ಆ್ಯಪ್ನಗರ

ಕನಿಷ್ಟ 35 ಗರಿಷ್ಠ 95 ಸ್ವಾಬ್‌ ಕಲೆಕ್ಷನ್‌

ಯಲ್ಲಾಪುರ: ಕೊರೊನಾ ಹಿನ್ನೆಲೆಯಲ್ಲಿಜನರಿಗೆ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿಉತ್ತಮ ಸ್ಪಂದನೆ, ಚಿಕಿತ್ಸೆ ದೊರಕುತ್ತಿದೆ. ಕೊರೊನಾ ಚಿಕಿತ್ಸೆಗಾಗಿ ಸೋಂಕಿತರನ್ನು ಕಾರವಾರಕ್ಕೆ ಕಳಿಸಲಾಗುತ್ತಿದೆ.

Vijaya Karnataka 13 Jul 2020, 5:00 am
ಯಲ್ಲಾಪುರ: ಕೊರೊನಾ ಹಿನ್ನೆಲೆಯಲ್ಲಿಜನರಿಗೆ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿಉತ್ತಮ ಸ್ಪಂದನೆ, ಚಿಕಿತ್ಸೆ ದೊರಕುತ್ತಿದೆ. ಕೊರೊನಾ ಚಿಕಿತ್ಸೆಗಾಗಿ ಸೋಂಕಿತರನ್ನು ಕಾರವಾರಕ್ಕೆ ಕಳಿಸಲಾಗುತ್ತಿದೆ.
Vijaya Karnataka Web 12 YLP 4_24
ಯಲ್ಲಾಪುರ ತಾಲೂಕು ಆಸ್ಪತ್ರೆ.


50 ಬೆಡ್‌ಗಳನ್ನು ಕೊರೊನಾ ಸೋಂಕು ಶಂಕಿತರಿಗೆ ಇಡಲಾಗಿದ್ದು, ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ. ಅಲ್ಲದೆ, ಪಟ್ಟಣದ ಕಾಳಮ್ಮನಗರದ ಹಾಸ್ಟೆಲ್‌ ಒಂದರಲ್ಲಿ 50 ಹಾಸಿಗೆಗಳ ಕೋವಿಡ್‌ ಕೇಂದ್ರ ತೆರೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರವಳಿಕೆ ತಜ್ಞರು ಹಾಗೂ ಫಿಜೀಷಿಯನ್‌ಗಳ ಕೊರತೆ ಇದೆ. ಉಳಿದ ವಿಭಾಗಗಳಲ್ಲಿತಜ್ಞ ವೈದ್ಯರಿದ್ದಾರೆ. ಮೂಲಭೂತ ಸೌಲಭ್ಯ ಚನ್ನಾಗಿದೆ. ಡಯಾಲಿಸೀಸ್‌ ಕೇಂದ್ರಕ್ಕೆ ಬೇಡಿಕೆ ಇದೆ. 100 ಹಾಸಿಗೆಗಳ ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿದೆ. ನಿತ್ಯ ಕನಿಷ್ಟ 35, ಗರಿಷ್ಠ 95 ರವರೆಗೆ ಸ್ವಾಬ್‌ ಕಲೆಕ್ಷನ್‌ ನಡೆಯುತ್ತಿದೆ. ಹೃದಯಾಘಾತದಿಂದ ಸತ್ತ ವೃದ್ಧೆಗೆ ಕೊರೊನಾ ಪಾಸಿಟಿವ್‌ ದಾಖಲಾಗಿದೆ. ಕಿರವತ್ತಿ ಕೆಲ ಭಾಗಗಳಲ್ಲಿ, ತೆಲಂಗಾರ್‌ ಭಾಗದಲ್ಲಿಸೀಲ್‌ ಡೌನ್‌ ಮಾಡಲಾಗಿತ್ತು. ಭಾನುವಾರದವರೆಗೆ ಒಟ್ಟು 875 ಸ್ವಾಬ್‌ ಟೆಸ್ಟ್‌ ಆಗಿದೆ. ಇರದಲ್ಲಿ39 ಪಾಸಿಟಿವ್‌, 648 ನೆಗೆಟಿವ್‌ ಬಂದಿವೆ. 13 ಜನ ಕ್ವಾರಂಟೈನ್‌ ಇದ್ದು, 9 ಚಿಕಿತ್ಸೆಯಲ್ಲಿದ್ದು, 29 ಜನರು ಗುಣಮುಖರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ