ಆ್ಯಪ್ನಗರ

ಕೊಳ್ಳೇಗಾಲ ಶಾಸಕ ಮಹೇಶ್‌ ಧ್ವನಿ ಅನುಕರಿಸಿ ಶಾಸಕಿ ರೂಪಾಲಿಗೆ ಪಂಗನಾಮ: ಎಷ್ಟು ಹಣ ವಂಚನೆ ಗೊತ್ತಾ?

ಸಾಮಾನ್ಯ ಜನರು ಸೈಬರ್‌ ಖದೀಮರ ಬಲೆಗೆ ಸಿಲುಕಿ ಮೋಸ ಹೋಗುವುದು ಸಾಮಾನ್ಯವಾಗಿದೆ. ಇದೀಗ ಈ ಸೈಬರ್‌ ಖದೀಮರು ಶಾಸಕರನ್ನು ಬಿಟ್ಟಿಲ್ಲ. ಹೌದು, ಶಾಸಕಿ ರೂಪಾಲಿ ನಾಯಕ್‌ಗೆ ಚಾಲಾಕಿಯೊಬ್ಬ 50,000 ಪಂಗನಾಮ ಹಾಕಿದ್ದಾನೆ. ಅದು ಕೂಡ ಕೊಳ್ಳೆಗಾಲ ಶಾಸಕ ಮಹೇಶ್‌ ಅವರ ಧ್ವನಿ ಬಳಸಿ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Vijaya Karnataka 20 Jul 2021, 7:23 am
ಉತ್ತರಕನ್ನಡ: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರ ಧ್ವನಿ ಅನುಕರಣೆ ಮಾಡಿ ಕಾರವಾರ ಶಾಸಕಿ ರೂಪಾಲಿ ನಾಯಕ್‌ ಅವರಿಂದ ಆರ್‌ಟಿಜಿಎಸ್‌ ಮೂಲಕ 50 ಸಾವಿರ ರೂ. ಹಣ ಪಡೆದಿದ್ದ ವಂಚಕನನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಕನಕಪುರ ತಾಲೂಕಿನ ಕಟ್ಟೆ ಮಾದಲವಾಡಿ ಗ್ರಾಮದ ಸಚ್ಚಿನ್‌ ಬಂಧಿತ ಆರೋಪಿ.
Vijaya Karnataka Web roopali-naik-600x330


ಈತ ಮೊದಲು ಶಾಸಕಿ ರೂಪಾಲಿ ನಾಯಕ್‌ ಅವರಿಗೆ ಕರೆ ಮಾಡಿ, ನಾನು ಶಾಸಕ ಎನ್‌.ಮಹೇಶ್‌ ಎಂದು ಹೇಳಿ ಹಣ ಕೇಳಿದ್ದಾನೆ. ನಂತರ ಮಹೇಶ್‌ ಅವರ ಪಿಎ ಎಂಬುದಾಗಿ ಹೇಳಿ, ಅರ್ಜೆಂಟಾಗಿ 50 ಸಾವಿರ ರೂ. ಹಣ ಕೊಡುವಂತೆ ಹೇಳಿದ್ದಾನೆ. ಸ್ವಲ್ಪ ಸಮಯ ಬಿಟ್ಟು ತನ್ನ ಸ್ನೇಹಿತ ಮಹೇಶ್‌ ಎಂಬಾತನ ಬ್ಯಾಂಕ್‌ ಖಾತೆ ನಂಬರ್‌ ಮೆಸೇಜ್‌ ಮಾಡಿದ್ದಾನೆ.

ರೂಪಾಲಿ ನಾಯಕ್‌ ಆ ಅಕೌಂಟ್‌ಗೆ 50 ಸಾವಿರ ರೂ. ಕಳುಹಿಸಿದ್ದಾರೆ. ಬಳಿಕ ಸ್ನೇಹಿತ ಮಹೇಶ್‌ಗೆ ಒಂದು ಸಾವಿರ ರೂ. ಕೊಟ್ಟು 49 ಸಾವಿರ ತೆಗೆದುಕೊಂಡಿದ್ದಾನೆ. ಇದಾದ ಬಳಿಕ ರೂಪಾಲಿ ನಾಯಕ್‌ ಅವರು ಮಹೇಶ್‌ಗೆ ಕರೆಮಾಡಿ, ನಿಮ್ಮ ಪಿಎಗೆ 50 ಸಾವಿರ ರೂ. ಕೊಟ್ಟಿರುವುದಾಗಿ ಹೇಳಿದ್ದಾರೆ.

ಪಲ್ಸ್‌ ಆಕ್ಸಿಮೀಟರ್‌ ಪೂರೈಕೆ ಸೋಗಿನಲ್ಲಿ ಮೋಸ: ಬೆಂಗಳೂರಿನ ಅಂಗಡಿ ಮಾಲೀಕರಿಗೆ ದೋಖಾ

ಆಗ ಮಹೇಶ್‌ ಅವರು, ನನ್ನ ಮೂವರು ಪಿಎಗಳು ಆಂತವರಲ್ಲ. ಎಲ್ಲೋ ಮೋಸ ಆಗಿದೆ ಎಂದು ತಿಳಿದು ಕೊಳ್ಳೇಗಾಲ ಪೊಲೀಸರ ಮೂಲಕ ತನಿಖೆ ನಡೆಸಿದಾಗ ವಂಚನೆ ವಿಷಯ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ವಂಚನೆ ಮಾಡಿರುವುದು ಬಯಲಾಗಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಹೇಶ್‌ ಅವರ ಪಿಎ ಮಹದೇವಸ್ವಾಮಿ ಈ ಸಂಬಂಧ ದೂರು ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ