ಆ್ಯಪ್ನಗರ

ಮಲೆನಾಡ ಗಿಡ್ಡ ಶ್ರೇಷ್ಠ ಗೋತಳಿ: ರಾಘವೇಶ್ವರ ಶ್ರೀ

ಹೊನ್ನಾವರ : ಭಾರತೀಯ ಗೋತಳಿಗಳು ಶ್ರೇಷ್ಠ. ಅದರಲ್ಲೂ ಮಲೆನಾಡ ಗಿಡ್ಡ ಅತ್ಯಂತ ಶ್ರೇಷ್ಠ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ನುಡಿದರು. ತಾಲೂಕಿನ ಕರ್ಕಿನಾಕಾದ ಹವ್ಯಕ ಸಭಾಭವನದಲ್ಲಿ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ ಮತ್ತು ರೋಟರಿ ಕ್ಲಬ್‌ ಆಶ್ರಯದಲ್ಲಿ ಭಾನುವಾರ ನಡೆದ ಮಲೆನಾಡ ಗಿಡ್ಡ ಹಬ್ಬದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಆತ್ಮ ಜ್ಞಾನಕ್ಕಿಂತ ದೊಡ್ಡ ಸಾಧನೆ

Vijaya Karnataka 18 Mar 2019, 5:00 am
ಹೊನ್ನಾವರ : ಭಾರತೀಯ ಗೋತಳಿಗಳು ಶ್ರೇಷ್ಠ. ಅದರಲ್ಲೂ ಮಲೆನಾಡ ಗಿಡ್ಡ ಅತ್ಯಂತ ಶ್ರೇಷ್ಠ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ನುಡಿದರು.
Vijaya Karnataka Web KWR-17 HNR 2
ಹೊನ್ನಾವರ ತಾಲೂಕಿನ ಕರ್ಕಿನಾಕಾದಲ್ಲಿ ನಡೆದ ಮಲೆನಾಡ ಗಿಡ್ಡ ಹಬ್ಬದ ಸಮಾರೋಪ ಸಮಾರಂಭದಲ್ಲಿ ಎ1 ಮತ್ತು ಎ2 ಹಾಲು-ಮಾನವ ಆರೋಗ್ಯ ಪುಸ್ತಕಗಳನ್ನು ರಾಘವೇಶ್ವರ ಶ್ರೀಗಳು ಬಿಡುಗಡೆ ಮಾಡಿದರು.

ತಾಲೂಕಿನ ಕರ್ಕಿನಾಕಾದ ಹವ್ಯಕ ಸಭಾಭವನದಲ್ಲಿ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ ಮತ್ತು ರೋಟರಿ ಕ್ಲಬ್‌ ಆಶ್ರಯದಲ್ಲಿ ಭಾನುವಾರ ನಡೆದ ಮಲೆನಾಡ ಗಿಡ್ಡ ಹಬ್ಬದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಆತ್ಮ ಜ್ಞಾನಕ್ಕಿಂತ ದೊಡ್ಡ ಸಾಧನೆ ಬೇರೆ ಯಾವುದೂ ಇಲ್ಲ. ತನ್ನೊಳಗಿನ ಮತ್ತು ತನ್ನ ಸುತ್ತಲಿನ ಜ್ಞಾನ ತಿಳಿದುಕೊಳ್ಳಬೇಕು. ಪ್ರಪಂಚದ ಎಲ್ಲ ಪ್ರಾಣಿಗಳು, ಗೋವುಗಳ ಬಗ್ಗೆ ತಿಳಿದುಕೊಂಡಾಗ ಮಲೆನಾಡ ಗಿಡ್ಡ ಹಸು ಶ್ರೇಷ್ಠ ಅನಿಸುತ್ತದೆ ಎಂದರು.

ಮಲೆನಾಡ ಗಿಡ್ಡವನ್ನು ಆಂಧ್ರದಿಂದ ಇಲ್ಲಿಗೆ ಬಂದು ಖರೀದಿಗೆ ಕೇಳುತ್ತಿದ್ದಾರೆ. ನೀವೇಕೆ ಹೊರಗೆ ಹಾಕುತ್ತಿದ್ದೀರಿ? ಎಂದೂ ಪ್ರಶ್ನಿಸಿ, ಅದರ ಮಹತ್ವವನ್ನು ವಿವರಿಸಿದರು.

ಗೋವಿನಲ್ಲಿ ಬರಿಗಣ್ಣಿಗೆ ಕಾಣದುದು ಅನಂತ. ಅದನ್ನು ಆಧ್ಯಾತ್ಮ ಗ್ರಂಥಗಳು ನಿರೂಪಣೆ ಮಾಡಿವೆ. ಕಾಣುವುದೂ ಇದೆ. ಅದನ್ನು ವಿಜ್ಞಾನ ತಿಳಿಸಲಿ ಎಂದರು.

ಎ1 ಮತ್ತು ಎ2 ಹಾಲು-ಮಾನವ ಆರೋಗ್ಯ ಹಾಗೂ ಗೋವಿನ ಕುರಿತ ಇತರ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮಲೆನಾಡ ಗಿಡ್ಡ ಹಸು ಸಾಕಣೆಯಲ್ಲಿ ಸಾಧನೆ ಮಾಡಿದವರಗೆ ಸನ್ಮಾನ ಮತ್ತು ಸ್ಪರ್ಧಾ ವಿಜೇತರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ಮುಖ್ಯಸ್ಥ ಕೆ.ಪಿ ರಮೇಶ, ಡಾ. ವಿಶ್ವನಾಥ, ಡಾ. ಎನ್‌.ಡಿ. ಶ್ರೀಧರ, ಡಾ. ತಿಮ್ಮಪ್ಪ, ಡಾ. ಗಣೇಶ, ಯೋಗೇಶ ರಾಯ್ಕರ, ಡಾ. ರಂಗನಾಥ ಪೂಜಾರಿ, ಡಾ.ಎಂ.ಪಿ.ಕರ್ಕಿ, ಸುವರ್ಣಗದ್ದೆ ಮಂಜುನಾಥ ಭಟ್‌, ರಾಜು ಹೆಬ್ಬಾರ, ಮುರಳೀಧರ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ