ಆ್ಯಪ್ನಗರ

ಮಹಿಳೆ ಪರಿಪೂರ್ಣ ಸಮಾನತೆ ಸಾಧಿಸಲಿ

ಅಂಕೋಲಾ : ಮಹಿಳೆಯರನ್ನು ಮಾತೃ ಸಮಾನ ರೂಪದಲ್ಲಿ ಕಾಣುವ ಭಾರತ ದೇಶದಲ್ಲಿ, ಮಹಿಳೆಯರ ಪರ ಸುಭದ್ರ ಕಾನೂನು ರೂಪಿಸಲ್ಪಟ್ಟಿದೆ. ಇದರ ಸದಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವುದರೊಂದಿಗೆ ಸಮಾಜದಲ್ಲಿ ಪರಿಪೂರ್ಣ ಮಹಿಳೆಯಾಗಿ ಸಮಾನತೆ ಸಾಧಿಸಬೇಕಿದೆ ಎಂದು ಜೆ.ಎಂ.ಎಫ್‌.ಸಿ. ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸುಹೇಲ ಅಹಮದ್‌ ಎಸ್‌. ಕುನ್ನಿಭಾವಿ ಹೇಳಿದರು.

Vijaya Karnataka 9 Mar 2019, 5:00 am
ಅಂಕೋಲಾ : ಮಹಿಳೆಯರನ್ನು ಮಾತೃ ಸಮಾನ ರೂಪದಲ್ಲಿ ಕಾಣುವ ಭಾರತ ದೇಶದಲ್ಲಿ, ಮಹಿಳೆಯರ ಪರ ಸುಭದ್ರ ಕಾನೂನು ರೂಪಿಸಲ್ಪಟ್ಟಿದೆ. ಇದರ ಸದಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವುದರೊಂದಿಗೆ ಸಮಾಜದಲ್ಲಿ ಪರಿಪೂರ್ಣ ಮಹಿಳೆಯಾಗಿ ಸಮಾನತೆ ಸಾಧಿಸಬೇಕಿದೆ ಎಂದು ಜೆ.ಎಂ.ಎಫ್‌.ಸಿ. ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸುಹೇಲ ಅಹಮದ್‌ ಎಸ್‌. ಕುನ್ನಿಭಾವಿ ಹೇಳಿದರು.
Vijaya Karnataka Web KWR-8ANK1


ಇಲ್ಲಿಯ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ, ವಕೀಲರ ಸಂಘ ಅಂಕೋಲಾ, ರೋಟರಿ ಕ್ಲಬ್‌,ಅಂಕೋಲಾ ಹಾಗೂ ನಿಸರ್ಗ ಸಂಪನ್ಮೂಲ ಕೇಂದ್ರ (ಮೈರಾಡಾ) ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾನೂನು ಸಾಕ್ಷ ರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಗಜಾನನ ನಾಯ್ಕ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಮಹಿಳೆ ಸಮಾಜದ ಕಣ್ಣಾಗಿದ್ದಾಳೆ. ಪುರುಷರನ್ನು ಮೀರುವ ಸಾಧನೆಯೊಂದಿಗೆ ಮಹಿಳೆಯರು ಸ್ವಾವಲಂಬಿ ಬದುಕನ್ನು ಸಾಧಿಸುವದರೊಂದಿಗೆ ಇತರರರಿಗೆ ಮಾದರಿಯಾಗಿದ್ದಾರೆ ಎಂದರು.

ಕೆ.ಎಲ್‌.ಇ. ಬಿ.ಎಡ್‌.ಕಾಲೇಜಿನ ಪ್ರಾಚಾರ್ಯ ವಿನಾಯಕ ಹೆಗಡೆ, ಡಾ.ಅವಿನಾಶ ತಿನೇಕರ, ನಿಸರ್ಗ ಸಂಪನ್ಮೂಲ ಕೇಂದ್ರದ ವ್ಯವಸ್ಥಾಪಕ ಅಶೋಕ ಗೌಡ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಉಪನ್ಯಾಸಕಿ ಪುಷ್ಪಾ ಎ. ನಾಯ್ಕ ಸ್ವಾಗತಿಸಿದರು. ನ್ಯಾಯವಾದಿ ವಿನೋದ ಶ್ಯಾನಭಾಗ ಪ್ರಾಸ್ತಾವಿಕ ಮಾತನಾಡಿದರು. ನ್ಯಾಯವಾದಿ ಉಮೇಶ ನಾಯ್ಕ ನಿರೂಪಿಸಿದರು. ನ್ಯಾಯವಾದಿ ನಾಗಾನಂದ ಬಂಟ ವಂದಿಸಿದರು. ಸಹಾಯಕ ಸರಕಾರಿ ಅಭಿಯೋಜಕ ಮಹಾದೇವ ಗಡದ ಅವರು ಮಹಿಳೆ ಮತ್ತು ಕಾನೂನು ವಿಷಯದ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಗೀತಾ ಬಿ. ನಾಯಕ, ಯೋಧನ ತಾಯಿ ರಮಾ ಯಶ್ವಂತ ನಾಯ್ಕ, ಡಾ. ಶ್ರೀದೇವಿ ಅವಿನಾಶ ತಿನೇಕರ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ