ಆ್ಯಪ್ನಗರ

ಸಂಕಷ್ಟದಲ್ಲಿ ಮೆಕ್ಕೆಜೋಳ ರೈತರು

ಬಸವರಾಜ ವೀ. ಪಾಟೀಲ್‌ ಮುಂಡಗೋಡ: ಮುಂಡಗೋಡ ತಾಲೂಕಿನ ರೈತರು ಲಾಭದಾಯಕ ಬೆಳೆಯಾದ ಮೆಕ್ಕೆಜೋಳದತ್ತ ಹೆಚ್ಚಿನ ಒಲವು ತೋರಿದ್ದಾರೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿಈ ವರ್ಷ ಮೆಕ್ಕೆಜೋಳ ಬೆಳೆದಿದ್ದಾರೆ. ಕಡಿಮೆ ಖರ್ಚು, ಕಡಿಮೆ ಕೆಲಸ ಅನ್ನುವ ಕಾರಣಕ್ಕೆ ಈ ಬೆಳೆಯತ್ತ ರೈತರು ಹೆಚ್ಚು ಆಸಕ್ತಿ ಹೊಂದಿದ್ದಾರೆ.

Vijaya Karnataka 24 Oct 2019, 5:00 am
ಬಸವರಾಜ ವೀ. ಪಾಟೀಲ್‌ ಮುಂಡಗೋಡ: ಮುಂಡಗೋಡ ತಾಲೂಕಿನ ರೈತರು ಲಾಭದಾಯಕ ಬೆಳೆಯಾದ ಮೆಕ್ಕೆಜೋಳದತ್ತ ಹೆಚ್ಚಿನ ಒಲವು ತೋರಿದ್ದಾರೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿಈ ವರ್ಷ ಮೆಕ್ಕೆಜೋಳ ಬೆಳೆದಿದ್ದಾರೆ. ಕಡಿಮೆ ಖರ್ಚು, ಕಡಿಮೆ ಕೆಲಸ ಅನ್ನುವ ಕಾರಣಕ್ಕೆ ಈ ಬೆಳೆಯತ್ತ ರೈತರು ಹೆಚ್ಚು ಆಸಕ್ತಿ ಹೊಂದಿದ್ದಾರೆ.
Vijaya Karnataka Web maize farmers in distress
ಸಂಕಷ್ಟದಲ್ಲಿ ಮೆಕ್ಕೆಜೋಳ ರೈತರು


ತಾಲೂಕಿನಲ್ಲಿ13 ಸಾವಿರ ಎಕರೆ ಪ್ರದೇಶದಲ್ಲಿಮೆಕ್ಕೆಜೋಳ ಬೆಳೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 3.5 ಸಾವಿರ ಎಕರೆ ಪ್ರದೇಶದಲ್ಲಿಹೆಚ್ಚು ಬೆಳೆ ಬೆಳೆದಿದ್ದಾರೆ, ಹತ್ತು ವರ್ಷದ ಹಿಂದೆ ಈ ಬೆಳೆಯನ್ನು ಟಿಬೇಟಿಯನ್ನರು ಮಾತ್ರ ಹೆಚ್ಚು ಬೆಳೆಯುತ್ತಿದ್ದರು. ನಂತರ ತಾಲೂಕಿನ ಅತಿಕ್ರಮಣದಾರ ರೈತರು ಬೆಳೆಯಲು ಪ್ರಾರಂಭಿಸಿದರು. ಅರಣ್ಯದ ಮಣ್ಣು ಫಲವತ್ತಾಗಿದ್ದರಿಂದ ಭರ್ಜರಿ ಬೆಳೆ ಬರಲಾರಂಭಿಸಿತು. ಈ ಬೆಳೆಯತ್ತ ಹೆಚ್ಚು ರೈತರು ಆಸಕ್ತಿ ಹೊಂದಿದರು. ಈಗ ಭತ್ತ ಬೆಳೆಯುವ ಬಹುತೇಕ ಪ್ರದೇಶದಲ್ಲಿಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಇದು ಲಾಭದಾಯಕ ಬೆಳೆಯಾಗಿ ಮಾರ್ಪಟ್ಟಿದೆ.

ವ್ಯಾಪಾರಸ್ಥರು ಸಹ ಈ ಭಾಗದಲ್ಲಿಹೆಚ್ಚಾಗಿದ್ದು, ಅವರು ರೈತರ ಜಮೀನಿಗೆ, ಮನೆಗೆ ಬಂದು ಖರೀದಿಸುತ್ತದ್ದಾರೆ. ಕಳೆದ ವರ್ಷ ಈ ಸಮಯದಲ್ಲಿಕ್ವಿಂಟಲ್‌ ಮೆಕ್ಕೆಜೋಳಕ್ಕೆ 1300ರಿಂದ 1400 ರೂ.ವರೆಗೆ ಖರೀದಿಯಾಗಿತ್ತು. ಆದರೆ ಈ ವರ್ಷ ಕ್ವಿಂಟಲ್‌ಗೆ 1900 ರಿಂದ 2100 ರೂ.ವರೆಗೆ ಖರೀದಿ ಆಗಿದೆ.

ಮಳೆ ಕಾರಣಕ್ಕೆ ಹಾನಿ:
ಆಗಸ್ಟ್‌, ಸೆಪ್ಟೆಂಬರ್‌ನಲ್ಲಿಸಾಕಷ್ಟು ಮಳೆ ಆಗಿದ್ದ ಪರಿಣಾಮ ಮೆಕ್ಕೆಜೋಳಕ್ಕೆ ಹೆಚ್ಚಿನ ಹಾನಿ ಆಗಿತ್ತು, ಸತತ ನೀರು ನಿಂತ ಪರಿಣಾಮ ಬೆಳೆ ಕುಸಿದಿತ್ತು, ಮೆಕ್ಕೆಜೋಳ ಹೂವು ಬಿಡುವ ಹಂತದಲ್ಲಿಮಳೆ ಸುರಿದಿದ್ದರಿಂದಾಗಿ ಪರಾಗ ಸ್ಪರ್ಷಕ್ಕೆ ಅಡಚಣೆ ಆಗಿ ಹೂವು ಉದುರಿತ್ತು, ತೆನೆ ಚಿಕ್ಕದಾಗಿತ್ತು, ಸೆಪ್ಟೆಂಬರ್‌ದಲ್ಲಿಮಳೆ ಕಾಟ ಹೆಚ್ಚಾಗಿದ್ದರಿಂದ ಕಟಾವು ವಿಳಂಬ ಆಗಿತ್ತು. ಈಗ ಮತ್ತೆ ಮಳೆ ಸುರಿಯುತ್ತಿರುವುದರಿಂದ ಕಟಾವು ಮಾಡಿದ ತೆನೆ ಮತ್ತು ಕಾಳನ್ನು ಒಣಗಿಸಲು ರೈತರು ಪರದಾಡುತ್ತಿದ್ದಾರೆ. ವಾರದಿಂದ ಮೆಕ್ಕೆಜೋಳದ ಕಾಳಿಗೆ ತಾಡಪಲ್‌ ಮುಚ್ಚಿದ್ದಾರೆ, ಇದರಿಂದಾಗಿ ಫಂಗಸ್‌ ಬಂದು ಕಪ್ಪಾಗುತ್ತಿವೆ, ಕಟಾವಿಗೆ ಬಂದಿರುವ ಮೆಕ್ಕೆಜೋಳದ ತೆನೆಯಲ್ಲಿನೀರು ಹೋಗುವುದರಿಂದಾಗಿ ಅಲ್ಲಿಯೂ ಫಂಗಸ್‌ ಬಂದು ಕಾಳು ಕಪ್ಪಾಗುತ್ತಿವೆ, ಇದರಿಂದಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ, ರೈತರು ಈಗ ಚಿಂತಾಕ್ರಾಂತರಾಗಿದ್ದಾರೆ, ಹೀಗೆ ಇನ್ನೊಂದು ವಾರ ಮಳೆ ಸುರಿದರೆ ಬಹುತೇಕ ಮೆಕ್ಕೆಜೋಳ ಹಾಳಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ