ಆ್ಯಪ್ನಗರ

ವೆಂಕಟಾಪುರ ಹೊಳೆಯಲ್ಲಿಮಾಂಸ ತ್ಯಾಜ್ಯ

ಭಟ್ಕಳ : ತಾಲೂಕಿನ ಪ್ರಮುಖ ಹೊಳೆಗಳಲ್ಲಿಒಂದಾದ ವೆಂಕಟಾಪುರ ಹೊಳೆ ದಿನದಿಂದ ದಿನಕ್ಕೆ ಮಲೀನವಾಗುತ್ತಿದೆ. ತಾಲೂಕಿನ ವಿವಿಧೆಡೆ ಕೋಳಿ, ಕುರಿ ಇತ್ಯಾದಿ ಮಾಂಸದ ಅಂಗಡಿಯ ತ್ಯಾಜ್ಯಗಳನ್ನು ಹೊಳೆಗೆ ತಂದು ಸುರಿಯಲಾಗುತ್ತಿದ್ದು, ಸುತ್ತಮುತ್ತಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

Vijaya Karnataka 2 Dec 2019, 5:00 am
ಭಟ್ಕಳ : ತಾಲೂಕಿನ ಪ್ರಮುಖ ಹೊಳೆಗಳಲ್ಲಿಒಂದಾದ ವೆಂಕಟಾಪುರ ಹೊಳೆ ದಿನದಿಂದ ದಿನಕ್ಕೆ ಮಲೀನವಾಗುತ್ತಿದೆ. ತಾಲೂಕಿನ ವಿವಿಧೆಡೆ ಕೋಳಿ, ಕುರಿ ಇತ್ಯಾದಿ ಮಾಂಸದ ಅಂಗಡಿಯ ತ್ಯಾಜ್ಯಗಳನ್ನು ಹೊಳೆಗೆ ತಂದು ಸುರಿಯಲಾಗುತ್ತಿದ್ದು, ಸುತ್ತಮುತ್ತಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Vijaya Karnataka Web meat waste at venkatapur stream
ವೆಂಕಟಾಪುರ ಹೊಳೆಯಲ್ಲಿಮಾಂಸ ತ್ಯಾಜ್ಯ

ನಿತ್ಯವೂ ತ್ಯಾಜ್ಯಗಳ ಮೇಲೆ ಕಣ್ಣಿಟ್ಟು, ನೂರಾರು ಸಂಖ್ಯೆಯಲ್ಲಿಹದ್ದುಗಳು ಹೊಳೆಯ ಪರಿಸರದಲ್ಲಿಹಾರಾಟ ನಡೆಸಿವೆ. ಈ ಹೊಳೆ ಸಮುದ್ರವನ್ನು ಸೇರುತ್ತಿದ್ದು, ಮೀನುಗಾರಿಕೆಯ ಮೇಲೂ ಪರಿಣಾಮವನ್ನು ಬೀರುತ್ತಿದೆ. ಸಾಮಾನ್ಯ ಜನರು ಹೊಳೆಗೆ ಇಳಿಯಲು ಹೇಸಿಗೆ ಪಡುವಂತಾಗಿದೆ. ಹೆದ್ದಾರಿಯ ಸವಾರರಿಗೂ ಹದ್ದುಗಳ ಹಾರಾಟ ಆತಂಕವನ್ನು ತಂದಿದೆ. ಹೆದ್ದಾರಿಯಲ್ಲಿನಿತ್ಯ ಓಡಾಡುವ ಸ್ಥಳೀಯರಂತೂ ಇಲ್ಲಿನ ಅಧಿಕಾರಿಗಳ ಮೇಲೆ ಕೆಂಡ ಕಾರುತ್ತಿದ್ದಾರೆ.

ಸ್ಥಳೀಯ ಆಡಳಿತ ಈ ಬಗ್ಗೆ ಮೌನ ವಹಿಸಿದೆ. ತ್ಯಾಜ್ಯ ವಿಲೇವಾರಿಯ ಬಗ್ಗೆ ಬಹಿರಂಗವಾಗಿ ಅದೆಷ್ಟೇ ಪಾಠ ಹೇಳುತ್ತಿದ್ದರೂ, ಪಾಲಿಸುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಊರನ್ನೇ ಸ್ಮಶಾನವನ್ನಾಗಿ ಮಾಡುವ ಇಂತಹ ಪ್ರವೃತ್ತಿಗಳಿಗೆ ಉತ್ತೇಜನ ಸಿಗುತ್ತಲೇ ಇದ್ದು, ಈ ಬಗ್ಗೆ ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ