ಆ್ಯಪ್ನಗರ

ಮಲ್ಲಾಪುರ ಪೊಲೀಸ್‌ ಠಾಣೆ ದಾಖಲೆ

ಕಾರವಾರ: ಪ್ರವಾಹದ ಸಂಕಷ್ಟ ಆರಕ್ಷ ಕರಿಗೂ ತಪ್ಪಿಲ್ಲ. ತಾಲೂಕಿನ ಮಲ್ಲಾಪುರ ಪೊಲೀಸ್‌ ಠಾಣೆ ನೆರೆಯಲ್ಲಿ ಜಲಾವೃತಗೊಂಡು ಕಂಪ್ಯೂಟರ್‌ ಸೇರಿದಂತೆ ಅವಶ್ಯಕ ದಾಖಲೆಗಳು ನೀರಿನಲ್ಲಿ ಹಾಳಾಗಿವೆ.

Vijaya Karnataka 20 Aug 2019, 5:00 am
ಕಾರವಾರ: ಪ್ರವಾಹದ ಸಂಕಷ್ಟ ಆರಕ್ಷ ಕರಿಗೂ ತಪ್ಪಿಲ್ಲ. ತಾಲೂಕಿನ ಮಲ್ಲಾಪುರ ಪೊಲೀಸ್‌ ಠಾಣೆ ನೆರೆಯಲ್ಲಿ ಜಲಾವೃತಗೊಂಡು ಕಂಪ್ಯೂಟರ್‌ ಸೇರಿದಂತೆ ಅವಶ್ಯಕ ದಾಖಲೆಗಳು ನೀರಿನಲ್ಲಿ ಹಾಳಾಗಿವೆ.
Vijaya Karnataka Web KWR-19SUNEEL1


ಕದ್ರಾ ಅಣೆಕಟ್ಟಿನಿಂದ ಸುಮಾರು 5 ಕಿ.ಮೀ ಅಂತರದಲ್ಲಿರುವ ಮಲ್ಲಾಪುರ ಪೊಲೀಸ್‌ ಠಾಣೆ ಪ್ರವಾಹದಲ್ಲಿ ಜಲಾವೃತಗೊಂಡಿತ್ತು. ಪರಿಣಾಮ ಠಾಣೆಯೊಳಗಿನ ಕಂಪ್ಯೂಟರ್‌ಗಳು, ಕ್ರೈ ರಜಿಸ್ಟರ್ಸ್‌, ದಂಡ ಪಾವತಿ ಪುಸ್ತಕ, ಪೀಠೋಪಕರಣ ಸೇರಿದಂತೆ ಇನ್ನಿತರ ಅವಶ್ಯಕ ದಾಖಲೆಗಳು ನೀರಿನಲ್ಲಿ ಹಾಳಾಗಿವೆ. ಕೆಲ ವಸ್ತುಗಳು ಪ್ರವಾಹದಲ್ಲಿ ಕಣ್ಮರೆಯಾಗಿವೆ. ಪ್ರವಾಹದ ನೀರಿನಲ್ಲಿ ಒದ್ದೆಯಾಗಿ ಉಳಿದಿರುವ ದಾಖಲೆ ಮತ್ತು ಕೆಲ ವಸ್ತುಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತಿದೆ.

ಠಾಣೆ ಜಲಾವೃತಗೊಂಡಿದ್ದರೂ ಸಂತ್ರಸ್ತರ ರಕ್ಷ ಣಾ ಕಾರ್ಯದಲ್ಲಿ ತೊಡಗಿರುವ ಪೊಲೀಸರು ಪ್ರವಾಹ ನಿಂತ ನಂತರ ಠಾಣೆಯಲ್ಲಿಟ್ಟಿರುವ ತಮ್ಮ ಅಗತ್ಯ ವಸ್ತುಗಳ ಬಗ್ಗೆ ಗಮನ ಹರಿಸಿದ್ದಾರೆ. ಪಾರ್ಕಿಂಗ್‌ ಶೆಡ್‌ನಲ್ಲಿಟ್ಟದ್ದ ದ್ವಿಚಕ್ರ ವಾಹನಗಳು ಸುಮಾರು ಒಂದು ವಾರಗಳ ಕಾಲ ನೀರಿನಲ್ಲಿ ಮುಳುಗಿರುವುದರಿಂದ ದುರುಸ್ತಿಗೂ ಬಾರದಂತಾಗಿವೆ. ಬೂಟು, ಯೂನಿಫಾರ್ಮ್‌, ರೇನ್‌ಕೋಟ್‌, ಚಾರ್ಜಿಂಗ್‌ ಲೈಟ್‌ ಇತ್ಯಾದಿ ವಸ್ತುಗಳನ್ನು ಕಳೆದುಕೊಂಡಿರುವ ಪೊಲೀಸರಿಗೆ ಇವೆಲ್ಲದರ ಗಮನ ಇರಲಿಲ್ಲ. ಸಂತ್ರಸ್ತರ ರಕ್ಷ ಣೆಯಲ್ಲಿ ತೊಡಗಿಕೊಂಡು ಎರಡು ವಾರಗಳ ನಂತರ ಠಾಣೆಯಲ್ಲಿ ಹಾಳಾಗಿರುವ ವಸ್ತುಗಳ ಸರಿಪಡಿಸುವಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಠಾಣೆ ಸ್ಥಳಾಂತರ: ಪ್ರವಾಹದಲ್ಲಿ ಜಲಾವೃತಗೊಂಡು ದುರುಸ್ಥಿ ಸ್ಥಿತಿಯಲ್ಲಿರುವ ಮಲ್ಲಾಪುರ ಮುಖ್ಯ ರಸ್ತೆಯಲ್ಲಿರುವ ಪೊಲೀಸ್‌ ಠಾಣೆಯನ್ನು ಕೈಗಾ ವಸತಿ ಸಮುಚ್ಛಯ(ಕೈಗಾ ಟೌನ್‌ಶಿಪ್‌)ದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ವಸತಿ ಸಮುಚ್ಛಯದ ಮುಖ್ಯದ್ವಾರದಿಂದ ಸುಮಾರು 2 ಕಿ.ಮೀ ದೂರದಲ್ಲಿ ಪೊಲೀಸ್‌ ಠಾಣೆಯನ್ನು ಸ್ಥಳಾಂತರಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಟೌನ್‌ಶಿಪ್‌ ಪ್ರವೇಶಿಸಲು ಸೆಕ್ಯೂರಿಟಿ ಪರವಾನಿಗೆ ಪಡೆಯಬೇಕು. ಅಲ್ಲದೇ ಪೊಲೀಸ್‌ ಠಾಣೆಗೆ ದೂರದ ಮನೆಯೊಂದನ್ನು ನೀಡಲಾಗಿದೆ. ಹಾಗು ಮಾರ್ಗ ಸೂಚಿ ಫಲಕವನ್ನೂ ಅಳವಡಿಸಿಲ್ಲ. ಇದರಿಂದ ಪೊಲೀಸ್‌ ಠಾಣೆ ತಲುಪುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ