯಕ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು.

Vijaya Karnataka 8 Nov 2019, 6:28 pm
ಶಿರಸಿ: ತಾಲೂಕಿನ ಕೋರ್ಲಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ 350ಕ್ಕೂ ಅಧಿಕ ರೈತರಿಗೆ ಅಡಕೆ ಬೆಳೆವಿಮಾ ಪರಿಹಾರ ಬಂದಿಲ್ಲ. ಕೂಡಲೇ ಪರಿಹಾರ ದೊರಕಿಸಿಕೊಡುವಂತೆ ಆಗ್ರಹಿಸಿ ಸೊಸೈಟಿ ಆಡಳಿತ ಮಂಡಳಿಯವರು ಸಹಾಯಕ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದರು.
Vijaya Karnataka Web 7SRS10_26
ರಸಿಯಲ್ಲಿಕೋರ್ಲಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸಹಾಯಕ ಆಯುಕ್ತ ಕಚೇರಿಯಲ್ಲಿಮನವಿ ಸಲ್ಲಿಸಲಾಯಿತು.


ಕೋರ್ಲಕಟ್ಟಾ ಸೊಸೈಟಿ ವ್ಯಾಪ್ತಿಯ ಕೆಲವು ಸದಸ್ಯರಿಗೆ ಮಾತ್ರ ಬೆಳೆವಿಮಾ ಬಂದಿದೆ. ಇನ್ನೂ 350 ಸದಸ್ಯರಿಗೆ ಬಂದಿಲ್ಲ. ಸಂಘದ ವ್ಯಾಪ್ತಿಯ ಅಂಡಗಿ, ಬದನಗೋಡ, ಹಲಗದ್ದೆ, ಬಂಕನಾಳ, ಸುಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಪ್ರಿಮಿಯಂ ರಕಂ ತುಂಬಿದ್ದರೂ ಖಾತೆಗೆ ಜಮಾ ಆಗಿಲ್ಲ. ಈ ಕುರಿತು ಜಿಲ್ಲಾಮಧ್ಯವರ್ತಿ ಕೆಡಿಸಿಸಿ ಬ್ಯಾಂಕಿನಲ್ಲಿಕೇಳಿದರೆ ಕಂದಾಯ ಇಲಾಖೆಯಿಂದ ಮಾಡಿದ ಬೆಳೆ ಸಮೀಕ್ಷೆಯ ಬೆಳೆ ವಿವರಕ್ಕೂ ಹಾಗೂ ಸಂಘದಲ್ಲಿಸಾಲ ಪಡೆದ ಕ್ಷೇತ್ರದ ಬೆಳೆಯ ವಿವರಕ್ಕೂ ಹೊಂದಾಣಿಕೆ ಇಲ್ಲಎಂದು ತಿಳಿಸಿದ್ದಾರೆ ಎಂದು ಮನವಿಯಲ್ಲಿದೂರಲಾಗಿದೆ.

ಸಂಘದಲ್ಲಿಕಂದಾಯ ಇಲಾಖೆಯವರು ನೀಡಿದ ಪಹಣಿ ಪತ್ರಿಕೆ ಪ್ರಕಾರ ಬೆಳೆಸಾಲ ನೀಡಲಾಗಿದೆ. ಆದರೂ ರೈತರ ಖಾತೆಗೆ ಬೆಳೆವಿಮೆ ಪರಿಹಾರ ಜಮಾ ಆಗಿಲ್ಲ. ಈ ಹಿನ್ನೆಲೆಯಲ್ಲಿರೈತ ಸದಸ್ಯರು ಗೊಂದಲಕ್ಕೀಡಾಗಿದ್ದು, ಅವರಿಗೆ ಉತ್ತರ ನೀಡಲು ಸಂಘದವರು ಅಸಹಾಯಕರಾಗಿದ್ದಾರೆ. ತಕ್ಷಣ ಸಂಬಂಧಪಟ್ಟ ಇಲಾಖೆ ಹಾಗೂ ವಿಮಾ ಕಂಪನಿಗೂ ಮಾಹಿತಿ ಕಳಿಸಿ ರೈತರಿಗೆ ವಿಮಾ ಪರಿಹಾರ ದೊರಕಿಸಿಕೊಡಬೇಕು. ವಿಳಂಬವಾದರೇ ಮುಂದಿನ ದಿನಗಳಲ್ಲಿಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಪಿ.ಟಿ.ನಾಯ್ಕ ಕಂಡ್ರಾಜಿ, ಉಪಾಧ್ಯಕ್ಷೆ ಸುಜಾತಾ ನಾಯ್ಕ, ನಿರ್ದೇಶಕರಾದ ರವಿ ನಾಯ್ಕ ಕಲಕರಡಿ, ನೆಹರೂ ನಾಯ್ಕ, ಲೋಕೇಶ ನಾಯ್ಕ, ಮಂಜಪ್ಪ ನಾಯ್ಕ, ಸಹದೇವ ಕೊರಗರ, ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ ನಾಯ್ಕ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ