ಆ್ಯಪ್ನಗರ

ಪ್ರತಿ ವಿದ್ಯಾರ್ಥಿಗೂ ಉತ್ತಮ ಗುರಿ ಇರಲಿ

ಕುಮಟಾ : ಬಡತನ ಶಾಪವಲ್ಲ. ಅದೊಂದು ಅವಕಾಶ. ಬಡತನವಿದ್ದಾಗ ಬೆಳೆಯಬೇಕೆಂಬ ಹಂಬಲವಾಗುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಛಲ ಹುಟ್ಟುತ್ತದೆ. ಹೀಗೆ ಎಲ್ಲವನ್ನೂ ಸಾಧಿಸಿ ಬೆಳೆದಾಗ ಆತ ಸಮಾಜಕ್ಕೆ ನೆರವಾಗಲು ಹಿಂದೇಟು ಹಾಕುವುದಿಲ್ಲ ಎಂದು ಉದ್ದಿಮೆದಾರರು ಮತ್ತು ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಹೇಳಿದರು.

Vijaya Karnataka 10 Jan 2019, 5:00 am
ಕುಮಟಾ : ಬಡತನ ಶಾಪವಲ್ಲ. ಅದೊಂದು ಅವಕಾಶ. ಬಡತನವಿದ್ದಾಗ ಬೆಳೆಯಬೇಕೆಂಬ ಹಂಬಲವಾಗುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಛಲ ಹುಟ್ಟುತ್ತದೆ. ಹೀಗೆ ಎಲ್ಲವನ್ನೂ ಸಾಧಿಸಿ ಬೆಳೆದಾಗ ಆತ ಸಮಾಜಕ್ಕೆ ನೆರವಾಗಲು ಹಿಂದೇಟು ಹಾಕುವುದಿಲ್ಲ ಎಂದು ಉದ್ದಿಮೆದಾರರು ಮತ್ತು ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಹೇಳಿದರು.
Vijaya Karnataka Web let each student have a good goal
ಪ್ರತಿ ವಿದ್ಯಾರ್ಥಿಗೂ ಉತ್ತಮ ಗುರಿ ಇರಲಿ


ತಾಲೂಕಿನ ಅಳ್ವೇಕೋಡಿಯ ನಿರ್ಮಲಾ ಕಾಮತ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷ ಣದ ಜತೆಗೆ ವೇದಿಕೆಗಳಲ್ಲಿ ತಮ್ಮ ಪ್ರತಿಭೆಗಳನ್ನು ಬೆಳಗಿಸುವ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕು ಎಂದರು. ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಎಂ.ಆರ್‌. ಉಪಾಧ್ಯಾಯ ಶಿಕ್ಷ ಕನೊಬ್ಬ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಉತ್ತೀರ್ಣ ಮಾಡುವ ಗುರಿಯನ್ನು ಇಟ್ಟುಕೊಂಡಾಗ ಶಾಲೆಗೆ ಉತ್ತಮ ಫಲಿತಾಂಶ ಬರುತ್ತದೆ. ಮುಂದಿನ ವರ್ಷದಲ್ಲಿ ಶಾಲೆಯು ಉತ್ತಮ ಫಲಿತಾಂಶ ಬರಲೆಂದು ಹಾರೈಸಿದರು.

ಅಧ್ಯಕ್ಷ ತೆ ವಹಿಸಿದ್ದ ಎಚ್‌.ಎನ್‌. ನಾಯ್ಕ ನಮ್ಮ ಶಾಲೆಯಿಂದ ಪ್ರತಿ ವರ್ಷ ಮಕ್ಕಳಿಗೆ ಉಚಿತ ಸಮವಸ್ತ್ರ, ಕಲಿಕಾ ಸಾಮಗ್ರಿಗಳು, ಗುಣಮಟ್ಟದ ಶಿಕ್ಷ ಣವನ್ನು ನೀಡುತ್ತಿದ್ದು, ಪಾಲಕರು ಜವಾಬ್ದಾರಿಯಿಂದ ಮಕ್ಕಳನ್ನು ಶಾಲೆಗೆ ಕಳಿಸಬೇಕು. ಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕಳೆದ ವರ್ಷ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ವೇದಿಕೆಯಲ್ಲಿ ಕಲಭಾಗ ಗ್ರಾ.ಪಂ. ಅಧ್ಯಕ್ಷ ವಿರೂಪಾಕ್ಷ ಎನ್‌. ನಾಯ್ಕ, ಸಂಸ್ಥೆಯ ಉಪಾಧ್ಯಕ್ಷ ಸಂಜೀವ ಕಾಮತ್‌, ಸದಸ್ಯರುಗಳಾದ ಜೈವಿಠಲ ಕುಬಾಲ, ನಾರಾಯಣ ಕೆ. ಮುಕ್ರಿ, ಎಸ್‌. ಆಯ್‌. ಗಾವಡಿ, ಜಿ.ವಿ. ಪಟಗಾರ, ಎಂ.ಎನ್‌. ನಾಯ್ಕ, ಜಿ.ಎಚ್‌. ನಾಯ್ಕ, ಏಕನಾಥ ಕೆ. ರಾವುತ್ಕರ್‌ ಮುಂತಾದವರು ಉಪಸ್ಥಿತರಿದ್ದರು. ಕುಮಾರಿ ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು. ಏಕನಾಥ ಕೆ. ರಾವುತ್ಕರ್‌ ಸ್ವಾಗತಿಸಿದರು. ಜಿ.ಎಚ್‌. ನಾಯ್ಕ ವರದಿ ವಾಚಿಸಿದರು. ಶಿಕ್ಷ ಕರಾದ ನಾಗರಾಜ ಕೆ.ಬಿ. ವಂದಿಸಿ, ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ