ಆ್ಯಪ್ನಗರ

ಅಧಿಕಾರಕ್ಕಿಂತ ಮನುಷ್ಯನ ನಡತೆ ಪ್ರಧಾನ

ಶಿರಸಿ : ಮನುಷ್ಯನ ನಡತೆ ಪ್ರಧಾನವೇ ಹೊರತು ಆತ ಹೊಂದಿರುವ ಅಧಿಕಾರವಾಗಲಿ, ಸಂಪತ್ತಾಗಲಿ ಮುಖ್ಯವಲ್ಲ ಎಂದು ದಕ್ಷಿಣ ಕನ್ನಡದ ಎಸಿಬಿ ಡಿವೈಎಸ್ಪಿ ಸುಧೀರ ಎಮ್‌. ಹೆಗಡೆ ಹೇಳಿದರು.

Vijaya Karnataka 18 Jul 2019, 5:00 am
ಶಿರಸಿ : ಮನುಷ್ಯನ ನಡತೆ ಪ್ರಧಾನವೇ ಹೊರತು ಆತ ಹೊಂದಿರುವ ಅಧಿಕಾರವಾಗಲಿ, ಸಂಪತ್ತಾಗಲಿ ಮುಖ್ಯವಲ್ಲ ಎಂದು ದಕ್ಷಿಣ ಕನ್ನಡದ ಎಸಿಬಿ ಡಿವೈಎಸ್ಪಿ ಸುಧೀರ ಎಮ್‌. ಹೆಗಡೆ ಹೇಳಿದರು.
Vijaya Karnataka Web SRS-17SRS2


ನಗರದ ಲಯನ್ಸ್‌ ಶಾಲೆಯ ಸಭಾಭವನದಲ್ಲಿ ಲಯನ್ಸ್‌ ಶಿಕ್ಷ ಣ ಸಂಸ್ಥೆ, ಲಯನ್ಸ್‌ ಕ್ಲಬ್‌ ಮತ್ತು ಲಯನೆಸ್‌ ಕ್ಲಬ್‌ ಸಹಯೋಗದಲ್ಲಿ 2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಲಾ ಸಂಸತ್‌ ಹಾಗೂ ವಿವಿಧ ಸ್ಟುಡೆಂಟ್‌ ಕ್ಲಬ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಕನಸಿರಬೇಕು. ಆ ಕನಸು ಸಾಧಿಸಲು ಛಲಬೀಡದೆ ಶ್ರಮ ಪಡಬೇಕು. ನಮ್ಮ ಕೆಲಸಗಳನ್ನು ನಾವು ಧಕ್ಷ ತೆ ಹಾಗೂ ಶೃದ್ಧೆಯಿಂದ ಮಾಡುತ್ತಾ ಸಂತಸ ಹೊಂದಬೇಕು ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ವಿಜೇತ ಅಧಿಕಾರಿ ಸುಧೀರ ಎಮ್‌. ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಡಾ.ಜಿ.ಎ.ಹೆಗಡೆ ಸೋಂದಾ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ರೂಪಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.

ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ತ್ರಿವಿಕ್ರಮ ಪಟವರ್ಧನ, ಉಪಾಧ್ಯಕ್ಷ ಎನ್‌.ವಿ. ಜಿ.ಭಟ್‌, ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಗುರುರಾಜ ಹೊನ್ನಾವರ, ಲಯನೆಸ್‌ ಅಧ್ಯಕ್ಷೆ ವರ್ಷಾ ಪಟವರ್ಧನ್‌, ಕಾರ್ಯದರ್ಶಿ ಸುಮಂಗಲಾ ಹೆಗಡೆ, ಖಜಾಂಚಿ ಸುಮಲತಾ ಅಮಿನ್‌, ಲಿಯೋ ಅಧ್ಯಕ್ಷೆ ವಿಂದ್ಯಾ ಹೆಗಡೆ, ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ವಿಶ್ವನಾಥ ಭಟ್‌, ಪ್ರೌಢಶಾಲಾ ಮುಖ್ಯಾಧ್ಯಾಪಕ ಮೋಹನ್‌ ಹೆಗಡೆ, ಲಯನ್ಸ್‌ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ಗಣಪತಿ ಗೌಡ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ದೀಪ್ತಿ ಎಸ್‌.ಭಟ್‌, ಸುಮೇಧಾ ಹಿರೇಮಠ, ಅನುಶ್ರೀ ಭಟ್‌, ವಿಭಾ ಹೆಗಡೆ, ಮಾನಸಾ ನಾಯ್ಕ ಹಾಗೂ ಐಶ್ವರ್ಯ ಖುರಾನ ಕ್ಲಬ್‌ಗಳ ಪರಿಚಯ ಮಾಡಿದರು. ವಿದ್ಯಾರ್ಥಿ ಯೂನಿಯನ್‌ ಅಧ್ಯಕ್ಷೆ ವರ್ಷಾ ಪಿ. ಹೆಗಡೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಚ್ಚಿಗೆ ಅಂಕ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಪ್ರತಿಭಾಕಾರಂಜಿಯಲ್ಲಿ ಪ್ರಥಮ ರಾಜ್ಯಮಟ್ಟದ ಸಾಧನೆ ಮಾಡಿದ ಭೂಮಿ ದಿನೇಶ ಹೆಗಡೆ ಅವರ ಶುಶ್ರಾವ್ಯ ಹಾಡು ಗಮನಸೆಳೆಯಿತು. ಶಿಕ್ಷ ಣ ಸಂಸ್ಥೆ ಗೌರವ ಕಾರ್ಯದರ್ಶಿ ಎಂ.ಎಂ.ಭಟ್ಟ ಕಾರೇಕೊಪ್ಪ ಸ್ವಾಗತಿಸಿದರು. ಸಹಶಿಕ್ಷ ಕಿಯರಾದ ಚೈತ್ರಾ ಹೆಗಡೆ ಮತ್ತು ಸೌಜನ್ಯ ಹೆಗಡೆ ನಿರೂಪಿಸಿದರು. ಸಹಶಿಕ್ಷ ಕಿ ರೋಹಿಣಿ ಹೆಗಡೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ