ಆ್ಯಪ್ನಗರ

ಮಾರಿಕಾಂಬಾ ದೇಗುಲದ ಹಳೆ ಪಟ್ಟದ ಕೋಣ ಸಾವು

ನಾಡಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನದ ಹಳೆಯ ಪಟ್ಟದ ಕೋಣ ಗುರುವಾರ ಬೆಳಗಿನ ಜಾವ ಮೃತಪಟ್ಟಿದೆ. ದೇವಸ್ಥಾನದ ಧರ್ಮದರ್ಶಿ ಮಂಡಳಿಯವರು ಸೇರಿದಂತೆ ನೂರಾರು ಮಂದಿ ಕೋಣನ ಅಂತಿಮ ದರ್ಶನ ಪಡೆದರು. ಬನವಾಸಿ ರಸ್ತೆಯ ಶ್ರೀ ದೇವಸ್ಥಾನದ ಜಾತ್ರಾ ವಿಸರ್ಜನಾ ಪೀಠದ ಸಮೀಪದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Vijaya Karnataka 20 Jul 2018, 8:36 am
ಶಿರಸಿ: ನಾಡಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನದ ಹಳೆಯ ಪಟ್ಟದ ಕೋಣ ಗುರುವಾರ ಬೆಳಗಿನ ಜಾವ ಮೃತಪಟ್ಟಿದೆ. ದೇವಸ್ಥಾನದ ಧರ್ಮದರ್ಶಿ ಮಂಡಳಿಯವರು ಸೇರಿದಂತೆ ನೂರಾರು ಮಂದಿ ಕೋಣನ ಅಂತಿಮ ದರ್ಶನ ಪಡೆದರು. ಬನವಾಸಿ ರಸ್ತೆಯ ಶ್ರೀ ದೇವಸ್ಥಾನದ ಜಾತ್ರಾ ವಿಸರ್ಜನಾ ಪೀಠದ ಸಮೀಪದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕೋಣನ ನಿರ್ವಹಣೆ, ಸಲಹುವ ಕಾರ್ಯದಲ್ಲಿ ತೊಡಗಿದ್ದ ಶಾಂತವ್ವ ಹಾಗೂ ಕುಟುಂಬದವರು ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಿದರು. 1996ರಿಂದ 22 ವರ್ಷಗಳ ಕಾಲ ಇದು ಪಟ್ಟದ ಕೋಣವಾಗಿತ್ತು. ಇದಕ್ಕೆ 25 ವರ್ಷ ವಯಸ್ಸಾಗಿತ್ತು.
Vijaya Karnataka Web sirsi bull


1930ರಲ್ಲಿ ಕೋಣ ಬಲಿ ಪದ್ಧತಿ ರದ್ದುಗೊಂಡ ನಂತರ ಪಟ್ಟವೇರಿದ 5ನೇ ಕೋಣವಿದು.ಜಾತ್ರಾ ಹಾಗೂ ಶ್ರೀ ದೇವಿಯ ವಿವಾಹ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಪಟ್ಟದ ಕೋಣಕ್ಕೆ ವಿಶೇಷ ಪ್ರಾಧಾನ್ಯತೆ ಇದ್ದು ಹಲವು ಸಮುದಾಯಗಳು ದೇವಿಯ ದರ್ಶನದೊಂದಿಗೆ ಕೋಣನ ದರ್ಶನ ಪಡೆದು ಪುನೀತರಾಗುವ ಭಾವನಾತ್ಮಕ ನಂಬಿಗೆಯ ಆಚರಣೆಗಳು ಇಂದಿಗೂ ರೂಢಿಯಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ