ಆ್ಯಪ್ನಗರ

ಜಿಲ್ಲಾಸ್ಪತ್ರೆಗೆ ಶಾಸಕಿ ರೂಪಾಲಿ ನಾಯ್ಕ ದಿಢೀರ್‌ ಭೇಟಿ

ಕಾರವಾರ : ಇಲ್ಲಿನ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್‌ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ, ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Vijaya Karnataka 4 Jun 2019, 5:00 am
ಕಾರವಾರ : ಇಲ್ಲಿನ ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್‌ ಭೇಟಿ ನೀಡಿದ ಶಾಸಕಿ ರೂಪಾಲಿ ನಾಯ್ಕ, ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web KWR-3 GURUDATT 2B
ಕಾರವಾರದ ಜಿಲ್ಲಾಸ್ಪತ್ರೆಗೆ ಶಾಸಕಿ ರೂಪಾಲಿ ನಾಯ್ಕ ಮಂಗಳವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಶಾಸಕಿ ಆಸ್ಪತ್ರೆಯ ಹೊರ ರೋಗಿಗಳು ಹಾಗೂ ಒಳ ರೋಗಿಗಳ ವಿಭಾಗ, ಹೆರಿಗೆ ವಿಭಾಗ, ಡಯಾಲಿಸಿಸ್‌, ಎಲುಬು ಮತ್ತು ಕೀಲು ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿನ ಸಮಸ್ಯೆಗಳನ್ನು ನೋಡಿ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಡರು. ಎಲುಬು ಮತ್ತು ಕೀಲು ವಿಭಾಗದಲ್ಲಿ ಶೌಚಾಲಯಕ್ಕೆ ಕಮೋಡ್‌ ಅಳವಡಿಸದ ಬಗ್ಗೆ ಆಸ್ಪತೆಯ ಆಡಳಿತಾಧಿಕಾರಿಗಳನ್ನು ತೀವೃ ತರಾಟೆಗೆ ತೆಗೆದುಕೊಂಡರು. ಕೂಡಲೇ ಕಮೋಡ್‌ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಸರ್ಜನ್‌ ಅವರಿಗೆ ಸೂಚಿಸಿದರು.

ಇನ್ನು, ಹೊರ ರೋಗಿಗಳ ವಿಭಾಗ, ಹೆರಿಗೆ ವಿಭಾಗ ಮೊದಲಾದೆಡೆ ಫ್ಯಾನ್‌, ಲೈಟ್‌ಗಳು ಹಾಳಾಗಿದ್ದು, ಅವುಗಳನ್ನು ಕೂಡಲೇ ರಿಪೇರಿ ಮಾಡಿಸಬೇಕು ಎಂದು ಸೂಚನೆ ನೀಡಿದರು. ಹೆರಿಗೆ ವಿಭಾಗದಲ್ಲಿ ತಪಾಸಣೆಗೆ ಬರುವ ಮಹಿಳೆಯರಿಗೆ ಕೂರಲು ಆಸನ ವ್ಯವಸ್ಥೆಯನ್ನೂ ಮಾಡುವಂತೆ ಸೂಚಿಸಿದರು.

ಈ ವೇಳೆ ನಗರಸಭೆಯ ಸದಸ್ಯರಾದ ರೇಷ್ಮಾ ಮಾಳ್ಸೇಕರ್‌, ಡಾ.ನಿತಿನ್‌ ಪಿಕಳೆ, ಗಣಪತಿ ಉಳ್ವೇಕರ್‌, ರಾಜೇಂದ್ರ ನಾಯಕ, ಕಿಶನ್‌ ಕಾಂಬ್ಳೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ