ಆ್ಯಪ್ನಗರ

ಭಟ್ಕಳ: ಎಸ್‌ಬಿಐನಲ್ಲಿ ಒಂದೂವರೆ ಕೋಟಿ ಗಾಯಬ್‌, ಮ್ಯಾನೇಜರ್ ಪರಾರಿ, ಪೊಲೀಸ್ ತನಿಖೆ ಚುರುಕು

ಆರ್ಥಿಕ ವರ್ಷಾಂತ್ಯಕ್ಕೆ ಆಡಿಟ್ ರಿಪೋರ್ಟ್ ಸಲ್ಲಿಸುವ ವೇಳೆ ಒಂದೂವರೆ ಕೋಟಿ ರೂಪಾಯಿ ವ್ಯತ್ಯಾಸ ಕಂಡುಬಂದಿದ್ದು, ಶಾಖೆಯ ಮ್ಯಾನೇಜರ್‌ಗೆ ಮಾರ್ಚ್‌ನಲ್ಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.

Lipi 25 Apr 2022, 7:47 pm
ಭಟ್ಕಳ: ಎಲ್ಲಿಯವರೆಗೆ ಮೋಸ ಹೋಗೋರು ಇರ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರೂ ಇರ್ತಾರೆ ಅನ್ನೋದನ್ನ ಕೇಳಿದ್ದೇವೆ. ಫೈನಾನ್ಸ್, ಚಿಟ್ ಫಂಡ್‌ಗಳ ಹೆಸರಿನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ದುಪ್ಪಟ್ಟು ಕೊಡುತ್ತೇವೆಂದು ಜನರನ್ನ ಮರಳು ಮಾಡಿ ಹಣ ದೋಚಿ ಪರಾರಿಯಾಗಿರುವಂಥ ಸಾಕಷ್ಟು ಪ್ರಕರಣಗಳನ್ನ ಹಿಂದೆಲ್ಲ ನೋಡಿದ್ದೇವೆ. ಆದರೆ ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ‍್ರೇ ಬ್ಯಾಂಕ್‌ಗೆ ಕೋಟಿಗಟ್ಟಲೆ ಹಣ ಪಂಗನಾಮ ಹಾಕಿರುವ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.
Vijaya Karnataka Web major bank fraud in uttara kannada sbi
ಭಟ್ಕಳ: ಎಸ್‌ಬಿಐನಲ್ಲಿ ಒಂದೂವರೆ ಕೋಟಿ ಗಾಯಬ್‌, ಮ್ಯಾನೇಜರ್ ಪರಾರಿ, ಪೊಲೀಸ್ ತನಿಖೆ ಚುರುಕು


ರಾಷ್ಟ್ರೀಕೃತ ಬ್ಯಾಂಕುಗಳು ವಿಶ್ವಾಸಾರ್ಹ ಬ್ಯಾಂಕುಗಳು. ತಮ್ಮ ಹಣ ಹೂಡಿಕೆ ಮಾಡಿದರೆ ಎಲ್ಲೂ ಹೋಗಲ್ಲ. ಹಣ, ಅಡವಿಟ್ಟ ಚಿನ್ನಾಭರಣಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಿಗುವಷ್ಟು ಭದ್ರತೆ ಬೇರೆಲ್ಲೂ ಸಿಗುವುದಿಲ್ಲ ಎಂದುಕೊಳ್ಳೋರೆ ಹೆಚ್ಚು. ಆದರೆ ಭಟ್ಕಳದ ಈ ಪ್ರಕರಣ ಮಾತ್ರ ರಾಷ್ಟ್ರೀಕೃತ ಬ್ಯಾಂಕುಗಳ ಮೇಲಿನ ಈ ನಂಬಿಕೆಯನ್ನ ಹುಸಿ ಮಾಡಿಬಿಟ್ಟಿದೆ.

ಉತ್ತರ ಕನ್ನಡದಲ್ಲಿ ಅಪಘಾತ ಕಡಿಮೆ, ಸಾವಿನ ಸಂಖ್ಯೆ ಹೆಚ್ಚು..! ಹೆದ್ದಾರಿ ವಿಸ್ತರಣೆಯೇ ಕಂಟಕ..!

ಹೌದು, ಭಟ್ಕಳ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ರೋಡ್‌ನಲ್ಲಿರುವ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಜಾರ್ ಶಾಖೆಯಲ್ಲಿ ಒಂದೂವರೆ ಕೋಟಿ ರೂಪಾಯಿ ಮಿಸ್‌ ಆಗಿದೆ. ಆರ್ಥಿಕ ವರ್ಷಾಂತ್ಯಕ್ಕೆ ಆಡಿಟ್ ರಿಪೋರ್ಟ್ ಸಲ್ಲಿಸುವ ವೇಳೆ ಒಂದೂವರೆ ಕೋಟಿ ರೂಪಾಯಿ ವ್ಯತ್ಯಾಸ ಕಂಡುಬಂದಿದ್ದು, ಶಾಖೆಯ ಮ್ಯಾನೇಜರ್, ಮಂಗಳೂರು ಕಾವೂರು ಮೂಲದ ಅನೂಪ್ ಪೈ ಎನ್ನುವಾತನಿಗೆ ಮಾರ್ಚ್‌ನಲ್ಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ನೋಟಿಸ್‌ಗೆ ಉತ್ತರಿಸದ ಕಾರಣ ಅನೂಪ್ ಅವರನ್ನ ಅಂದೇ ಸಸ್ಪೆಂಡ್ ಮಾಡಿ ಆದೇಶಿಸಲಾಗಿತ್ತು.

ಆದರೆ ಸದ್ಯ ಅನೂಪ್ ಅವರ ಜಾಗಕ್ಕೆ ಹೊಸದಾಗಿ ಬಂದ ಮ್ಯಾನೇಜರ್ ಈ ಒಂದೂವರೆ ಕೋಟಿ ಹಣದ ವ್ಯತ್ಯಾಸದ ಕುರಿತು ಪೊಲೀಸ್ ಠಾಣೆಯಲ್ಲಿ ಹಳೆಯ ಮ್ಯಾನೇಜರ್ ಮೇಲೆ ದೂರು ದಾಖಲಿಸಿದ್ದಾರೆ. ಆದರೆ, ಸಸ್ಪೆಂಡ್ ಆದ ಮರುದಿನದಿಂದಲೇ ಅನೂಪ್ ನಾಪತ್ತೆಯಾಗಿದ್ದು, ಪೊಲೀಸರು ಸದ್ಯ ತನಿಖೆ ಮುಂದುವರಿಸಿದ್ದಾರೆ.

ಎಲ್ಲಾ ಬ್ಯಾಂಕ್ ಮ್ಯಾನೇಜರ್‌ಗಳ ಲಾಗಿನ್‌ನಲ್ಲಿರುತ್ತಿದ್ದ ಸಿಸ್ಟಮ್ ಸಸ್ಪೆನ್ಸ್ ಖಾತೆಯನ್ನ ಬಳಸಿಕೊಂಡು ಅನೂಪ್ ಬೇಕಾಬಿಟ್ಟಿಯಾಗಿ ಲೋನ್‌ಗಳಿಗೆ ಹಣ ಮಂಜೂರು ಮಾಡಿಸಿಬಿಟ್ಟಿದ್ದಾರಂತೆ. ಆದರೆ ಈ ರೀತಿ ಎಷ್ಟು ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ ಅಥವಾ ಲೋನ್ ಮಂಜೂರು ಮಾಡಿಸಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಒಂದೂವರೆ ಕೋಟಿ ಹಣದ ವ್ಯತ್ಯಾಸ ಮಾತ್ರ ಸದ್ಯ ಬೆಳಕಿಗೆ ಬಂದಿದೆ. ಆದರೆ ಈ ಪ್ರಕರಣ ಎಸ್‌ಬಿಐ ಗ್ರಾಹಕರನ್ನ ಬೆಚ್ಚಿಬೀಳಿಸಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿಟ್ಟ ಹಣಕ್ಕೆ ಭದ್ರತೆ ಸಿಗಲಿದೆ ಎಂಬ ನಂಬಿಕೆಗೆ ಈ ಪ್ರಕರಣ ಕೊಡಲಿ ಪೆಟ್ಟು ನೀಡಿದೆ.

ವಿಕ ವೆಬ್ ಫಲಶ್ರುತಿ : ಮಂಗನಕಾಯಿಲೆ ಕುರಿತು ಕ್ರಮಕ್ಕೆ ಆರೋಗ್ಯಾಧಿಕಾರಿಗಳಿಗೆ ಸಚಿವ ಕೋಟ ಸೂಚನೆ

ಕೇವಲ ಸಣ್ಣಪುಟ್ಟ ಫೈನಾನ್ಸ್ ಕಂಪನಿಗಳಲ್ಲಿ, ಚಿಟ್ ಫಂಡ್‌ಗಳಲ್ಲಿ ಮಾತ್ರ ನಡೆಯುತ್ತಿದ್ದ ಹಣದ ಅವ್ಯವಹಾರಗಳು ಈಗ ರಾಷ್ಟ್ರೀಕೃತ ಬ್ಯಾಂಕುಗಳಿಗೂ ವ್ಯಾಪಿಸಿಬಿಟ್ಟಿದೆ. ಸದ್ಯ ಗ್ರಾಹಕರ ಹಿತ ಕಾಯುವ ಬ್ಯಾಂಕುಗಳ್ಯಾವುದು ಎನ್ನುವುದನ್ನ ದುರ್ಬಿನ್ ಹಾಕಿ ಹುಡುಕುವಂಥ ಪರಿಸ್ಥಿತಿಗೆ ಈ ದೋಖಾ ಪ್ರಕರಣಗಳು ತಂದಿಟ್ಟಿದ್ದು, ಕೂಡಲೇ ಪೊಲೀಸ್ ಇಲಾಖೆ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಿದೆ. ಆ ಮೂಲಕ ಗ್ರಾಹಕರ ಹಣವನ್ನ ವಂಚಕರಿಂದ ಮರಳಿ ಬ್ಯಾಂಕ್‌ಗೆ ಭರಿಸುವ ಕಾರ್ಯವಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ