ಆ್ಯಪ್ನಗರ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡಿ

ಶಿರಸಿ : ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿದ ಭೂ ಸುಧಾರಣೆ ಕಾಯಿದೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿದ್ದು, ಕೃಷಿ ಆಹಾರ ಉತ್ಪನ್ನ ಕುಂಠಿತವಾಗುವುದರೊಂದಿಗೆ ದೇಶದ ಸಾಮಾಜಿಕ, ಆರ್ಥಿಕ ಸಮಸ್ಯೆಗೆ ನಾಂದಿ ಆಗುವುದರಿಂದ ತಿದ್ದುಪಡಿ ಕೈ ಬಿಡಬೇಕು ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ರಾಜ್ಯ ಸರಕಾರವನ್ನು ಅಗ್ರಹಿಸಿದ್ದಾರೆ.

Vijaya Karnataka 21 Jun 2020, 5:00 am
ಶಿರಸಿ : ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿದ ಭೂ ಸುಧಾರಣೆ ಕಾಯಿದೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿದ್ದು, ಕೃಷಿ ಆಹಾರ ಉತ್ಪನ್ನ ಕುಂಠಿತವಾಗುವುದರೊಂದಿಗೆ ದೇಶದ ಸಾಮಾಜಿಕ, ಆರ್ಥಿಕ ಸಮಸ್ಯೆಗೆ ನಾಂದಿ ಆಗುವುದರಿಂದ ತಿದ್ದುಪಡಿ ಕೈ ಬಿಡಬೇಕು ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ರಾಜ್ಯ ಸರಕಾರವನ್ನು ಅಗ್ರಹಿಸಿದ್ದಾರೆ.
Vijaya Karnataka Web leave land amendment act
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈ ಬಿಡಿ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ಭೂ ಸುಧಾರಣಾ ಕಾಯಿದೆ ಜಾರಿಗೆ ಬಂದು 60 ವರ್ಷದಲ್ಲಿಮೂಲ ಕಾಯಿದೆಯ ತತ್ವ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿ ಕೃಷಿಕರ ಹಿತಕ್ಕೆ ಧಕ್ಕೆ ತರುವ ಕರಾಳ ತಿದ್ದುಪಡಿ ಇದಾಗಿದೆ. ಆದ್ದರಿಂದ ಇಂತಹ ತಿದ್ದುಪಡಿಯನ್ನು ಬಲವಾಗಿ ವಿರೋಧಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಭೂ ಮಾಫಿಯಾಕ್ಕೆ ಅವಕಾಶ : ಕರ್ನಾಟಕದಲ್ಲಿಕೃಷಿ ಭೂಮಿಯು 123,100 ಸ್ಕೆ$ರ್‌ ಕಿಲೋಮೀಟರ್‌ ವಿಸ್ತೀರ್ಣ ಹೊಂದಿದ್ದು ಭೌಗೋಳಿಕವಾಗಿ ಕರ್ನಾಟಕದಲ್ಲಿಶೇ.64.6 ಕೃಷಿ ಜಮೀನು ಹೊಂದಿದೆ. ಕ್ಷೇತ್ರದ ಮೇಲೆ 13.74 ಮಿಲಿಯನ್‌ ರೈತ, ಕೃಷಿ ಕಾರ್ಮಿಕರು ಅವಲಂಭಿತವಾಗಿದ್ದು, ಅವುಗಳಲ್ಲಿಶೇ. 23.61 ಭೂಮಿ ಮಾಲೀಕತ್ವ ಹೊಂದಿದವರಾಗಿದ್ದರೇ, ಶೇ. 25.67 ರಷ್ಟು ಕೃಷಿ ಕಾರ್ಮಿಕರಾಗಿರುವವರಾಗಿದ್ದಾರೆ. ಸರಕಾರ ನಿಯೋಜಿತ ತಿದ್ದುಪಡಿ ತಂದಲ್ಲಿಕೃಷಿಯೇತರ ಚಟುವಟಿಕೆಗಳಿಗೆ ರೈತ ವಿರೋಧಿ ಭೂ ಮಾಫಿಯಾ ಹೆಚ್ಚುವುದರಲ್ಲಿಸಂಶಯವಿಲ್ಲವೆಂದು ರವೀಂದ್ರ ನಾಯ್ಕ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ