ಆ್ಯಪ್ನಗರ

‘ದೇಶ, ಧರ್ಮ ರಕ್ಷಣೆ ನಿರಂತರವಾಗಿರಲಿ’

ಕುಮಟಾ : ಚುನಾವಣೆಯ ಫಲಿತಾಂಶ ಏನೇ ಬರಲಿ ದೇಶ, ಧರ್ಮ ರಕ್ಷ ಣೆಯ ಕಾರ್ಯ ನಡೆಯುತ್ತಿರಬೇಕು. ನಮಗೆ ಯಾವತ್ತೂ ಭಗವಾ ಧ್ವಜ ಗುರುವಾಗಿರಬೇಕು ಎಂದು ಕೇಂದ್ರ ಸಚಿವ ಹಾಗೂ ಸಂಸದ ಅನಂತಕುಮಾರ ಹೆಗಡೆ ಹೇಳಿದರು.

Vijaya Karnataka 6 May 2019, 5:00 am
ಕುಮಟಾ : ಚುನಾವಣೆಯ ಫಲಿತಾಂಶ ಏನೇ ಬರಲಿ ದೇಶ, ಧರ್ಮ ರಕ್ಷ ಣೆಯ ಕಾರ್ಯ ನಡೆಯುತ್ತಿರಬೇಕು. ನಮಗೆ ಯಾವತ್ತೂ ಭಗವಾ ಧ್ವಜ ಗುರುವಾಗಿರಬೇಕು ಎಂದು ಕೇಂದ್ರ ಸಚಿವ ಹಾಗೂ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
Vijaya Karnataka Web KWR-PHT 5 KMT 1


ಭಾನುವಾರ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದೆ. ಕಾರ್ಯಕರ್ತರ ಪರಿಶ್ರಮ, ಪ್ರಾಮಾಣಿಕತೆಯಿಂದ ವಿಶೇಷ ಅಪೇಕ್ಷೆಯಿಲ್ಲದೇ ಚುನಾವಣೆ ನಡೆದಿದೆ. ಕಣ್ಣಿಗೆ ಕಾಣುವುದು ಮಾತ್ರ ಅಭಿವೃದ್ಧಿ ಅಲ್ಲ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಸರಕಾರ ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು ಕಾರ್ಯಕರ್ತರ ಜವಾಬ್ದಾರಿ. ಮನೆಯ ಮಕ್ಕಳ ಅಗತ್ಯಕ್ಕೆ ತಕ್ಕಂತೆ ಎಲ್ಲವನ್ನೂ ಈಡೇರಿಸಿದರೆ ಮಕ್ಕಳು ತಪ್ಪು ಮಾರ್ಗದಲ್ಲಿ ಸಾಗುತ್ತಾರೆ ವಿನಃ ಸಮಾಜವಲ್ಲ. ಆ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳ ಬದಲಾಗಿ ಬೌದ್ಧಿಕ ವಿಕಾಸ ಸಮಾಜದಲ್ಲಿ ಬೆಳೆಯಬೇಕು ಎಂದರು.

ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಗೆಲ್ಲುವುದು ಸುಲಭ. ಆದರೆ, ಗೆಲುವನ್ನು ಮುಂದುವರೆಸಿಕೊಂಡು ಹೋಗುವುದು ಕಷ್ಟ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ವಿಶಿಷ್ಟವಾದ ಪರಂಪರೆಗಳನ್ನಿಟ್ಟುಕೊಂಡು ಚುನಾವಣೆ ಎದುರಿಸಿದ ಕ್ಷೇತ್ರ ನಮ್ಮದು. ಇಲ್ಲಿಯ ಸಂಘಟನಾ ಶಕ್ತಿ, ಕಾರ್ಯಕರ್ತರ ಶ್ರದ್ಧೆಯನ್ನು ಇನ್ನೆಲ್ಲಿಯೂ ಕಾಣಲಿಕ್ಕೆ ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಮಿಷ, ವಿಶೇಷ ಅಪೇಕ್ಷ ಗಳಿಲ್ಲದೇ ಕೇವಲ ಸಂಘಟನೆ, ರಾಷ್ಟ್ರ ಭಕ್ತಿಯ ಕಾರ್ಯವೆಂದು ಭಾವಿಸಿ ಇಲ್ಲಿಯ ಜನರು ಸಂಘಟನೆಯಲ್ಲಿ ತೊಡಗಿಕೊಳ್ಳುವುದು ವಿಶೇಷವಾಗಿದೆ. ಅಲ್ಲದೇ ಮತ್ತೊಮ್ಮೆ ಚುನಾವಣೆ ಎದುರಾಗುವ ಸಾಧ್ಯತೆ ಇರುವುದರಿಂದ ಕಾರ್ಯಕರ್ತರು ವಿಶ್ರಾಂತಿ ಮರೆತು ಕೆಲಸ ಮಾಡಬೇಕಿದೆ ಎಂದರು.

ಜಿಲ್ಲಾ ಸಂಚಾಲಕರಾದ ಲಿಂಗರಾಜ್‌ ಪಾಟೀಲ, ವಿನೋದ ಪ್ರಭು, ಮಾಧ್ಯಮ ಜಿಲ್ಲಾ ಸಂಚಾಲಕ ನಾಗರಾಜ ನಾಯಕ, ಕ್ಷೇತ್ರ ಸಂಚಾಲಕ ಎಂ.ಜಿ.ಭಟ್‌, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು, ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ ಮಾತನಾಡಿ, ಅನಂತಕುಮಾರ ಹೆಗಡೆ ಗೆಲುವು ಶತಸ್ಸಿದ್ಧ ಎಂದರು.

ಅಲ್ಲದೇ ಹಣವಿಲ್ಲದೇ ಚುನಾವಣೆ ಗೆಲ್ಲಲು ಸಾಧ್ಯ ಎಂಬುದಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಮಾದರಿಯಾಗಿದೆ. ಕಾಂಗ್ರೆಸ್‌ ಪಕ್ಷ ದ ಬಹುತೇಕ ನಾಯಕರು ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿದ್ದಾರೆ. ಹಾಗಾಗಿ ಅನಂತಕುಮಾರ ಹೆಗಡೆ ಅವರು 3 ಲಕ್ಷ ಕ್ಕೂ ಅಧಿಕ ಮತಗಳಿಂದ ಗೆಲ್ಲಾತ್ತಾರೆ ಎಂದರು.

ಬಿಜೆಪಿ ತಾಲೂಕಾ ಉಪಾಧ್ಯಕ್ಷ ಗಣೇಶ ಅಂಬಿಗ ಅಧ್ಯಕ್ಷ ತೆ ವಹಿಸಿದ್ದರು. ಪ್ರಶಾಂತ ನಾಯ್ಕ ಸ್ವಾಗತಿಸಿದರು. ಹೇಮಂತಕುಮಾರ ಗಾಂವ್ಕರ್‌ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ