ಆ್ಯಪ್ನಗರ

ಶಿರಸಿ: ಗಾಂಜಾ ಸೇವನೆ ಸಾಬೀತು, 12 ಮಂದಿ ಬಂಧನ

ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಈ ತರಹದ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಮಾಣದಲ್ಲ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka Web 24 Nov 2021, 9:35 pm
ಶಿರಸಿ: ನಗರದ ಹೊಸ ಮಾರುಕಟ್ಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ತಡೆಯುವ ಉದ್ದೇಶದಿಂದ ಗಾಂಜಾ ಪೆಡ್ಲರ್‌ಗಳು ಹಾಗೂ ಮಾದಕ ವ್ಯಸನಿಗಳ ವಿರುದ್ಧದ ನಸುಕಿನ ಜಾವದ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ನಗರದ ವಿವಿಧ ಸ್ಥಳಗಳಲ್ಲಿ 15 ಮಂದಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆಯ ಬಗ್ಗೆ ವೈದ್ಯಕೀಯ ಪರೀಕ್ಷೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು.
Vijaya Karnataka Web ಪೊಲೀಸ್
ಪೊಲೀಸ್‌


ಈ ಪರೀಕ್ಷಾ ವರದಿಯಲ್ಲಿ ಪರೀಕ್ಷೆಗೊಳಪಡಿಸಿದ 15 ಆರೋಪಿಗಳ ಪೈಕಿ 12 ವ್ಯಕ್ತಿಗಳು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಮುರುಡೇಶ್ವರ ಶಿವನ ಮೂರ್ತಿ ಮೇಲೆ ಐಸಿಸ್ ಕಾಕದೃಷ್ಟಿ: ಪೊಲೀಸ್ ಭದ್ರತೆ ಹೆಚ್ಚಳ, ಸಮುದ್ರದಲ್ಲೂ ಕಣ್ಗಾವಲು

ಇಂದಿರಾನಗರದ ಅಜೀದ ಮೊಹಮ್ಮದ ರಫೀಕ, ಅಯ್ಯಪ್ಪ ನಗರದ ರೋಷನ ಪಾಲೇಕರ, ವಿವೇಕಾನಂದ ನಗರದ ಪೃಥ್ವಿ ಮನೋಜ ನಾರ್ವೇಕರ, ಗಣೇಶನಗರ ದ ಪ್ರಸನ್ನ ಗಣಪತಿ ಕುರಬರ, ಕಸ್ತೂರಬಾ ನಗರದ ಮೊಹಮ್ಮದ ನಜೀರ ಅಹ್ಮದ ಶೇಖ ಮತ್ತು ಮೊಹಮ್ಮದ ಯಾಸೀನ ನಜೀರ ಅಹ್ಮದ ಶೇಖ , ದೀಪಕ ಪರಮೇಶ್ವರ ಕೇರಳಕರ, ಕೋಟೆಕೆರೆ ಬಡಾವಣೆಯ ಸಮೀರ ಅಹ್ಯದ ಅಬ್ದುಲ ಘನಿ, ಇಂದಿರಾನಗರದ ಅಬ್ದುಲರೆಹಮಾನ, ನೆಹರೂ ನಗರದ ಶಿವಮೂರ್ತಿ ನಾಯ್ಕ, ಕಸ್ತೂರಬಾ ನಗರದ ಪ್ರಜಲಖಾನ ಮತ್ತು ಇಂದಿರಾನಗರದ ಮನ್ಸೂರ ಕರೀಂ ಸಾಬ್ ಬಂಧಿತ ಆರೋಪಿಗಳು.

ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

ಈ ವಿಶೇಷ ಕಾರ್ಯಾಚರಣೆ ಪೊಲೀಸ ಉಪಾಧೀಕ್ಷಕ ರವಿ ಡಿ. ನಾಯ್ಡ ಮತ್ತು ಸಿಪಿ ಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಪಿಎಸ್ಐ ಭೀಮಾಶಂಕರ ಹಾಗೂ ಸಿಬ್ಬಂದಿ ನಡೆಸಿದರು.

ಜೀವ, ಜೀವನವನ್ನೇ ಕಿತ್ತುಕೊಂಡ ರಣಭೀಕರ ಮಳೆ: ಉತ್ತರ ಕನ್ನಡದಲ್ಲಿ ಭತ್ತ ಬೆಳೆದ ಅನ್ನದಾತನಿಗೆ ಕಣ್ಣೀರೇ ಗತಿ

ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಈ ತರಹದ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಮಾಣದಲ್ಲ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ . ಡಿ. ಪನ್ನೇಕರ ತಿಳಿಸಿದ್ದಾರೆ,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ