ಆ್ಯಪ್ನಗರ

ಮಣಿವಣ್ಣನ್‌ ವರ್ಗ ಆಡಳಿತಾತ್ಮಕ ನಿರ್ಣಯ: ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ

ಇಲಾಖೆ ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸೇತುವೆಯಾಗಿ ಅವರು ಕೆಲಸ ಮಾಡಬೇಕು. ಪ್ರಸಕ್ತ ಪರಿಸ್ಥಿತಿಯಲ್ಲಿ ಯಾವುದೇ ಕಾರ್ಮಿಕರಿಗೆ ಅನ್ಯಾಯವಾಗಬಾರದು. ಕೆಲಸದಿಂದ ತೆಗೆದು ಹಾಕುವುದು, ಸಂಬಳ ಕಡಿತಗೊಳಿಸುವುದು ಮಾಡುವಂತಿಲ್ಲ.

Vijaya Karnataka 12 May 2020, 11:20 pm
ಕಾರವಾರ : ಕ್ಯಾ. ಮಣಿವಣ್ಣನ್‌ ಅವರನ್ನು ಕಾರ್ಮಿಕರ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವರ್ಗಾಯಿಸಿರುವುದು ಸರಕಾರದ ಆಡಳಿತಾತ್ಮಕ ನಿರ್ಣಯವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
Vijaya Karnataka Web ಶಿವರಾಮ್‌ ಹೆಬ್ಬಾರ್
ಶಿವರಾಮ್‌ ಹೆಬ್ಬಾರ್


ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ''ಮಣಿವಣ್ಣನ್‌ ಟ್ವಿಟರ್‌ನಲ್ಲಿ ಹಾಕಿದ್ದ ಕೆಲ ಮಾಹಿತಿಗಳು ಇಲಾಖೆಯ ಆಡಳಿತದಲ್ಲಿ ಗೊಂದಲ ಸೃಷ್ಟಿಸಲು ಕಾರಣವಾಗಿತ್ತು'' ಎಂದರು.

''ಇಲಾಖೆ ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸೇತುವೆಯಾಗಿ ಅವರು ಕೆಲಸ ಮಾಡಬೇಕು. ಪ್ರಸಕ್ತ ಪರಿಸ್ಥಿತಿಯಲ್ಲಿ ಯಾವುದೇ ಕಾರ್ಮಿಕರಿಗೆ ಅನ್ಯಾಯವಾಗಬಾರದು. ಕೆಲಸದಿಂದ ತೆಗೆದು ಹಾಕುವುದು, ಸಂಬಳ ಕಡಿತಗೊಳಿಸುವುದು ಮಾಡುವಂತಿಲ್ಲ. ಹಾಗಂತ ಉದ್ಯಮಗಳ ಆರ್ಥಿಕ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ಮಾಲೀಕರಿಗೂ ಕೆಲ ರಿಯಾಯಿತಿ ಕೊಡಬೇಕಾಗುತ್ತದೆ'' ಎಂದು ತಿಳಿಸಿದರು.

''ಮೊದಲು ಕಾರ್ಖಾನೆಗಳನ್ನು ಆರಂಭಿಸಲಿಕ್ಕಾದರೂ ಅವಕಾಶ ನೀಡಬೇಕು. ಆದರೆ ಈ ರೀತಿಯ ಸಮನ್ವಯತೆ ಸಾಧಿಸಲು ಕೆಲ ಸಾಮಾಜಿಕ ಜಾಲತಾಣದ ಮೆಸೇಜ್‌ಗಳು ಅಡ್ಡಿಯಾಗುತ್ತಿರುವ ಕಾರಣ ಮಣಿವಣ್ಣನ್‌ ಅವರನ್ನು ವರ್ಗಾಯಿಸಲಾಗಿದೆ'' ಎಂದು ಸಚಿವ ಶಿವರಾಮ ಹೆಬ್ಬಾರ ಸ್ಪಷ್ಟನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ