ಆ್ಯಪ್ನಗರ

ಶಿಕ್ಷಕರೂ ಓದುವ ಪ್ರವೃತ್ತಿ ರೂಢಿಸಿಕೊಳ್ಳಲಿ

ಅಂಕೋಲಾ : ಶಿಕ್ಷಕರು ಸಹ ಪ್ರತಿದಿನ ಓದುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು. ಓದಿನಿಂದ ಶಿಕ್ಷಕರಲ್ಲಿಇನ್ನೂ ಹೆಚ್ಚಿನ ಪ್ರಭುದ್ಧತೆ, ಸೃಜನಶೀಲತೆ ಅನಾವರಣಗೊಳ್ಳುತ್ತದೆ ಎಂದು ಪೂರ್ಣಪ್ರಜ್ಞಾ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರೇಮಾನಂದ್‌ ಮಡಿವಾಳ ಹೇಳಿದರು.

Vijaya Karnataka 5 Jan 2020, 5:00 am
ಅಂಕೋಲಾ : ಶಿಕ್ಷಕರು ಸಹ ಪ್ರತಿದಿನ ಓದುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು. ಓದಿನಿಂದ ಶಿಕ್ಷಕರಲ್ಲಿಇನ್ನೂ ಹೆಚ್ಚಿನ ಪ್ರಭುದ್ಧತೆ, ಸೃಜನಶೀಲತೆ ಅನಾವರಣಗೊಳ್ಳುತ್ತದೆ ಎಂದು ಪೂರ್ಣಪ್ರಜ್ಞಾ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರೇಮಾನಂದ್‌ ಮಡಿವಾಳ ಹೇಳಿದರು.
Vijaya Karnataka Web let the teacher adopt the tendency to read
ಶಿಕ್ಷಕರೂ ಓದುವ ಪ್ರವೃತ್ತಿ ರೂಢಿಸಿಕೊಳ್ಳಲಿ


ಅವರು ಶನಿವಾರ ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯದ ತಂಡ ಬೋಧನಾ ಶಿಬಿರದ ಸಮಾರೋಪ ಸಮಾರಂಭದಲ್ಲಿಕರುಣ ಸಾಗರ ಹಸ್ತಪ್ರತಿ ಬಿಡುಗಡೆಗೊಳಿಸಿ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಸಾಮಾಜಿಕವಾಗಿ ತಮ್ಮದೆ ಆದ ಜವಾಬ್ದಾರಿಯಿದೆ ಎಂದರು. ಶಿಬಿರದ ಮಾರ್ಗದರ್ಶಕ, ಪ್ರಾಧ್ಯಾಪಕ ಮಂಜುನಾಥ ಇಟಗಿ, ಸಹಶಿಕ್ಷಕ ಗೋವಿಂದ ನಾಯ್ಕ, ಪ್ರಶಿಕ್ಷಣಾರ್ಥಿ ಅಂಜಲಿ ಕುರ್ಲೆ ಮಾತನಾಡಿದರು. ಪ್ರಶಿಕ್ಷಣಾರ್ಥಿ ಪ್ರಜ್ಞಾ ಸಂಗಡಿಗರು ಪ್ರಾರ್ಥಿಸಿದರು, ಜಯಾ ಮುಕ್ರಿ ಸ್ವಾಗತಿಸಿದರು. ರೇಷ್ಮಾ ಅಂಬಿಗ ವರದಿ ವಾಚಿಸಿದರು. ಸವಿತಾ ಲಮಾಣಿ ಬಹುಮಾನಯಾದಿ ವಾಚಿಸಿದರು, ನವ್ಯಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಅರ್ಪಿತಾ ನಾಯಕ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ