ಆ್ಯಪ್ನಗರ

ಧರಣಿಯಲ್ಲಿ ಶಾಸಕ ಸುನಿಲ್‌ ನಾಯ್ಕ ಭಾಗಿ

ಭಟ್ಕಳ : ಭಟ್ಕಳ ತಾಲೂಕಿನ ಶಿರಾಲಿಯಲ್ಲಿ 45 ಮೀ. ಹೆದ್ದಾರಿಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಶನಿವಾರ ಶಾಸಕ ಸುನಿಲ್‌ ನಾಯ್ಕ ಪಾಲ್ಗೊಂಡಿದ್ದರು.

Vijaya Karnataka 17 Feb 2019, 5:00 am
ಭಟ್ಕಳ : ಭಟ್ಕಳ ತಾಲೂಕಿನ ಶಿರಾಲಿಯಲ್ಲಿ 45 ಮೀ. ಹೆದ್ದಾರಿಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಶನಿವಾರ ಶಾಸಕ ಸುನಿಲ್‌ ನಾಯ್ಕ ಪಾಲ್ಗೊಂಡಿದ್ದರು.
Vijaya Karnataka Web KWR-16BKL6


ಅವರು ಮಾತನಾಡಿ, ಶಿರಾಲಿಯಲ್ಲಿ 45ಮೀ. ಹೆದ್ದಾರಿಯ ಅಗತ್ಯದ ಕುರಿತಂತೆ ಇಲ್ಲಿನ ಪ್ರಮುಖರೊಂದಿಗೆ ಕಾರವಾರಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು, ಕೇಂದ್ರ ಭೂ ಅಭಿವೃದ್ಧಿ ಸಚಿವರಾದ ಗಡ್ಕರಿಯವರಿಗೆ ಶಿರಾಲಿಯ ಜನರ ಬೇಡಿಕೆಯನ್ನು ತಿಳಿಸಿದ್ದಾರೆ. ಕರ್ನಾಟಕ ಸರಕಾರ ಭೂಸ್ವಾಧೀನ ಪಡಿಸಿಕೊಂಡು ಕೇಂದ್ರಕ್ಕೆ ನಿರಪೇಕ್ಷ ಣಾ ಪತ್ರವನ್ನು ನೀಡಬೇಕಾಗಿದೆ. ರಾಜ್ಯ ಸರಕಾರದ ಅಧಿವೇಶನದ ನಡುವೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು 45ಮೀ. ಅಗಲದ ರಸ್ತೆ ಮಾಡುವುದಾಗಿ ಭರವಸೆ ನೀಡುವವರೆಗೂ ಹೋರಾಟವನ್ನು ಮುಂದುವರೆಸಲಾಗುವುದು ಎಂದು ವಿವರಿಸಿದರು. ತಹಸೀಲ್ದಾರ ವಿ.ಎನ್‌.ಬಾಡ್ಕರ್‌ ಸ್ಥಳದಲ್ಲಿ ಹಾಜರಿದ್ದರು. ಇದಕ್ಕೂ ಪೂರ್ವದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಪ್ರವಾಸದಲ್ಲಿರುವ ಉತ್ತರ ಭಾರತದ ಕೆಲವು ಸಾಧುಗಳೂ ಮಾರ್ಗ ಮಧ್ಯೆ ಶಿರಾಲಿಯಲ್ಲಿ ಇಳಿದು ಧರಣಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ, ಸಾಹಿತಿ ಆರ್‌.ವಿ.ಸರಾಫ್‌, ಪ್ರಭಾಕರ ನಾಯ್ಕ, ಭಾಸ್ಕರ ದೈಮನೆ, ಮೋಹನ ದೇವಡಿಗ, ಪ್ರಮೋದ ಜೋಷಿ, ಶಂಕರ ನಾಯ್ಕ ಕಟಗಾರ ಕೊಪ್ಪ, ರಾಮಚಂದ್ರ ನಾಯ್ಕ ಬೆಂಗ್ರೆ, ನಾಗಪ್ಪ ನಾಯ್ಕ, ನಾಗೇಶ ದೇವಡಿಗ, ಕುಪ್ಪಯ್ಯ ಗೊಂಡ ಮೊದಲಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ