ಆ್ಯಪ್ನಗರ

ಗೋಕರ್ಣದಲ್ಲಿ ಕಸದಿಂದ ಕಾಸು

ಗೋಕರ್ಣ : ಇಲ್ಲಿನ ಪಂಚಾಯತಿ ವಿವಿಧ ಪ್ರಕಾರದ ಕಸ ಸಂಸ್ಕರಣಕ್ಕಾಗಿ ಪ್ರತ್ಯೇಕ ಘನ ಮತ್ತು ದ್ರವ ಸಂಪನ್ಮೂಲ ಘಟಕವನ್ನು ಇತ್ತೀಚೆ ಪ್ರಾರಂಭಿಸಿದೆ. ಜಿಲ್ಲೆಯಲ್ಲಿ ಪಂಚಾಯತಿ ವತಿಯಿಂದ ಆರಂಭಿಸಲಾದ ಮೊದಲ ಘಟಕ ಇದಾಗಿದೆ. ಗೋಕರ್ಣದ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಎಲ್ಲ ಬಗೆಯ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಸಂಗ್ರಹಿಸಿಡುವ ಕೆಲಸ ಇಲ್ಲಿ ಮಾಡಲಾಗುತ್ತಿದೆ.ಇಲ್ಲಿ ಬೇಡ ಎಂಬ ಯಾವ ತ್ಯಾಜ್ಯವೂ ಇಲ್ಲ.ಎಲ್ಲ ಬಗೆಯ ತ್ಯಾಜ್ಯಕ್ಕೆ ಇಲ್ಲಿ ಬೆಲೆ ತರುವ ಕಾರ್ಯ ಮಾಡಲಾಗುತ್ತಿದೆ. ಪ್ಲಾಸ್ಟಿಕ್‌ ಮತ್ತು ಸೀಸದ ಬಾಟ್ಲಿಗಳ ಹೊರತಾಗಿ ರಟ್ಟು,ಗ್ಲಾಸ್‌,ಹಾಳಾದ ಎಲೆಕ್ಟ್ರಾನಿಕ್‌ ವಸ್ತುಗಳಿಗೂ ಇಲ್ಲಿ ಸ್ಥಾನವಿದೆ. ಇಷ್ಟು ಮಾತ್ರವಲ್ಲದೆ ಸಾರ್ವಜನಿಕವಾಗಿ ಎಸೆಯಲಾದ ಮೊಟ್ಟೆ ಓಡು (ಕವಚ)ನಿಂದ ಗೊಬ್ಬರ ತಯಾರಿಸುವ ಪ್ರಯತ್ನಕ್ಕೆ ಮುಂದಾಗಲಾಗಿದೆ. ಇವೆಲ್ಲವುಗಳನ್ನೂ ವಿಂಗಡಿಸಿ ಇಟ್ಟು ಇವುಗಳನ್ನು ಟೆಂಡರ್‌ ಮೂಲಕ ಮಾರಾಟ ಮಾಡಲಾಗುವುದು.ಕಟ್ಟಡಕ್ಕೆ ತಗುಲಿದ ಅಂದಾಜು 2 ಲಕ್ಷ ರೂ ಅನ್ನು ಪಂಚಾಯತಿಗೆ ಖರ್ಚು ಹಾಕದೆ ದಾನಿಗಳ ದೇಣಿಗೆಯಿಂದ ಸಂಗ್ರಹಿಸುವ ವಿನೂತನ ಯತ್ನ ಮಾಡಲಾಗಿರುವುದು ಸಾರ್ವಜನಿಕ ಪ್ರಶಂಸೆಗೆ ಕಾರಣವಾಗಿದೆ. ಸದ್ಯ ಈ ಘಟಕದಲ್ಲಿ 7 ಮಹಿಳಾ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.ಇದಕ್ಕಾಗಿ ವಾರ್ಷಿಕ 6ರಿಂದ 7 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ.

Vijaya Karnataka 15 Jul 2019, 5:00 am

Vijaya Karnataka Web litter in gokarna
ಗೋಕರ್ಣದಲ್ಲಿ ಕಸದಿಂದ ಕಾಸು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ